Film News

ಶ್ರುತಿ ಹಾಸನ್ ಜೊತೆಗಿನ ಬ್ರೇಕಪ್ ಬಗ್ಗೆ ಕೇಳಿದ್ರೆ ಶಾಂತಾನು ಹಜಾರಿಕಾ ರಿಪ್ಲೆ, Sorry ಎಂದು ಕಾಲ್ಕಿತ್ತ ಶಾಂತಾನು…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ಆಗಾಗ ವೈಯುಕ್ತಿಕ ಕಾರಣಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಸುಮಾರು ತಿಂಗಳುಗಳಿಂದ ಶ್ರುತಿ ಹಾಸನ್ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದರು. ಅವರು ಪಬ್ಲಿಕ್ ಆಗಿಯೇ ಸುತ್ತಾಡಿದ್ದರು, ಕೆಲವೊಂದು ರೊಮ್ಯಾಂಟಿಕ್ ವಿಡಿಯೋ, ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ರೂಮರ್‍ ಸಹ ಜೋರಾಗಿ ಕೇಳಿಬರುತ್ತಿದೆ. ಈ ಕುರಿತು ಶಾಂತಾನು ರನ್ನು ಕೇಳಿದರೇ ಅವರು sorry ಎಂದು ರಿಪ್ಲೆ ಕೊಟ್ಟಿದ್ದಾರಂತೆ.

ಸುಮಾರು ದಿನಗಳಿಂದ ಫ್ರೀ ಬರ್ಡ್ಸ್ ನಂತೆ ಸುತ್ತಾಡುತ್ತಿದ್ದ ಶ್ರುತಿ ಹಾಸನ್ ಹಾಗೂ ಶಾಂತಾನು ಹಜಾರಿಕಾ ನಡುವೆ ಬ್ರೇಕಪ್ ಆಗಿದೆ ಎಂಬ ರೂಮರ್‍ ಜೋರಾಗಿಯೇ ಕೇಳಿಬರುತ್ತಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಶಾಂತಾನು ಜೊತೆಗಿರುವ ಪೊಟೋಗಳನ್ನು ಸಹ ಶ್ರುತಿ ಹಾಸನ್ ಡಿಲೀಟ್ ಮಾಡಿದ್ದರು. ಜೊತೆಗೆ ಒಬ್ಬರನ್ನೊಬ್ಬರು ಸೋಷಿಯಲ್ ಮಿಡಿಯಾದಿಂದ ಅನ್ ಫಾಲೊ ಸಹ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ವೈರಲ್ ಆಯ್ತು. ಆದರೆ ಈ ಕುರಿತು ಶ್ರುತಿ ಆಗಲಿ ಅಥವಾ ಶಾಂತಾನು ಆಗಲಿ ಯಾವುದೇ ರಿಯಾಕ್ಷನ್ ನೀಡಿಲ್ಲ. ಈ ಕುರಿತು ಶಾಂತಾನು ತನ್ನದೇ ಆದ ಶೈಲಿಯಲ್ಲಿ ರಿಯಾಕ್ಟ್ ಆಗಿದ್ದು, ಅವರ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ಶ್ರುತಿ ಹಾಸನ್ ಹಾಗೂ ಶಾಂತಾನು ಬ್ರೇಕಪ್ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ  ಸದ್ದು ಮಾಡುತ್ತಿದೆ. ಈ ಕುರಿತು ಶಾಂತಾನು ಹಜಾರಿಕಾ ರನ್ನು ಕೇಳಿದರೇ, ಅವರು ತನ್ನದೇ ಆದ ಶೈಲಿಯಲ್ಲಿ ರಿಯಾಕ್ಟ್ ಆಗಿದ್ದಾರೆ. ನನ್ನನ್ನು ಕ್ಷಮಿಸಿ, ನಾನು ಅದರ ಬಗ್ಗೆ ಮಾತನಾಬೇಕೆಂದುಕೊಂಡಿಲ್ಲ ಎಂದು ಖಾಸಗಿ ಸುದ್ದಿವಾಹಿನಿಯೋಂದಿಗೆ ಹೇಳಿದ್ದಾರೆ ಎನ್ನಲಾಗಿದೆ. ಅವರಿಬ್ಬರೂ ಸ್ನೇಹಪೂರ್ವಕವಾಗಿಯೇ ಬೇರೆಯಾಗಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಅವರಿಬ್ಬರ ನಡುವೆ ವೈಯುಕ್ತಿಕ ವಿಬೇದಗಳಿದ್ದರೂ, ಇಬ್ಬರು ಸ್ನೇಹಪೂರ್ವಕವಾಗಿ ಬೇರೆಯಾಗಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಆದರೆ ಈ ಕುರಿತು ಶ್ರುತಿ ಹಾಸನ್ ರಿಯಾಕ್ಟ್ ಆಗಿಲ್ಲ. ಇತ್ತೀಚಿಗೆ ತನ್ನ ಇನ್ಸ್ಟಾಗ್ರಾಂನಲ್ಲಿ ಇದೊಂದು ಕ್ರೇಜಿ ರೈಡ್, ನನ್ನ ಬಗ್ಗೆ ಅಲ್ಲದೇ ಬೇರೆ ವ್ಯಕ್ತಿಗಳ ಬಗ್ಗೆ ತುಂಬಾ ಕಲಿತಿದ್ದೇನೆ ಎಂದು ಸ್ಟೇಟಸ್ ಹಾಕಿದ್ದರು. ಸದ್ಯ ನಟಿ ಶ್ರುತಿ ಹಾಸನ್ ಸಲಾರ್‍ -2 ಹಾಗೂ ಚೆನೈ ಸ್ಟೋರಿ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top