ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದಿದ್ದಾರೆ ನಟಿ ಶಿಲ್ಪಾ ಅಯ್ಯರ್

Follow Us :

ಕನ್ನಡ ಸೀರಿಯಲ್ ಲೋಕದಲ್ಲಿ ಟಾಪ್ ಸ್ಥಾನದಲ್ಲಿ ಇರುವ ಧಾರಾವಾಹಿ ಜೊತೆ ಜೊತೆಯಲಿ. ಆರ್ಯವರ್ಧನ್ ಮತ್ತು ಅನು ಸಿರಿಮನೆ ಕಥೆ ಕರ್ನಾಟಕದ ಜನರ ಫೇವರೆಟ್ ಕಥೆ ಆಗಿದೆ. ಜನಪ್ರಿಯತೆ ಮತ್ತು ಟಿ.ಆರ್.ಪಿ ಎರಡರಲ್ಲೂ ಸಹ ಜೊತೆ ಜೊತೆಯಲಿ ಧಾರಾವಾಹಿ ಟಾಪ್ ಸ್ಥಾನದಲ್ಲಿದೆ .

ಇದೀಗ ಆರ್ಯ ಅನು ಮದುವೆ ಆಗಿ ಅವರಿಬ್ಬರ ಸನ್ನಿವೇಶಗಳು ಇನ್ನಷ್ಟು ಕುತೂಹಳಕಾರಿಯಾಗಿದೆ. ಈ ನಡುವೆ ರಾಜನಂದಿನಿ ಫ್ಲ್ಯಾಶ್ ಬ್ಯಾಕ್ ಯಾವಾಗ ಆರಂಭವಾಗುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ. ಜನರು ಕುತೂಹಲಕಾರಿ ಘಟ್ಟ ತಲುಪಿರುವ ಈ ಸಮಯದಲ್ಲಿ ಜೊತೆಯಲಿ ಧಾರಾವಾಹಿ ಅಭಿಮಾನಿಗಳಿಗೆ ಈಗ ಒಂದು ಬೇಸರದ ಸುದ್ದಿ ಬಂದಿದೆ.

ಹರ್ಷವರ್ಧನ್ ಹೆಂಡತಿ ಮಾನ್ಸಿ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದೆ ಶಿಲ್ಪಾ ಅಯ್ಯರ್ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಈ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ ನಟಿ ಶಿಲ್ಪಾ ಅಯ್ಯರ್. ನೀವು ಸಹ ವಿಡಿಯೋ ನೋಡಿ..

https://www.instagram.com/tv/CUy9aNPFlHQ/?utm_medium=copy_link