ಕನ್ನಡತಿ ಸೆಟ್ ನಲ್ಲಿ ಅಹಿತಕರ ಘಟನೆ

ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಕನ್ನಡತಿ ಧಾರವಾಹಿಯ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆಯುತ್ತಿದೆ.ಲಾಕ್ ಡೌನ್ ಇರುವ ಕಾರಣ ಕರ್ನಾಟಕದಲ್ಲಿ ಶೂಟಿಂಗ್ ಗೆ ಅವಕಾಶವಿಲ್ಲ ಹಾಗಾಗಿ ಪರರಾಜ್ಯದ ಇನೋವೇಟಿವ್ ಫಿಲಂ ಸಿಟಿ ಗೆ ತೆರಳಿ ನಟಿ ರಂಜನಿ ರಾಘವನ್ ಹಾಗೂ ನಟ ಕಿರಣ್ ರಾಜ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್ ಗೆ ವಾಪಸ್ ಹೋಗುವಾಗ ರಂಜನಿ ಮತ್ತು ಕಿರಣ್ ಗೆ ಒಂದು ಭಯಾನಕ ಅನುಭವವಾಗಿದೆ ಕೂಡಲೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.ಅಸಲಿಗೆ ಅಲ್ಲಿ ನಡೆದ್ದದ್ದೇನು ಎಂದು ರಂಜನಿ ಅವರು ಎಳೆಎಳೆಯಾಗಿ ಹೇಳಿದ್ದಾರೆ.

ಇದು ನೈಜ್ಯ ಘಟನೆ ಆಧರಿತ ತ್ರಿಲ್ಲರ್ ಕತೆ ಇಲ್ಲಿ ಬರುವ ಪಾತ್ರಗಳು ಕಾಲ್ಪನಿಕವಲ್ಲ ನನಗೆ ಜೀವನದಲ್ಲಿ ಅನುಭವವಾದ ನೈಜ್ಯ ಘಟನೆ ಎಂದು ವಿಡಿಯೋ ಸಾಕ್ಷಿಯ ಸಮೇತ, ಇದು ನನ್ನ ಅನುಭವದ ಸಾಲುಗಳು ಎಂದು ಬರೆದುಕೊಂಡಿದ್ದಾರೆ.

ಬೇಗ ರೂಮ್ ಗೆ ತಲುಪ ಬಹುದು ಸುತ್ತ ಮುತ್ತ ಜಾಗವನ್ನು ಒಪೆನ್ ಗಾಡಿಯಲ್ಲಿ ನೋಡಬಹುದು ಎಂದು ಜೋಶ್ ನಲ್ಲಿ ಗಾಡಿ ಹತ್ತಿದೆವು.ಶೂಟಿಂಗ್ ಸೆಟ್ ನಿಂದ ಎರಡು ಕಿಲೋಮೀಟರ್ ದೂರ ಬಂದಿದೆವು.ಸಾಕಷ್ಟು ದೂರ ಬಂದ ನಂತರ ಇವರು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ನನ್ನ ಮೈ ಮೇಲೆ 3 ಲಕ್ಷ ಚೈನ ಇದೆ ಎಂದು ಕಿರಣ್ ರಾಜ್ ಅವರು ಗುಟ್ಟಾಗಿ ಹೇಳಿದ ತಕ್ಷಣ ರಾಮೋಜಿ ಫಿಲಂ ಸಿಟಿ ದಾರಿ ಬಿಟ್ಟು ಬೇರೆ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಯಿತು.

ಮುಂದೆ ಕೂತಿರುವ ಡ್ರೈವರ್ ಪರಿಚಯ ಇರಲಿ ಅವರ ಮುಖ ಸಹ ನೋಡಿರಲಿಲ್ಲ ಅದಕೋಸ್ಕರ ಗೊತ್ತು ಗುರಿ ಇಲ್ಲದ ಈ ಊರಲ್ಲಿ ಏನಪ್ಪಾ ಮಾಡೋದು ಎಂದು ವಿಡಿಯೋ ಮಾಡಿದ್ದೇವೆ ಎಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.