Kannada Serials

ರಿಜಿಸ್ಟರ್ ಮ್ಯಾರೇಜ್ ಆದ ಕಿರುತೆರೆ ನಟಿ ಪ್ರಿಯಾಂಕ ಚಿಂಚೋಳಿ

ಮನಸಾರೆ, ಮನಸೆಲ್ಲ ನೀನೇ ಧಾರವಾಹಿ ಖ್ಯಾತಿಯ ನಟಿ ಪ್ರಿಯಾಂಕ ಚಿಂಚೋಳಿ ಅವರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕ ಮತ್ತು ರಾಕೇಶ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡ ನಟಿ ಪ್ರಿಯಾಂಕ ಚಿಂಚೋಲಿ.ರಾಕೇಶ್ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇನೆ. 2021 ರ ಡಿಸೆಂಬರ್ 10 ರಲ್ಲಿ ಸಾಂಪ್ರಧಾಯವಾಗಿ ಮದುವೆಯಾಗಳಿದ್ದೇನೆ. ಈಗಷ್ಟೇ ಮದುವೆ ಸಂಭ್ರಮ ಶುರುವಾಗಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಬೇಕು ಎಂದು ಹೇಳಿದ್ದಾರೆ. ಸಾಕಷ್ಟು ಜನರು ಪ್ರಿಯಾಂಕ ಚಿಂಚೋಲಿ ಗೆ ಶುಭ ಹಾರೈಸಿದ್ದಾರೆ.

https://www.instagram.com/p/CSeSZ7woA0s/?utm_medium=copy_link

ಪ್ರಿಯಾಂಕ ಹಾಗೂ ರಾಕೇಶ್ ಅವರದ್ದು ಪಕ್ಕ ಅರೇಂಜ್ ಮ್ಯಾರೇಜ್. ರಾಕೇಶ್ ಅವರು ಅಮೆರಿಕಾದ ಬ್ಯಾಂಕ್ ಒಂದರಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.ಪ್ರಿಯಾಂಕ ಪರಿಚಿತರ ಮೂಲಕ ರಾಕೇಶ್ ಪರಿಚಯ ಆಗಿದೆ. ಎರಡೂ ಮದುವೆಯವರು ಖುಷಿಯಿಂದ ಈ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರಿಯಾಂಕ ಪ್ರೇಮಿಗಳ ದಿನದಂದು ಸಂಪ್ರದಾಯಕವಾಗಿ ಸೀರೆ ಉಟ್ಟು. ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಸಂಜೆ ಕೆಂಪು ಬಣ್ಣದ ಉಡುಗೆ ತೊಟ್ಟು ಔತಣ ಕೂಟದಲ್ಲಿ ಮಿಂಚಿದ್ದರು.ಮದುವೆ ನಂತರದಲ್ಲಿ ರಾಕೇಶ್ ಮತ್ತೆ ಅಮೆರಿಕಾಗೆ ಹೋಗುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ಖಚಿತ ಇಲ್ಲ.ಪ್ರಿಯಾಂಕ ಮದುವೆ ನಂತರವೂ ನತಾಸಲಿದ್ದಾರಂತೆ.ನಾನು ಯಾವುದೇ ಕೆಲಸ ಮಾಡಿದರು ಕೂಡ ಅವರಿಗೆ ಯಾವುದೇ ತೊಂದರೆ ಇಲ್ಲ.ನನ್ನ ಹುಡುಗ ನನಗೆ ತುಂಬಾ ಪ್ರೊತ್ಸಾಹ ನೀಡುತ್ತಾರೆ ಎಂದು ಪ್ರಿಯಾಂಕ ಈ ಹಿಂದೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

Most Popular

To Top