Kannada Serials

ಕನ್ನಡತಿ ಖ್ಯಾತಿಯ ಕಿರಣ್ ರಾಜ್ ವಿರುದ್ಧ ದೂರು ದಾಖಲು

ಕಿನ್ನರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಕಿರಣ್ ರಾಜ್ ಅವರು ಸದ್ಯಕ್ಕೆ ಕನ್ನಡತಿ ಧಾರಾವಾಹಿಯಲ್ಲಿ ನಾಯಕನಟನಾಗಿ ಮಿಂಚುತ್ತಿದ್ದಾರೆ.ಇವರ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇವರ ಮೇಲೆ ಅವರ ಗೆಳತಿಯಾದ ಯಾಸ್ಮಿನ್ ಅವರು ದೂರು ದಾಖಲಿಸಿದ್ದಾರೆ.

ಯಾಸ್ಮಿನ್ ದೂರು ನೀಡಿರುವುದು ತಿಳಿದ ನಂತರ ಕಿರಣ್ ರಾಜ್ ಅವರು ಯಾಸ್ಮಿನ್ ಅವರ ವಿರುದ್ಧ ಆರ್ ಆರ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕನ್ನಡ ಮತ್ತು ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕಿರಣ್ ರಾಜ್ ಅವರು ಹಾಗೂ ಹಿಂದಿ ನಟಿ ಯಾಸ್ಮಿನ್ ಪಠಾಣ್ ಇಬ್ಬರು ಪರಸ್ಪರ ದೂರು ದಾಖಲಿಸಿದ್ದಾರೆ.

ಯಾಸ್ಮಿನ್ ಅವರು ಮುಂಬೈನಲ್ಲಿ ದೂರು ದಾಖಲಿಸಿದ್ದು, ಕಿರಣ್ ರಾಜ್ ಅವರು ಬೆಂಗಳೂರಿನ ಆರ್ ಆರ್ ನಗರದಲ್ಲಿ ದೂರು ದಾಖಲಿಸಿದ್ದಾರೆ. ಯಾಸ್ಮಿನ್ ಮಾರ್ಚ್ 31 ರಂದು ನಮ್ಮ ಮನೆಗೆ ಬಂದು ನನ್ನ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿ ನನ್ನ ಕಾರ್ ಗ್ಲಾಸ್ ಅನ್ನು ಹೊಡೆದು ಹಾಕಿದ್ದಾರೆ.ಅದಕ್ಕಾಗಿ ದೂರು ದಾಖಲು ಮಾಡಿದ್ದೇನೆ.ಮತ್ತು ನಾನು ಎಫೈರ್ ದಾಖಲು ಮಾಡಿಲ್ಲ ಏಕೆಂದರೆ ನಾನು ಈ ಕೇಸನ್ನು ಮುಂದುವರೆಸಲು ಇಷ್ಟಪಡುವುದಿಲ್ಲ.

ಯಾಸ್ಮಿನ್ ತುಂಬಾ ಜನಕ್ಕೆ ಮೋಸ ಮಾಡಿದ್ದಾಳೆ ಈಗಾಗಲೇ ಅವಳ ಮೇಲೆ 3-4 ಕೇಸುಗಳಿವೆ. ಹನಿ ಟ್ರಾಪ್ ಮಾಡಿ ಜನರಿಗೆ ಮೋಸ ಮಾಡುವುದೇ ಅವಳ ಉದ್ದೇಶ ನಮ್ಮ ಸಂಬಂಧ ಯಾವತ್ತೂ ಚೆನ್ನಾಗಿರಲಿಲ್ಲ ಎಂದು ಕಿರಣ್ ರಾಜ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕಿರಣ್ ರಾಜ್ ಅವರು ನನಗೆ ಕಾರಿನಲ್ಲಿ ಒಡೆದಿದ್ದಾರೆ, ಮನ ಬಂದಂತೆ ಥಳಿಸಿದ್ದಾರೆ ಈಗಾಗಿ ನಾನು ಅವರ ಕಾರ್ ಗ್ಲಾಸ್ ಒಡೆದು ಹೊರಬಂದೆ.ಇದಾದ ನಂತರ ಒಂದು ಗ್ಯಾರೇಜಿಗೆ ನನ್ನ ಕರೆದುಕೊಂಡು ಹೋಗಿ ನನಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ.ಈ ವಿಷಯವನ್ನು ನಾನು ಅವರ ತಂದೆ ತಾಯಿಗೆ ತಿಳಿಸಿದೆ ಅವರು ನನ್ನನ್ನು ಪೊಲೀಸ್ ಅತ್ತಿರ ಹೋಗದಂತೆ ತಡೆದರು ಆದರೆ ಕಿರಣ್ ಕಾಟ ತಡೆಯಲಾಗದೆ ನಾನು ಪೊಲೀಸ್ ಬಳಿ ಹೋದೆ ಎಂದು ಯಾಸ್ಮಿನ್ ಅವರು ತಿಳಿಸಿದ್ದಾರೆ

Trending

To Top