ಅಕ್ಕನ ಮದುವೆಯಲ್ಲಿ ಸಂತೋಷದಿಂದ ನೃತ್ಯ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ ತಂಗಿ….!

Follow Us :

ಇತ್ತೀಚಿಗೆ ಹೃದಾಯಾಘಾತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅದರಲ್ಲೂ ಸಂತೋಷದಿಂದ ಇರುವ ಸಮಯದಲ್ಲೇ ಅನೇಕರು ಹೃದಾಯಾಘಾತದಿಂದ ಮೃತಪಟ್ಟಿರುವ ಅನೇಕ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ಅಕ್ಕನ ಮದುವೆಯಲ್ಲಿ ಸಂತೋಷದಿಂದ ಕುಣಿಯುತ್ತಿದ್ದ ತಂಗಿ ಇದ್ದಕ್ಕಿಂದ್ದಂತೆ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಹೃದಯಾಘಾತ ಯಾರಿಗೆ ಯಾವ ಸಮಯದಲ್ಲಿ ಸಂಭವಿಸುತ್ತದೆ ಎಂಬುದನ್ನು ಹೇಳುವುದು ತುಂಬಾ ಕಷ್ಟ ಎನ್ನಬಹುದು. ಮಕ್ಕಳು, ಯುವಕರು, ವೃದ್ದರು ಎಂಬ ವ್ಯತ್ಯಾಸವಿಲ್ಲದೇ ಎಲ್ಲಾ ವಯಸ್ಸಿನವರೂ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಅಂತಹುದೇ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ತನ್ನ ಸಹೋದರಿಯ ಮದುವೆ ಸಂಭ್ರಮದಲ್ಲಿ ಸಂತೋಷದಿಂದ 18 ವರ್ಷದ ಯುವತಿ ನೃತ್ಯ ಮಾಡಿದ್ದಾಳೆ. ನೃತ್ಯ ಮಾಡುತ್ತಲೇ ಕ್ಷಣದಲ್ಲೇ ಕುಸಿದು ಬಿದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ಮುಂಚೆಯೇ ಹುಡುಗಿ ಮೃತಪಟ್ಟಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.

ಇನ್ನೂ ಮೃತ ದುರ್ದೈವಿಯನ್ನು ರಿಮ್ಯಾ ಎಂದು ಹೇಳಲಾಗಿದೆ.  ಮದುವೆ ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇದ್ದ ಸಮಯದಲ್ಲಿ ಯುವತಿ ಮೃತಪಟ್ಟಿದ್ದು, ಸಂತೋಷ ತುಂಬಿದ ಮನೆಯಲ್ಲಿ ಶೋಕ ತುಂಬಿದೆ. ಈ ಕುರಿತು ವಿಡಿಯೋ ಒಂದನ್ನು ಆನಂದ್ ಪನ್ನಾ ಎಂಬುವವರು ತಮ್ಮ ಟ್ವಿಟರ್‍ ಖಾತೆಯಲ್ಲಿ ಹಂಚಿಕೊಂಡಿದ್ದು. ವಿಡಿಯೋ ವೈರಲ್ ಆಗುತ್ತಿದೆ.