ಶೀಘ್ರದಲ್ಲೇ ಮದುವೆ ಆಗ್ತಾರಾ ಪಾರು ಸೀರಿಯಲ್ ನಟಿ ಮೊಕ್ಷಿತಾ ?

Follow Us :

ನಟಿಸುವುದಕ್ಕೂ ಮುನ್ನ ಇವರು ತುಂಬಾ ಚೆನ್ನಾಗಿ ವ್ಯಾಸಂಗ ಮಾಡಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಆದರೆ ಏನು ಮಾಡುವುದು ಫ್ಯಾಮಿಲಿ ಪ್ರಾಬ್ಲಮ್ ಮನೆಯಲ್ಲಿ ತುಂಬಾ ಕಷ್ಟ ಇತ್ತು ಇತ್ತ ಕೆಲಸಕ್ಕೆ ಹೋದರೆ ತಮ್ಮನನ್ನು ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ. ತಮ್ಮನಿಗೆ ಬುದ್ದಿ ಬೆಳವಣಿಗೆ ಇಲ್ಲ ಓಡಾಡಲು ಆಗುವುದಿಲ್ಲ ತಾಯಿ ಸಹ ಕೆಲಸಕ್ಕೆ ಹೋಗುತ್ತಿದ್ದರು ಅವರು ಕೆಲಸ ಬಿಡಲು ಆಗುವುದಿಲ್ಲ.

ಹಾಗಾಗಿ ಮನೆಯಲ್ಲೇ ಇದ್ದುಕೊಂಡು ತಮ್ಮನ ಆರೈಕೆಯಲ್ಲಿ ನಿರತರಾಗಿದ್ದರು. ಈ ನಟಿ ವೆರೆ ಯಾರು ಅಲ್ಲ ನೀವೆಲ್ಲರೂ ಕೂಡ ಪಾರು ಧಾರಾವಾಹಿಯಲ್ಲಿ ನೋಡಿರುತ್ತಿರ. ಪಾರ್ವತಿಯಾಗಿ ತುಂಬಾ ಚೆನ್ನಾಗಿ ಹಲವು ವರ್ಷಗಳಿಂದ ನಟಿಸುತ್ತಿದ್ದಾರೆ. ನಿಮ್ಮೆಲರ ನೆಚ್ಚಿನ ಪಾರು ನಿಜವಾದ ಹೆಸರು ಮೊಕ್ಷಿತಾ ಅದ್ಭುತವಾದಂತಹ ಕಲಾವಿದೆ.
ನೋಡಲು ತುಂಬಾ ಸುಂದರವಾಗಿದ್ದಾರೆ.

ಇನ್ನು ಸಿಂಗಲ್ ಇವರಿಗೆ ಇನ್ನು ಮದುವೆಯಾಗಿಲ್ಲ ಕಂಪ್ಲೀಟ್ ಮನೆಯ ಜವಾಬ್ದಾರಿವನ್ನ ಇವರು ಈಗ ತೆಗೆದುಕೊಂಡಿದ್ದಾರೆ. ಪಾರು ಧಾರಾವಾಹಿಯಲ್ಲಿ ಸಿಕ್ಕ ಅವಕಾಶವನ್ನ ಬಳಸಿಕೊಂಡರು ಉತ್ತಮವಾದಂತಹ ಕಿರುತೆರೆಯಲ್ಲಿ ಫೇಮಸ್ ನಟಿಯಾದರು. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಮೊಕ್ಷಿತಾ ಅವರ ಮನೆಯಲ್ಲಿ ಅವರ ಮದುವೆಗೆ ಹುಡುಗನನ್ನು ಸಹ ಹುಡುಕುತ್ತಿದ್ದಾರಂತೆ. ಮೊಕ್ಷಿತಾ ಯಾವಾಗ ಮದುವೆಯಾಗುತ್ತಾರೆ ಆ ಹುಡುಗ ಯಾರು ಎಂದು ಕಾದು ನೋಡಬೇಕಾಗಿದೆ.