Kannada Serials

ಜೊತೆ ಜೊತೆಯಲಿ ಧಾರಾವಾಹಿಗೆ ಹೊಸ ಮಾನ್ಸಿ ಯಾರು ಗೊತ್ತಾ?

ಕನ್ನಡ ಸೀರಿಯಲ್ ಲೋಕದಲ್ಲಿ ಟಾಪ್ ಸ್ಥಾನದಲ್ಲಿ ಇರುವ ಧಾರಾವಾಹಿ ಜೊತೆ ಜೊತೆಯಲಿ. ಆರ್ಯವರ್ಧನ್ ಮತ್ತು ಅನು ಸಿರಿಮನೆ ಕಥೆ ಕರ್ನಾಟಕದ ಜನರ ಫೇವರೆಟ್ ಕಥೆ ಆಗಿದೆ. ಜನಪ್ರಿಯತೆ ಮತ್ತು ಟಿ.ಆರ್.ಪಿ ಎರಡರಲ್ಲೂ ಸಹ ಜೊತೆ ಜೊತೆಯಲಿ ಧಾರಾವಾಹಿ ಟಾಪ್ ಸ್ಥಾನದಲ್ಲಿದೆ .

ಇದೀಗ ಆರ್ಯ ಅನು ಮದುವೆ ಆಗಿ ಅವರಿಬ್ಬರ ಸನ್ನಿವೇಶಗಳು ಇನ್ನಷ್ಟು ಕುತೂಹಳಕಾರಿಯಾಗಿದೆ. ಈ ನಡುವೆ ರಾಜನಂದಿನಿ ಫ್ಲ್ಯಾಶ್ ಬ್ಯಾಕ್ ಯಾವಾಗ ಆರಂಭವಾಗುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ. ಜನರು ಕುತೂಹಲಕಾರಿ ಘಟ್ಟ ತಲುಪಿರುವ ಈ ಸಮಯದಲ್ಲಿ ಜೊತೆಯಲಿ ಧಾರಾವಾಹಿ ಅಭಿಮಾನಿಗಳಿಗೆ ಈಗ ಒಂದು ಬೇಸರದ ಸುದ್ದಿ ಬಂದಿದೆ.

ಹರ್ಷವರ್ಧನ್ ಹೆಂಡತಿ ಮಾನ್ಸಿ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದೆ ಶಿಲ್ಪಾ ಅಯ್ಯರ್ ಅವರು ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಈ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶಿಲ್ಪಾ ಅಯ್ಯರ್ ಅವರ ಮಾನ್ಸಿ ಪಾತ್ರಕ್ಕೆ ಬೇರೆ ಯಾವ ಕಲಾವಿದೆ ಬರುತ್ತಾರೆ ಎಂದು ಎಲ್ಲೆಡೆ ಕುತೂಹಲ ಮೂಡಿತ್ತು, ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ನಟಿ ನಯನಾ ಕೆಎಂ ಅವರು ಇನ್ಮುಂದೆ ಮಾನ್ಸಿ ಪಾತ್ರದಲ್ಲಿ ನಟಿಸಲಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಯನಾ ಈಗ ಜೊತೆ ಜೊತೆಯಲಿ ಧಾರಾವಾಹಿಗು ಎಂಟ್ರಿ ಕೊಟ್ಟಿದ್ದಾರೆ.

Most Popular

To Top