ಸತ್ಯ ಧಾರಾವಾಹಿಗೆ ಹೊಸ ಪಾತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ ಹಿರಿಯನಟ ರಮೇಶ್ ಭಟ್!

Follow Us :

ಜೀಕನ್ನಡ ವಾಹಿನಿಯಲ್ಲಿ ಸತ್ಯ ಸೀರಿಯಲ್ ಬಹಳ ಜನಪ್ರಿಯತೆ ಪಡೆದುಕೊಂಡಿದೆ. ಪ್ರತಿ ಎಪಿಸೊಡ್ ನಲ್ಲೂ ಸತ್ಯ ಸೀರಿಯಲ್ ಬಹಳ ಕುತೂಹಲ ತರುತ್ತಿದೆ. ಅಭಿಮಾನಿಗಳು ಸತ್ಯ ಸೀರಿಯಲ್ ಅನ್ನು ಬಹಳ ಇಷ್ಟಪಟ್ಟಿದ್ದಾರೆ. ಇದೀಗ ಸತ್ಯ ಸೀರಿಯಲ್ ಗೆ ಹೊಸ ಕಲಾವಿದರ ಎಂಟ್ರಿಯಾಗಿದೆ.

ಸತ್ಯ ಸೀರಿಯಲ್ ನಲ್ಲಿ ನಾಯಕಿ ಸತ್ಯ ಪಾತ್ರ ಎಲ್ಲರ ಫೇವರೆಟ್ ಪಾತ್ರ ಆಗಿದೆ. ತನ್ನ ಏರಿಯಾದಲ್ಲಿ ಎಲ್ಲಿ ಏನೇ ತೊಂದರೆ ಆದರೂ ಸತ್ಯ ಬಂದು ಅದನ್ನು ಬಗೆಹರಿಸುತ್ತಾಳೆ ಎನ್ನುವುದೇ ಸತ್ಯಳ ಪಾತ್ರ. ಇದೀಗ ಸತ್ಯ ಸೀರಿಯಲ್ ನಲ್ಲಿ ಅಮುಲ್ ಬೇಬಿ ಕಾರ್ತಿಕ್ ಮೇಲೆ ಸತ್ಯಗೆ ಲವ್ ಆಗಿದೆ. ಈ ಟ್ರ್ಯಾಕ್ ಸತ್ಯ ಸೀರಿಯಲ್ ನಲ್ಲಿ ಬಹಳಶ್ರು ಕುತೂಹಲ ಮೂಡಿಸಿದೆ.

ಇದೀಗ ಸತ್ಯ ಸೀರಿಯಲ್ ಗೆ ಹಿರಿಯನಟ ರಮೇಶ್ ಭಟ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಸತ್ಯ ಸೀರಿಯಲ್ ಗೆ ಖ್ಯಾತ ನಟ ಸ್ಕಂದ ಅಶೋಕ್ ಸಹ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೊಂದು ಹೊಸ ಪಾತ್ರದಲ್ಲಿ ನಟ ರಮೇಶ್ ಭಟ್ ಎಂಟ್ರಿ ಕೊಟ್ಟಿದ್ದಾರೆ. ಇವರು ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರಮೇಶ್ ಭಟ್ ಅವರ ಪಾತ್ರ ಸತ್ಯ ಧಾರಾವಾಹಿಯನ್ನು ಇನ್ನಷ್ಟು ಇಂಟರೆಸ್ಟಿಂಗ್ ಆಗುವ ಹಾಗೆ ಮಾಡುವುದು ಖಂಡಿತ.