gossip

ದೀಪಿಕಾ ಧೋನಿ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

2007 ರಲ್ಲಿ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಛಾಪು ಮೂಡಿಸಿದ್ದರೆ, ಅತ್ತ ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಹೊಸ ಸಂಚಲನ ಸೃಷ್ಟಿಸಿದ್ದರು. ಅದರ ಜೊತೆಗೆಯೇ ಧೋನಿ ಹಾಗೂ ದೀಪಿಕಾ ಮಧ್ಯೆ ಪ್ರೀತಿ ಹುಟ್ಟಿದೆ ಎಂಬ ಸುದ್ದಿ ಸಹ ಕೇಳಿಬಂದಿತ್ತು. ಇನ್ನೇನು ಬಾಲಿವುಡ್-ಕ್ರಿಕೆಟ್​ನ ಮತ್ತೊಂದು ಸೆಲೆಬ್ರಿಟಿ ಜೋಡಿಯಾಗಲಿದೆ ಎಂಬ ಸುದ್ದಿ ಸಹ ಹರಿದಾಡಿತ್ತು.

ಅದರ ಹಿಂದೆಯೇ ಯುವರಾಜ್ ಸಿಂಗ್ ಜೊತೆ ಕೂಡ ದೀಪಿಕಾ ಹೆಸರು ಸೇರಿಕೊಂಡಿತ್ತು. ಇದೇನು ಹೀಗೆ ಅನ್ನುವಾಗಲೇ ಬಾಲಿವುಡ್ ನಟಿಯ ಹೆಸರಿನೊಂದಿಗೆ ಧೋನಿ ಜಾಗದಲ್ಲಿ ಯುವಿ ಹೆಸರು ಕಾಣಿಸಲಾರಂಭಿಸಿತು. ಅಂದು ಗಾಸಿಪ್​ ಎಂಬಂತೆ ಹರಿದಾಡಿದ್ದ ಸುದ್ದಿಗಳು ನಿಜವಾಗಿತ್ತು ಅಂತ ಹೇಳಿರುವುದು ಸ್ವತಃ ಧೋನಿ ಅವರೇ ಎಂಬುದು ವಿಶೇಷ. ಏಕೆಂದರೆ ಧೋನಿ ನನಗೆ ದೀಪಿಕಾ ಮೇಲೆ ಕ್ರಶ್ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. 2007ರಲ್ಕ್ ಫರಾಹ್ ಖಾನ್ ನಿರ್ದೇಶಿಸಿದ ಓಂ ಶಾಂತಿ ಓಂ ಬಾಲಿವುಡ್​ನಲ್ಲಿ ಸೂಪರ್ ಹಿಟ್ ಆಗಿತ್ತು.

ಚಿತ್ರದಲ್ಲಿ ಶಾರುಖ್ ಖಾನ್​ಗೆ ನಾಯಕಿಯಾಗಿದ್ದ ದೀಪಿಕಾ ಪಡುಕೋಣೆ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಹೀಗೆ ಬಾಲಿವುಡ್​ನ ಮೊದಲ ಚಿತ್ರದಲ್ಲೇ ದೀಪಿಕಾರನ್ನು ನೋಡಿದ ಧೋನಿ ಫುಲ್ ಪ್ಲಾಟ್ ಆಗಿದ್ದರಂತೆ. ಅಲ್ಲದೆ ದೀಪಿಕಾರನ್ನು ಪರಿಚಯಿಸಿ ಕೊಡುವಂತೆ ಶಾರುಖ್ ಖಾನ್​ ಬಳಿ ಕೇಳಿಕೊಂಡಿದ್ದರಂತೆ. ಅದರಂತೆ ಎಂಎಸ್​ಡಿ ಹಾಗೂ ದೀಪಿಕಾ ಫ್ರೆಂಡ್ಸ್ ಆಗಿದ್ದರು. ಟಿ20 ವಿಶ್ವಕಪ್ ಗೆದ್ದಿದ್ದ ಮಹೇಂದ್ರ ಸಿಂಗ್ ಧೋನಿ ಬಹಳ ಜನಪ್ರಿಯರಾಗಿದ್ದರು. ಅದೇ ಸಮಯದಲ್ಲಿ ಪಂದ್ಯವೊಂದನ್ನು ನೋಡಲು ಸ್ಟೇಡಿಯಂಗೆ ಬರುವಂತೆ ಧೋನಿ ದೀಪಿಕಾಗೆ ಆಹ್ವಾನ ನೀಡಿದ್ದರು. ಆ ಪಂದ್ಯ ವೀಕ್ಷಣೆಯಲ್ಲಿ ಪೆವಿಲಿಯನ್​ನಲ್ಲಿ ಕೂತು ನಟಿ ಟೀಮ್ ಇಂಡಿಯಾ ವಿಕೆಟ್​ ಕೀಪರ್​ಗೆ ಫುಲ್ ಸಪೂರ್ಟ್ ಮಾಡಿದ್ದರು.
ಅದೇ ವೇಳೆಗೆ ಯುವರಾಜ್ ಸಿಂಗ್ ಕೂಡ ದೀಪಿಕಾ ಪಡುಕೋಣೆ ಅವರೊಂದಿಗೆ ಸ್ನೇಹ ಬೆಳೆಸಿದ್ದರು.

ಯುವಿ ದೀಪಿಕಾ ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ಈ ಬೆಳವಣಿಗೆಯಿಂದಾಗಿ ಧೋನಿಯವರಿಗೆ ಏನೂ ಮಾಡಲಾರದ ಪರಿಸ್ಥಿತಿ. ಏಕೆಂದರೆ ಯುವರಾಜ್ ಸಿಂಗ್ ಸ್ನೇಹ, ಅಥವಾ ದೀಪಿಕಾ ಪ್ರೀತಿ, ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಧೋನಿ ಅವರದ್ದು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಧೋನಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದರು. ಆ ಬಳಿಕ ಯುವರಾಜ್ ಸಿಂಗ್ – ದೀಪಿಕಾ ನಡುವಿನ ರಿಲೇಷನ್​ಶಿಪ್ ಕೂಡ ಕಟ್ ಆಯ್ತು. ಇತ್ತ ಧೋನಿ ಕ್ರಿಕೆಟ್ ಅಂಗಳದಲ್ಲಿ ಕಿಂಗ್ ಆಗಲು ಹೊರಟರೆ, ಅತ್ತ ಯುವಿ ಸಿಕ್ಸರ್ ಸಿಂಗ್ ಆಗಿ ಮೆರೆಯಲು ಆರಂಭಿಸಿದರು.

ಇದರ ನಡುವೆ ಇವರಿಬ್ಬರಿಂದಲೂ ದೂರವಾಗಿ ದೀಪಿಕಾ ಪಡುಕೋಣೆ ಬಾಲಿವುಡ್​ನ ಕ್ವೀನ್ ಆಗಿ ಮಿಂಚಲು ಪ್ರಾರಂಭಿಸಿದರು. ಅಂದು ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಮಾತನಾಡಿದ ಧೋನಿ ಕೆಲವೊಂದು ವಿಷಯಗಳು ನಿಜವಾಗಿತ್ತು ಅಂದಿದ್ದಾರೆ. ಅಲ್ಲದೆ ಕೆಲವು ಸಣ್ಣ ಸಂಗತಿಗಳು ನಮ್ಮ ನೆನಪುಗಳನ್ನು ಜೀವಂತವಾಗಿರಿಸುತ್ತದೆ. ಹಾಗೆಯೇ ಇದು ಜೀವನವನ್ನು ಮುಂದಕ್ಕೆ ಕೊಂಡೊಯ್ಯುತ್ತೆ ಎಂದು ಧೋನಿ ಹಳೆಯ ನೆನಪುಗಳ ಬಗ್ಗೆ ಹೇಳಿದರು.

Most Popular

To Top