Film News

ಬ್ರಾ ಮಾದರಿಯ ರವಿಕೆಯಲ್ಲಿ ಟಾಪ್ ಗ್ಲಾಮರ್ ಶೋ ಮಾಡಿದ ರಾಶಿ ಖನ್ನಾ, ಕ್ಯೂಟ್ ಸ್ಮೈಲ್ ಕೊಟ್ಟ ಯಂಗ್ ಬ್ಯೂಟಿ…..!

ಟಾಲಿವುಡ್ ನಲ್ಲಿ ಬ್ಯೂಟಿ ಏಂಜಲ್ ಎಂದೇ ಖ್ಯಾತಿ ಪಡೆದುಕೊಂಡ ರಾಶಿ ಖನ್ನಾ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದುಕೊಂಡರು. ಆದರೆ ಆಕೆಯ ದುರದೃಷ್ಟದ ಕಾರಣದಿಂದ ಆಕೆ ಇತ್ತಿಚಿಗೆ ಸೋಲುಗಳನ್ನು ಕಾಣುತ್ತಿದ್ದಾರೆ. ಸೌಂದರ್ಯ, ಅಭಿನಯ ಎರಡೂ ಇದ್ದರೂ ಆಕೆ ಇತ್ತೀಚಿಗೆ ಅಂದುಕೊಂಡಷ್ಟು ಸಕ್ಸಸ್ ಕಾಣುತ್ತಿಲ್ಲ. ಆದರೆ ಅಭಿಮಾನಿಗಳಲ್ಲಿ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ.

ಯಂಗ್ ಬ್ಯೂಟಿ ರಾಶಿ ಖನ್ನಾ ಸೌತ್ ಅಂಡ್ ನಾರ್ತ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ತೆಲುಗಿನ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಬೆಂಗಾಲ್ ಟೈಗರ್‍, ಸುಪ್ರೀಂ, ತೊಲಿಪ್ರೇಮ, ಪ್ರತಿರೋಜು ಪಂಡಗೇ ಮೊದಲಾದ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡರು. ಸದಾ ತನ್ನ ಸೌಂದರ್ಯದ ಮೂಲಕ ಯುವಕರನ್ನು ಸೆಳೆದುಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗೆ ಆಕೆಯ ಕೆರಿಯರ್‍ ಗ್ರಾಫ್ ಡೌನ್ ಆಗುತ್ತಿದೆ ಎನ್ನಲಾಗುತ್ತಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆಯ ಕ್ರೇಜ್ ಜೋರಾಗಿಯೇ ಇದೆ ಎನ್ನಲಾಗಿದೆ.

ಡೆಲ್ಲಿ ಮೂಲದ ಬ್ಯೂಟಿ ರಾಶಿ ಖನ್ನಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಹಾಟ್ ಪೊಟೋಶೂಟ್ಸ್, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಹಾಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಶಿ ಖನ್ನಾ ಹಾಗೂ ತಮನ್ನಾ ಕಾಂಬಿನೇಷನ್ ನಲ್ಲಿ ಬಾಕ್ ಎಂಬ ಸಿನೆಮಾ ನಿರ್ಮಾಣವಾಗಿದ್ದು, ಈ ಸಿನೆಮಾ ಮೇ.3 ರಂದು ರಿಲೀಸ್ ಆಗಲಿದೆ. ಸಿನೆಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ರಾಶಿ ಖನ್ನಾ ಟ್ರೆಂಡಿ ವೇರ್‍ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಇನ್ನೂ ಟಾಲಿವುಡ್ ನಲ್ಲಿ ರಾಶಿ ಖನ್ನಾ ಕೊನೆಯದಾಗಿ ಥಾಂಕ್ಯೂ, ಪಕ್ಕಾ ಕಮರ್ಷಿಯಲ್ ಸಿನೆಮಾಗಳ ಮೂಲಕ ಕಾಣಿಸಿಕೊಂಡಿದ್ದರು. ಆದರೆ ಈ ಸಿನೆಮಾಗಳೆರಡೂ ಪ್ಲಾಫ್ ಆದವು. ಸದ್ಯ ರಾಶಿ ಖನ್ನಾ ತಮಿಳು ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಅರಣ್ಣಮಲೈ-4, ದಿ ಸಬರಮತಿ ಫೈಲ್ಸ್, TME, ತೆಲುಸು ಕದಾ, ಮೇತಾವಿ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top