ಲಕ್ಷಣ ಸೀರಿಯಲ್ ನಕ್ಷತ್ರ ಬಗ್ಗೆ ನಿಮಗೆಷ್ಟು ಗೊತ್ತು?

Follow Us :

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಲಕ್ಷಣ ಎನ್ನುವಂತಹ ಸೀರಿಯಲ್ ತುಂಬಾ ಡಿಫ್ಫರೆಂಟ್ ಆಗಿದೆ ಎಂದು ಹೇಳಬಹುದು. ಜನಪ್ರಿಯ ನಾಯಕರಾಗಿರುವಂತಹ ಜಗನ್ ಅವರ ಹೆಸರಿನಲ್ಲಿ ಈ ಒಂದು ಸೀರಿಯಲ್ ಮೂಡಿಬರುತ್ತಿದ್ದು, ವಿಭಿನ್ನ ಸ್ಟೋರಿ ಯನ್ನು ಹೊಂದಿರುವುದರಿಂದ ಜನರು ಈ ಧಾರಾವಾಹಿಯನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ.

https://www.instagram.com/reel/CUmu-nVjgkf/?utm_medium=copy_link

ಇನ್ನು ಈ ಸೀರಿಯಲ್ ನಲ್ಲಿ ನಕ್ಷತ್ರ ಪಾತ್ರದಲ್ಲಿ ಕಾಣಿಸಿಕೊಂಡಿರುವವರ ಬಗ್ಗೆ ತುಂಬಾ ಜನ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಮತ್ತು ಈ ಒಂದು ಪಾತ್ರಧಾರಿಯ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಹೀರೋಯಿನ್ ಹೆಸರು ವಿಜಯ ಇವರ ಪೂರ್ತಿ ಹೆಸರು ವಿಜಯ ಲಕ್ಷ್ಮಿ ಕೃಷ್ಣನ್.

https://www.instagram.com/reel/CTWpa1lIabM/?utm_medium=copy_link

ಇವರನ್ನ ಎಲ್ಲರೂ ಕೂಡ ವಿಜಿ ಎಂದು ಕರೆಯುತ್ತಾರೆ ಎಂದು ತಿಳಿದುಬಂದಿದೆ. ಇವರು ಹುಟ್ಟಿದ್ದು ಜೂನ್ 5 1997 ರಲ್ಲಿ ಇವರಿಗೆ ಇದೀಗ 24 ವರ್ಷ ವಯಸ್ಸಾಗಿದೆ.ಇವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರಿನ ಒಂದು ಖಾಸಗಿ ಕಾಲೇಜಿನಲ್ಲಿ ತಮ್ಮ ಡಿಗ್ರಿಯನ್ನ ಕಂಪ್ಲೀಟ್ ಮಾಡಿಕೊಂಡಿದ್ದು, ಕಾಲೇಜ್ ಡೇಸ್ ನಲ್ಲಿಯೇ ಕೆಲವು ಬ್ರ್ಯಾನ್ಡ್ ಗಳಿಗೆ ಮಾಡಲ್ ಆಗಿ ಕೆಲಸ ಮಾಡಿದ್ದಾರೆ. ನಟನೆ ಇವರಿಗೆ ಹೊಸದಾಗಿದ್ದರು ಸಹ ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರ ಪಾತ್ರದಲ್ಲಿ ತುಂಬಾ ಚೆನ್ನಾಗಿ ಆಕ್ಟ್ ಮಾಡಿ ತುಂಬಾ ಜನ ಕನ್ನಡಿಗರ ಮನವನ್ನ ಗೆದ್ದಿದ್ದಾರೆ ಎಂದು ಹೇಳಬಹುದು.