Kannada Serials

ರಾಧಾ ರಮಣ ಧಾರವಾಹಿ ಖ್ಯಾತಿಯ ನಟಿ ಮಾನ್ಸಿ ಜೋಶಿ ಈಗ ಹೇಗಿದ್ದಾರೆ ನೋಡಿ

ಕಿರುತೆರೆಯಲ್ಲಿ ಚಿರಪರಿಚಿತವಾದ ನಟಿಯರಲ್ಲಿ ಒಬ್ಬರು ಮಾನ್ಸಿ ಜೋಶಿ. ಸಧ್ಯಕ್ಕೆ ಜೀ ಕನ್ನಡ ವಾಹಿನಿಯ ಪಾರು ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರ ನಿರ್ವಹಿಸುತ್ತಿದ್ದಾರೆ. ಪಾರು ಧಾರಾವಾಹಿಯಲ್ಲಿ ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾನ್ಸಿ ಜೋಶಿ ಕಿರುತೆರೆಗೆ ಕಾಲಿಟ್ಟು ಎರಡು ವರ್ಷವಾಗಿದೆ. ಮೊದಲಿಗೆ ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ನಟಿಸಿದರು. ನಂತರ ರಾಧಾ ರಮಣ ಧಾರಾವಾಹಿಯಲ್ಲಿ ಅನ್ವಿತಾ ಪಾತ್ರದಲ್ಲಿ ನಟಿಸಿದರು.

ರಾಧಾ ರಮಣ ಧಾರಾವಾಹಿಯ ಅನ್ವಿತಾ ಪಾತ್ರದಿಂದ ಬಹಳಷ್ಟು ಜನಪ್ರಿಯತೆ ಮತ್ತು ಅಭಿಮಾನಿ ಬಳಗವನ್ನು ಗಳಿಸಿದರು. ನಂತರ ತಮಿಳು ಧಾರಾವಾಹಿಯಲ್ಲಿ ನಟಿಸಿ, ಅಲ್ಲಿ ಕೂಡ ಮನೆಮಾತಾಗಿದ್ದರು. ಕನ್ನಡದಲ್ಲಿ ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಮತ್ತೆ ಬಂದರು. ಪಾರು ಧಾರಾವಾಹಿಯಲ್ಲಿ ನೆಗಟಿವ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದೀಗ ತೆಲುಗು ಧಾರಾವಾಹಿಯಲ್ಲಿ ನಟಿಸಲು ಮಾನ್ಸಿ ಜೋಶಿ ಅವರಿಗೆ ಅವಕಾಶ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

ಮಾನ್ಸಿ ಜೋಶಿ ನಟಿಸಲಿರುವ ತೆಲುಗು ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಕಸ್ತೂರಿ ನಿವಾಸ ಧಾರಾವಾಹಿಯ ರಿಮೇಕ್ ಆಗಿದ್ದು, ತೆಲುಗಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಮಾನ್ಸಿ ಜೋಶಿ. ತೆಲುಗಿನಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಮಾನ್ಸಿಗೆ ತುಂಬಾ ಸಂತೋಷ ನೀಡಿದೆಯಂತೆ. ಸಾಮಾನ್ಯವಾಗಿ ಹೀರೋಯಿನ್ ಪಾತ್ರ ಎಂದರೆ ಅಳುಮುಂಜಿಯ ಪಾತ್ರ ಆಗಿರುತ್ತದೆ, ಆದರೆ ಈ ತೆಲುಗು ಧಾರಾವಾಹಿಯಲ್ಲಿ ನನ್ನ ಪಾತ್ರ ಬೇರೆ ತರಹವೆ ಇದೆ. ತಪ್ಪನ್ನು ಸರಿತಿದ್ದುವ ಹುಡುಗಿಯ ಪಾತ್ರ ಎನ್ನುತ್ತಾರೆ ಮಾನ್ಸಿ.

ಈ ಹಿಂದೆ ನಟಿ ಮಾನ್ಸಿ ತಮಿಳು ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದರು, ಕರೊನಾ ಸಮಸ್ಯೆ ಶುರು ಆಗಿ ತಮಿಳುನಾಡಿನಲ್ಲಿ ಕರೊನಾ ಕೇಸ್ ಗಳು ಜಾಸ್ತಿ ಆಗಿದ್ದರಿಂದ ನಟಿ ಮಾನ್ಸಿ ಅರ್ಧದಲ್ಲಿಯೇ ತಮಿಳು ಧಾರಾವಾಹಿಯನ್ನು ಕೈಬಿಡಬೇಕಾಯಿತು. ಕನ್ನಡದ ಪ್ರತಿಭೆ ಬೇರೆ ಭಾಷೆಗಳಲ್ಲಿ ಸಹ ಮಿಂಚುತ್ತಿರುವುದು ನಮಗೆ ಒಂದು ರೀತಿ ಹೆಮ್ಮೆ. ಅಂದಹಾಗೆ ಮಾನ್ಸಿ ಜೋಶಿ ಅವರ ಸಹೋದರಿ ಜನಪ್ರಿಯ ಡ್ಯಾನ್ಸರ್, 250 ಕ್ಕೂ ಹೆಚ್ಚು ಡ್ಯಾನ್ಸ್ ಶೋ ಗಳನ್ನು ನೀಡಿದ್ದಾರೆ. ಅವರ ಸಹೋದರಿ ಡ್ಯಾನ್ಸರ್ ಆಗಿದ್ದರಿಂದ ಮಾನ್ಸಿ ಅವರಿಗೆ ನಟನೆಯ ಅವಕಾಶ ಒದಗಿ ಬಂತು. ತಮಗೆ ಸಿಕ್ಕ ಅವಕಾಶದ ಸದುಪಯೋಗ ಮಾಡಿಕೊಂಡ ನಟಿ ಮಾನ್ಸಿ ಈಗ ಕಿರುತೆರೆಯ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ.

Most Popular

To Top