Kannada Serials

ಪ್ರಸಾರ ನಿಲ್ಲಿಸಲಿದೆ ಹೂಮಳೆ ಧಾರಾವಾಹಿ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 5:30 ಕ್ಕೆ ಪ್ರಸಾರವಾಗುತ್ತಿದ್ದ ಹೂ ಮಳೆ ಧಾರವಾಹಿ ಇದೀಗ ಮುಕ್ತಾಯವನ್ನು ಕಂಡಿದೆ.ಹೂ ಮಳೆ ಧಾರವಾಹಿ ತಂಡವೂ ಇಂದು ತಮ್ಮ ಶೂಟಿಂಗ್ ಅನ್ನು ಮುಕ್ತಾಯ ಗೊಳಿಸಿದೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನ ಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಹೂ ಮಳೆ ಧಾರವಾಹಿಯು ಇಂದು ತಮ್ಮ ಶೂಟಿಂಗ್ ಕೊನೆಯ ದಿನವನ್ನ ಪ್ರೇಕ್ಷಕರೊಂದಿಗೆ ಹಂಚಿಕೊಂಡಿದೆ.

ಒಳ್ಳೆಯ ಕಥೆ ಮತ್ತು ಒಳ್ಳೆಯ ಸಂಭಾಷಣೆಯನ್ನು ಹೊಂದಿದ್ದ ಹೂ ಮಳೆ ಧಾರವಾಹಿಯು ಕಡಿಮೆ ಟಿ ಆರ್ ಪಿ ಬಂದ ಕಾರಣಕ್ಕಾಗಿ ಧಾರಾವಾಹಿಯನ್ನು ಮುಕ್ತಾಯ ಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.ಒಳ್ಳೆಯ ರೀತಿಯಲ್ಲಿ ಕಥೆ ಸಾಗುತ್ತಲಿರುವಾಗಲೇ ಈ ಧಾರವಾಹಿ ಮುಕ್ತಾಯ ಗೊಂಡಿರುವುದು ಪ್ರೇಕ್ಷಕರಿಗೆ ಬೇಸರ ತರಿಸಿದೆ.

Most Popular

To Top