ಬ್ಲಾಕ್ ಚೀತಾ ಮಾದರಿ ಪೋಸ್ ಕೊಟ್ಟ ಸಲಾರ್ ಬ್ಯೂಟಿ, ಬ್ಲಾಕ್ ಡ್ರೆಸ್ ನಲ್ಲಿ ನೆವರ್ ಬಿಪೋರ್ ಎಂಬಂತೆ ಪೋಸ್ ಕೊಟ್ಟ ಶ್ರೀಯಾರೆಡ್ಡಿ….!

Follow Us :

ಸೌತ್ ಸಿನಿರಂಗದಲ್ಲಿ ಪವರ್‍ ಪುಲ್ ಲೇಡಿ ಎಂತಲೇ ಫೇಂ ಪಡೆದುಕೊಂಡಂತಹ ನಟಿ ಶ್ರಿಯಾ ರೆಡ್ಡಿ ಇತ್ತೀಚಿಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನೆಮಾ ಸಲಾರ್‍ ನಲ್ಲಿ ನಟಿಸಿ ಮತಷ್ಟು ಫೇಮಸ್ ಆದರು. ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳೂ ಸಹ ಹರಿದುಬರುತ್ತಿವೆ ಎಂದು ಹೇಳಲಾಗುತ್ತಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆಗೆ ಭಾರಿ ಫಾಲೋಯಿಂಗ್ ಬರುತ್ತಿದೆ. ಇದೀಗ ಆಕೆ ಬ್ಲಾಕ್ ಚಿತಾ ಮಾದರಿ ಕಿಲ್ಲಿಂಗ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳು ಇದೀಗ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಶ್ರೀಯಾ ರೆಡ್ಡಿ 2003ರಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅಪ್ಪುಡಪ್ಪುಡು ಎಂಬ ತೆಲುಗು ಸಿನೆಮಾದ ಮೂಲಕ ಪರಿಚಯವಾದರು. ಆದರೆ ಆಕೆಯ ನಟನೆಗೆ ಒಳ್ಳೆಯ ಮಾರ್ಕ್ಸ್ ಸಿಕ್ಕಿದೆ. ಜೊತೆಗೆ ತನ್ನ ಸೌಂದರ್ಯದ ಮೂಲಕವೂ ಅಭಿಮಾನಿಗಳನ್ನು ಪಡೆದುಕೊಂಡರು. ಬಳಿಕ ಆಕೆ ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಆಕೆಗೆ ಕ್ರೇಜ್ ತಂದುಕೊಟ್ಟಿದ್ದು ಮಾತ್ರ ಸಲಾರ್‍ ಸಿನೆಮಾ ಎಂದು ಹೇಳಬಹುದು. ಪ್ರಭಾಸ್ ಹಾಗೂ ಶ್ರುತಿ ಹಾಸನ್ ರವರ ಕಾಂಬಿನೇಷನ್ ನಲ್ಲಿ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬಂದ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ಈ ಸಿನೆಮಾದ ಮೂಲಕ ಶ್ರೀಯಾ ರೆಡ್ಡಿ ತುಂಭಾ ಫೇಮಸ್ ಆದರು ಎಂದೇ ಹೇಳಬಹುದಾಗಿದೆ.

ಇನ್ನೂ ನಟಿ ಶ್ರಿಯಾ ರೆಡ್ಡಿ ಸಹ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ಸಿನೆಮಾ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳ ಜೊತೆಗೆ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಈ ಪೋಟೋಗಳಲ್ಲಿ ಆಕೆ ಬ್ಲಾಕ್ ಚಿತಾ ಮಾದರಿ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ಆಕೆ ಹಂಚಿಕೊಂಡ ಈ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.  ಸದ್ಯ ಆಕೆ ಸಲಾರ್‍-2 ಸಿನೆಮಾದಲ್ಲಿ ನಟಿಸಲಿದ್ದು, ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ದುಪ್ಪಟ್ಟಾಗಲಿದೆ ಎಂದು ಹೇಳಲಾಗುತ್ತಿದೆ.