Kannada Serials

ಅಮೃತವಾರ್ಷಿಣಿ ಸೀರಿಯಲ್ ಖ್ಯಾತಿಯ ಅಮೃತಾ ಈಗ ಹೇಗಿದ್ದಾರೆ ನೋಡಿ

ಕೆಲ ವರ್ಷಗಳ ಸ್ಟಾರ್ ಸುವರ್ಣ ವಾಹಿನಿ ಶುರುವಾದ ಹೊಸತರಲ್ಲಿ ಆರಂಭವಾದ ಧಾರಾವಾಹಿ “ಅಮೃತವರ್ಷಿಣಿ”. ಈ ಧಾರಾವಾಹಿಯಲ್ಲಿ ಹಿರಿಯ ಕಲಾವಿದರಾದ ಹೇಮಾ ಚೌಧರಿ ಅವರು ಸಹ ಇದ್ದರು, ಜೊತೆಗೆ ಅಮೃತವರ್ಷಿಣಿ ಧಾರಾವಾಹಿ ಮೂಲಕ ಅನೇಕ ಯುವಪ್ರತಿಭೆಗಳು ಸಹ ಕನ್ನಡ ಕಿರುತೆರೆಗೆ ಪರಿಚಯವಾದರು.

ಈ ಧಾರಾವಾಹಿಯ ಕಥಾನಾಯಕಿ ಅಮೃತ ಪಾತ್ರ ನಿರ್ವಹಿಸಿದ ನಟಿ ರಜಿನಿ, ಮುಗ್ಧವಾದ ನಟನೆಯಿಂದ ಕರ್ನಾಟಕದ ಮನೆಮಾತಾಗಿದ್ದರು. ಅಮೃತವರ್ಷಿಣಿ ಅಮೃತ ಪಾತ್ರವನ್ನು ಇಂದಿಗೂ ಸಹ ಯಾರೂ ಮರೆಯಲು ಸಾಧ್ಯವಿಲ್ಲ. ಈ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನೆಮನೆಗೂ ತಲುಪಿದ್ದರು ರಜಿನಿ.

3 ವರ್ಷಕ್ಕೂ ಹೆಚ್ಚಿನ ಕಾಲ ಪ್ರಸಾರವಾಗಿತ್ತು ಈ ಧಾರಾವಾಹಿ. ಇದರ ನಂತರ ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ಸ್ ನಲ್ಲಿ ಸ್ಪರ್ಧಿಸಿದ್ದರು ರಜಿನಿ, ಇದರ ಮೂಲಕ ತಾವು ನಟನೆಯಲ್ಲಿ ಮಾತ್ರವಲ್ಲ ಡ್ಯಾನ್ಸ್ ಮಾಡುವುದರಕ್ಕೂ ಸೈ ಎಂದು ನಿರೂಪಿಸಿದರು. ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಅದ್ಭುತವಾಗಿ ನೃತ್ಯ ಮಾಡಿ ತೀರ್ಪುಗಾರರನ್ನು ಹಾಗೂ ವೀಕ್ಷಕರನ್ನು ಬೆರಗುಗೊಳಿಸಿದ್ದರು ರಜಿನಿ.

ಇದಾದ ನಂತರ, ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಪ್ರಸಿದ್ಧ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಪಾತ್ರವೊಂದನ್ನು ಮಾಡುತ್ತಿದ್ದರು ರಜಿನಿ. ಮಜಾ ಟಾಕೀಸ್ ಮೂಲಕ ಕಾಮಿಡಿ ಮಾಡುವ ಕಲೆ ಸಹ ತಮ್ಮಲ್ಲಿದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು. ಮುಂದಿನ ದಿನಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಆತ್ಮಬಂಧನ ಧಾರಾವಾಹಿಯಲ್ಲಿ ನಟಿಸಿದರು.

ನಟನೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಈ ನಟಿ ತಮ್ಮ ಫೋಟೋಗಳನ್ನು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾರೆ. ಈ ಎರಡು ಪ್ಲಾಟ್ ಫಾರ್ಮ್ ಗಳಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ ರಜಿನಿ. ಇತ್ತೀಚೆಗೆ ಇವರು ಹಂಚಿಕೊಂಡಿರುವ ಫೋಟೋಗಳು ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಭಾರಿ ಪ್ರಶಂಸೆಗೆ ಒಳಗಾಗಿದೆ.

Most Popular

To Top