ಹೊಸ ಧಾರವಾಹಿಯಲ್ಲಿ ಅಗ್ನಿಸಾಕ್ಷಿ ಅಂಜಲಿ!

Follow Us :

ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ ಅಂಜಲಿ. ಅಗ್ನಿಸಾಕ್ಷಿ ಧಾರವಾಹಿಯನ್ನು ಹೊರತು ಪಡಿಸಿ ಅಂಜಲಿ ಅವರು ಬೇರೆ ಯಾವ ಧಾರವಾಹಿಯಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇವರ ಅಭಿಮಾನಿಗಳು ಅಂಜಲಿ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಮತ್ತೆ ನಟಿಸಿ ಎಂದು ಕೇಳಿಕೊಳ್ಳುತ್ತಿದ್ದರು.

ಧಾರವಾಹಿ ಹೊರತು ಪಡಿಸಿ ಸಿನಿಮಾದಲ್ಲಿಯೂ ಕೂಡ ಬಣ್ಣ ಹಚ್ಚಿಲ್ಲ ಸುಕೃತಾ ನಾಗ್. ಅಗ್ನಿಸಾಕ್ಷಿ ಧಾರವಾಹಿ ಮುಕ್ತಾಯ ಗೊಂಡು ಸುಮಾರು ಒಂದು ವರೆ ವರ್ಷ ಕಳೆದು ಹೋಗಿದೆ. ಈಗ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಮತ್ತೆ ಬಣ್ಣ ಹಚ್ಚಲಿದ್ದಾರೆ ಸುಕೃತಾ. ಹೌದು ಹೊಸ ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ, ತುಂಬಾ ಘಾಟಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುಕೃತಾ.

ಅಗ್ನಿಸಾಕ್ಷಿಯಲ್ಲಿ ಸಾಫ್ಟ್ ಆದ ಪಾತ್ರ ಮಾಡಿದ್ದರು ಆದರೆ ಇದರಲ್ಲಿ ತುಂಬಾ ಬೋಲ್ಡ್ ಆಗಿರುವಂತಹ ಪಾತ್ರ, ದಬ್ಬಾಳಿಕೆ ಮಾಡುವಂಥ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಗ್ನಿಸಾಕ್ಷಿ ಆರಂಭದಿಂದಲೂ ಕೂಡ ಅಂಜಲಿ ಪಾತ್ರವನ್ನು ನಿಭಾಯಿಸಿಕೊಂಡು ಬಂದಿದ್ದು ಸುಕೃತಾ ನಾಗ್ ಈ ಧಾರವಾಹಿ ಮೂಲಕ ಇವರು ಅನೇಕ ಕ್ರೇಜ್ ಮತ್ತು ಫ್ಯಾನ್ ಫಾಲೋಯಿಂಗ್ ಅನ್ನ ಪಡೆದುಕೊಂಡರು.

ಇವರದ್ದು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾಗಿತ್ತು.
ಸುಕೃತಾ ಅವರು ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಎಂಬ ಹೊಸ ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಧಾರವಾಹಿಯಲ್ಲಿ ಸುಕೃತಾ ಅವರು ನಟಿಸಲಿದ್ದಾರೆ ಎಂದು ತಿಳಿದು ಅದೆಷ್ಟೋ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.