ಗಿರಿಜಾ ಲೋಕೇಶ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

Follow Us :

ಜ್ಹೀ ಕನ್ನಡದಲ್ಲಿ ಸ್ವಪ್ನ ಅವರು ನಿರ್ದೇಶನ ಮಾಡುತ್ತಿರುವಂತಹ ಸತ್ಯ ಧಾರವಾಹಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ.ಸತ್ಯ ಪ್ರೀತಿ ಅಮುಲ್ ಬೇಬಿ ಗೆ ಅರ್ಥ ಆಗುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಹೊಸ ಪಾತ್ರಧಾರಿ ರಾಹುಲ್ ಪ್ರೀತಿ ಎಂದರೆ ಏನು ಎಂದು ಅರ್ಥ ಮಾಡಿಸುತ್ತಿದ್ದಾನೆ.ರಾಹುಲ್ ಮತ್ತೆ ಸತ್ಯ ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

ಅಲ್ಲಿ ಸತ್ಯ ತಾಯಿ ಹಾಗೂ ಅಜ್ಜಿ ಗಿರಿಜಮ್ಮ ಅವರನ್ನ ಕೂಡ ಭೇಟಿ ಮಾಡುತ್ತಾನೆ.ರಾಹುಲ್ ಗೆ ಸತ್ಯ ಎಂದರೆ ತುಂಬಾ ಇಷ್ಟ ಈಗಾಗಿ ಯಾರೇ ಸಿಕ್ಕಿದ್ದರು ಸತ್ಯ ಳನ್ನ ತನ್ನ ಪ್ರೇಯಸಿ ಎಂದು ಪರಿಚಯ ಮಾಡಿಕೊಡುತ್ತಾನೆ.ಗಿರಿಜಮ್ಮ ರಾಹುಲ್ ಮಾತಿನ ಶೈಲಿಗೆ ಫಿಧಾ ಆಗಿದ್ದಾರೆ.ಸತ್ಯ ಸೇಮ್ ನೋಡಲು ಗಿರಿಜಮ್ಮ ರೀತಿಯೇ ಇದ್ದಾಳೆ ಎಂದು ರಾಹುಲ್ ಹೊಗಳಿದ ತಕ್ಷಣ ಗಿರಿಜಮ್ಮ ತಕ್ಷಣ ಸತ್ಯ ಳ ಟಾಮ್ ಬಾಯಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಜೀನ್ಸ್ ಪ್ಯಾಂಟ್ ಟಿ ಶರ್ಟ್ ಮೇಲೆ ಶರ್ಟ್ ಹಾಕಿಕೊಂಡು ಬಾಯಿಕಟ್ ನಲ್ಲಿ ಗಿರಿಜಮ್ಮ ಕಾಣಿಸಿಕೊಂಡಿದ್ದಾರೆ.

70 ವರ್ಷ ಆದರೂ ಕೂಡ ಎಲ್ಲಾ ಪಾತ್ರಗಳಲಿಗೂ ಸೈ ಎನ್ನುತ್ತಾರೆ ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಅವರು ಇವರು ನಿಜವಾದ ಕಲಾವಿದರು ಅನೇಕ ವರ್ಷಗಳ ಕಾಲ ನಟನೆಯನ್ನು ಮಾಡಿಕೊಂಡು ಬಂದಿದ್ದಾರೆ.ಯಾವುದೇ ರೀತಿಯ ಮುಜುಗರ ಪಡದೆ ಗಿರಿಜಾ ಲೋಕೇಶ್ ಅವರು ಈ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಇವರ ಈ ಹೊಸ ಲುಕ್ಕಿಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ.ಇವರ ಪ್ರಯತ್ನಕ್ಕೆ ಎಲ್ಲಾ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.