ನಟ ರಕ್ಷ್ ಅವರ ಕರೊನಾ ದಿನಗಳು ಹೇಗಿತ್ತು ಗೊತ್ತಾ ?

Follow Us :

ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಗಟ್ಟಿಮೇಳ ಧಾರವಾಹಿಯ ನಾಯಕ ರಕ್ಷ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು ಅವರ ಸಂಪೂರ್ಣ ಕುಟುಂಬಕ್ಕೂ ಸೋಂಕು ತಗುಲಿದೆ.ಆದರೆ ಕೊರೋನ ಬಂದ ಮೇಲೆ ಕೇಳಿವು ದಿನಗಳು ನಡೆದ ಘಟನೆಗಳನ್ನ ಖುದ್ದು ರಕ್ಷ್ ಹಂಚಿಕೊಂಡಿದ್ದಾರೆ.

ಶೂಟಿಂಗ್ ಸಮಯದಲ್ಲಿಯೇ ನಟ ರಕ್ಷ್ ಅವರಿಗೆ ಕೊರೋನ ಪಾಸಿಟಿವ್ ಆಗಿತ್ತು, ತಕ್ಷಣ ಹೋಮ್ ಐಸೋಲೇಶನ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.ಅದೇ ಸಮಯದಲ್ಲಿ ರಕ್ಷ್ ಅವರ ಪತ್ನಿಗೂ ಸಹ ಕೊರೋನ ಗುಣ ಲಕ್ಷಣಗಳು ಕಂಡುಬಂದಿದ್ದು ತಕ್ಷಣ ಇಬ್ಬರು ಐಸೋಲೇಶನ್ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಸಂತೋಷದ ವಿಚಾರ ಏನೆಂದರೆ ಕೆಲವೇ ದಿನಗಳಲ್ಲಿ ಇಬ್ಬರಿಗೂ ಸಹ ಕೊರೋನ ನೆಗಟಿವ್ ಬಂತು ಆದರೆ ರಕ್ಷ್ ಅವರ ಅಮ್ಮನಿಗೆ ಕೊರೋನ ಪಾಸಿಟಿವ್ ಬಂತು.

ರಕ್ಷ್ ಅವರ ತಾಯಿ ಕೆಲ ದಿನಗಳಿಂದ ಮನೆಯಿಂದ ಹೊರ ಹೋಗದಿದ್ದರು ಸಹ ಅವರಿಗೆ ಕೊರೋನ ಪಾಸಿಟಿವ್ ಆಯಿತು.ನಂತರ ರಕ್ಷ್ ಅವರ ಪತ್ನಿ ತಮ್ಮ ತಂದೆ ಮನೆಗೆ ತೆರಳಿದ್ದರು ಅಲ್ಲಿ ಅವರ ತಂದೆ ತಾಯಿ ಇಬ್ಬರಿಗೂ ಸಹ ಕೊರೋನ ಪಾಸಿಟಿವ್ ಆಯಿತು ಈ ಬಗ್ಗೆ ಹೇಳಿಕೊಂಡಿರುವ ರಕ್ಷ್ ಅವರು ನಮಗೆ ನೆಗೆಟಿವ್ ಬಂದ ಮೇಲೆಯೂ ಇವರಿಗೆಲ್ಲಾ ಪಾಸಿಟಿವ್ ಬಂದಮೇಲೆಯೇ ನನಗೆ ಅರ್ಥವಾಗಿದ್ದು.

ನಮಗೆ ಪಾಸಿಟಿವ್ ಆದರೂ ಕೂಡ ವೈರಾಣು ನಮ್ಮ ದೇಹದಲ್ಲಿ ಇರುತ್ತದೆ ಎನ್ನುವ ಅಂಶ ಅರ್ಥವಾಯಿತು ಎಂದು ಹೇಳಿದ್ದಾರೆ.ನಮಗೆ ನೆಗೆಟಿವ್ ಬಂದರು ಸಹ ನಾವು ಪೋಸ್ಟಿಕಾಂಶ ಆಹಾರ ಸೇವನೆ ವ್ಯಾಯಾಮ, ಧನಾತ್ಮಕ ಯೋಚನೆ ಇದ್ದರೆ ನಾವು ಕೊರೋನವನ್ನು ಗೆಲ್ಲಬಹುದು ಎಂದಿದ್ದಾರೆ.