ಅನುಶ್ರೀಗೆ ಟಾಂಗ್ ಕೊಟ್ಟ ಪ್ರಶಾಂತ್ ಸಂಬರ್ಗಿ ಹೇಳಿದ್ದೇನು ನೋಡಿ !

Follow Us :

ಅನುಶ್ರೀ ಅವರು ನೆನ್ನೆ ತಾನೇ ಮಾಧ್ಯಮಗಳ ಮುಂದೆ ವರದಿ ನೀಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ನಾನು ಯಾವುದೇ ಕಾರಣಕ್ಕೂ ಊರು ಬಿಟ್ಟು ಹೋಗಲ್ಲ ನಾನು ಯಾರಿಗೂ ಹೆದರುವುದಿಲ್ಲ ಜೊತೆಗೆ ನಾನು ಯಾವ ಇನ್ಫಲುಎನ್ಸ್ ಕೂಡ ಮಾಡಿಸಿಲ್ಲ. ನಾನು ಒಬ್ಬಳೇ ಬಂದಿದ್ದು ನಾನು ಒಬ್ಬಳೇ ಓಡಾಡುತ್ತೇನೆ ಎಂದು ಮಾಧ್ಯಮ ಗಳ ಮುಂದೆ ಅನುಶ್ರೀ ಅವರು ಕಳೆದ ರಾತ್ರಿ ವರದಿ ನೀಡಿದ್ದಾರೆ.

ಈ ವರದಿ ಒಂದು ಕಡೆಯಾದರೆ ಪ್ರಶಾಂತ್ ಸಂಬರ್ಗಿಯ ಆರೋಪದ ಮೇಲೆ ಖಡಕ್ ಉತ್ತರ ನೀಡಿದ್ದರು. ಈ ಉತ್ತರಕ್ಕೆ ಪ್ರಶಾಂತ್ ಸಂಬರ್ಗಿ ಅವರು ಮರು ಉತ್ತರ ನೀಡಿದ್ದಾರೆ. ಹೌದು ನೆನ್ನೆ ಮಾಧ್ಯಮಗಳ ಎದುರು ಅನುಶ್ರೀ ಅವರು ತಮ್ಮ ಬಗ್ಗೆ ಕೆಟ್ಟ ಪ್ರಚಾರ ಮಾಡುತ್ತಿರುವ ಪ್ರಶಾಂತ್ ಸಂಬರ್ಗಿ ಅವರ ವಿರುದ್ಧ ಸಿಡಿದೆದ್ದಿದ್ದೂ ನನ್ನ ಕೋಟಿ ಕೋಟಿ ಆಸ್ತಿ ತೋರಿಸಿ ಎಂದು ಅನುಶ್ರೀ ಅವರು ಖಡಕ್ ಆಗಿ ಉತ್ತರ ನೀಡಿದ್ದರು.

ಇದಕ್ಕೆ ಮರು ಜವಾಬ್ ಕೊಟ್ಟ ಪ್ರಶಾಂತ್ ಸಂಬರ್ಗಿ ನಿನ್ನ ಆಟ ನನಗೆ ಗೊತ್ತು ಅನುಶ್ರೀ ನೀನು ಡ್ರಗ್ಸ್ ತೆಗೆದುಕೊಳ್ಳುವುದು ನಿನ್ನ ಹಿಂದೆ ಇರುವ ಶುಗರ್ ಡ್ಯಾಡಿ ಯಾರು ಎಂದು ಕೂಡ ನನಗೆ ಗೊತ್ತು ನಿನಗೆ ಈ ಕೆಲಸ ಮಾಡುವುದಕ್ಕೆ ಯಾರ ಸಪೋರ್ಟ್ ಇದೆ ಎಂದು ನಾನು ಸದ್ಯದಲ್ಲೇ ಹೇಳುತ್ತೇನೆ. ಜೊತೆಗೆ ಒಂದು ಆಡಿಯೋ ಕ್ಲಿಪ್ ಕೂಡ ಬಿಡುಗಡೆ ಮಾಡುತ್ತೇನೆ ಎಂದು ಪ್ರಶಾಂತ್ ಸಂಬರ್ಗಿ ಅವರು ಅನುಶ್ರೀ ಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಇದೀಗ ಇದರ ನಡುವೆ ಅನುಶ್ರೀ ಅವರ ತಾಯಿಗೆ ಅನಾರೋಗ್ಯದ ಸಮಸ್ಯೆ ಕಾಡಿದ್ದು ಹೆಚ್ಚಿನ ಚಿಂತೆಯಿಂದ ಹೀಗೆ ಆಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಇನ್ನು ಅನುಶ್ರೀ ಅವರು ಚಿಂತೆ ಮಾಡಬೇಡ ಅಮ್ಮ ನಾನು ಇದ್ದೇನೆ ಎಂದು ದೈರ್ಯದ ಮಾತುಗಳನ್ನು ಹೇಳಿ ಸಮಾಧಾನ ಮಾಡಿದ್ದಾರೆ.