Kannada Serials

ಗಟ್ಟಿಮೇಳ ಸೆಟ್ ನಲ್ಲಿ ಕೊನೆಯ ದಿನದ ಚಿತ್ರೀಕರಣ ಮುಗಿಸಿದ ನಟಿ ಸ್ವಾತಿ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗಟ್ಟಿಮೇಳ ಧಾರಾವಾಹಿ. ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿಶಾರ ಅಭಿನಯ ಬಹಳ ಇಷ್ಟವಾಗಿದೆ. ಗಟ್ಟಿಮೇಳದಲ್ಲಿ ಅಕ್ಕ ತಂಗಿಯರ ಬಾಂಧವ್ಯ. ಅಮೂಲ್ಯರ ತಾಯಿ ಪಾತ್ರದಲ್ಲಿ ನಟಿಸಿರುವ ಸುಧಾ ನರಸಿಂಹರಾಜು ಅವರ ಅಭಿನಯ, ಜೊತೆಗೆ ವೇದಾಂತ್ ಮನೆಯವರ ಅಭಿನಯ ಎಲ್ಲವನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಗಟ್ಟಿಮೇಳ ಧಾರಾವಾಹಿಯಲ್ಲಿ ಸುಹಾಸಿನಿ ಪಾತ್ರ ಮಾಡುತ್ತಿದ್ದ ನಟಿ ಸ್ವಾತಿ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಸ್ವತಃ ನಟಿ ಸ್ವಾತಿ ಅವರೇ ಸ್ಪಷ್ಟನೆ ಸಹ ಕೊಟ್ಟಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ವೈಯಕ್ತಿಕ ಕಾರಣಗಳಿಂದ ಸೀರಿಯಲ್ ಇಂದ ಹೊರಬಂದಿರುವುದಾಗಿ ಹೇಳಿದ್ದರು ನಟಿ ಸ್ವಾತಿ.

https://www.instagram.com/p/CVLIphRBAI1/?utm_medium=copy_link

ಇದೀಗ ಗಟ್ಟಿಮೇಳ ಚಿತ್ರತಂಡದ ಜೊತೆ ಕೊನೆಯ ದಿನದ ಚಿತ್ರೀಕರಣದಲ್ಲಿ ನಟಿ ಸ್ವಾತಿ ಅವರು ಪಾಲ್ಗೊಂಡಿದ್ದು, ಇಡೀ ಗಟ್ಟಿಮೇಳ ತಂಡ ಇವರಿಗೆ ಫೇರ್ ವೆಲ್ ಕೊಟ್ಟಿದೆ, ಕೇಕ್ ಕಟ್ ಮಾಡಿಸಿ, ಫೇರ್ ವೆಲ್ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳನ್ನು ನಟಿ ಸ್ವಾತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

https://www.instagram.com/p/CVLJj1Fhjo4/?utm_medium=copy_link

Most Popular

To Top