Kannada Serials

ರಂಗೋಲಿ ಧಾರವಾಹಿ ಖ್ಯಾತಿಯ ನಟಿ ಈಗ ಏನ್ ಮಾಡ್ತಿದ್ದಾರೆ ನೋಡಿ

ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಜನರ ಮನಸ್ಸನ್ನು ಗೆದಿದ್ದವು.ಆ ಧಾರಾವಾಹಿಗಳು ಇಂದಿಗೂ ಕೂಡ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ.ಅಂತಹ ಧಾರಾವಾಹಿಗಳಲ್ಲಿ ರಂಗೋಲಿ ಹಾಗೂ ಬದುಕು ಧಾರಾವಾಹಿಗಳು ಬರುತ್ತವೆ.ಇನ್ನು ಈ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಮುಖ ನಟರಲ್ಲಿ ಸಿರಿಜ ಕೂಡ ಒಬ್ಬರು.ಈ ನಟಿ ರಂಗೋಲಿ ಹಾಗೂ ಬದುಕು ಧಾರವಾಹಿಗಳಲ್ಲಿ ನಟಿಸಿ ಖ್ಯಾತಿಯನ್ನ ಪಡೆದಿದ್ದರು.

ಸಿರಿಜ ಅವರು ಹಲವು ಕನ್ನಡ ಸಿನಿಮಾಗಳಲೂ ನಟಿಸಿದ್ದಾರೆ ಅಲ್ಲದೆ ತೆಲುಗು, ತಮಿಳುನಲ್ಲಿಯೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.ಇವರು ಸುಮಾರು 30 ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿದ್ದಾರೆ.ಇನ್ನು ಅವರ ಅನುಭವಾಗಳನ್ನ ಅಂಚಿಕೊಂಡ ಅವರು ನನಗೆ ಕಲಾವಿದೆ ಆಗಬೇಕು ಎಂಬ ಆಸೆ ಇತ್ತು.ಜನರು ಗುರುತಿಸಬೇಕೆಂಬ ಪಾತ್ರ ಮಾಡಬೇಕು ಎಂದುಕೊಂಡಿದ್ದೆ.ಈಗಾಗಿ ನನಗೆ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.

ಎಲ್ಲಿ ಒಳ್ಳೆಯ ಪಾತ್ರ ಸಿಗುತೋ ಅಲ್ಲಿ ಕೆಲಸ ಮಾಡಲು ಶುರು ಮಾಡಿದೆ ಎಂದು ಹೇಳಿದ್ದಾರೆ.ಇನ್ನು ಹಲವಾರು ಜನರು ಇಂದಿಗೂ ಕೂಡ ಹಳೆಯ ಧಾರವಾಹಿಗಳನ್ನ ಯುಟ್ಯೂಬ್ ನಲ್ಲಿ ಹಾಕಿದರೆ ನೋಡುತ್ತೆವೆ ಎಂದು ಹೇಳಿದಾಗ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಸಿರಿಜ ಅವರು ಹೇಳಿದ್ದಾರೆ.
ಈ ಮದ್ಯೆ ಯಾವುದೇ ಅವಕಾಶ ಬಂದಿಲ್ಲ ಸದ್ಯಕ್ಕೆ ಗಂಡ ಮನೆ ಮಕ್ಕಳು ಎಂದು ಕಾಲ ಕಳೆಯುತ್ತಿದೆನೆ ಎಂದು ಹೇಳಿದ್ದಾರೆ

Most Popular

To Top