Kannada Serials

ನಾಳೆಯಿಂದ ಶುರುವಾಗ್ತಿದೆ ಹಿಟ್ಲರ್ ಕಲ್ಯಾಣ ಧಾರವಾಹಿ! ಈ ಮುದ್ದಾದ ಹೀರೋಯಿನ್ ಯಾರು ಗೊತ್ತಾ?

ಜೀ ಕನ್ನಡದಲ್ಲಿ ಬರುತ್ತಿದೆ ಹಿಟ್ಲರ್ ಕಲ್ಯಾಣ, ಮೂರು ಸೊಸೆಯರಿಂದ ಅತ್ತೆಯನ್ನು ಹುಡುಕುವ ಕೆಲಸ ಶುರುವಾಗಿದೆ. ಆಗಸ್ಟ್ 9 ರಿಂದ ಸೋಮವಾರದಿಂದ ಶುಕ್ರವಾರದ ವರೆಗೂ ಸಂಜೆ 8 ಗಂಟೆಗೆ ಹಿಟ್ಲರ್ ಕಲ್ಯಾಣ ಎಂಬ ಹೊಸ ಧಾರವಾಹಿ ಪ್ರಸಾರವಾಗಲಿದೆ.

ಹಿಟ್ಲರ್ ಎಂದೇ ಕರೆಹಿಸಿಕೊಳ್ಳುವ ಶಿಸ್ತುಬದ್ದ ನಡು ವಯಸ್ಸಿನ ವ್ಯಕ್ತಿ ಮತ್ತು ಯಡವಟ್ಟಿನ ಹುಡುಗಿಯ ಕಥೆ ಇದು. ಜೀ ಕನ್ನಡ ವಾಹಿಸಿಯಲ್ಲಿ ಒಂದಕ್ಕಿಂತ ಒಂದು ಧಾರವಾಹಿ ವಿಭಿನ್ನವಾಗಿರುತ್ತದೆ. ಈ ಸೀರಿಯಲ್ ನಲ್ಲಿ ದಿಲೀಪ್ ರಾಜ್, ಮಲೈಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವನು ಪರ್ಫೆಕ್ಟ್ ಅವಳು ಯಡವಟ್ಟು ಇಬ್ಬರದೂ ಡೆಡ್ಲಿ ಕಾಂಬಿನೇಶನ್.

ಕಿಂಚಿತ್ತು ಆಶಿಸ್ತನ್ನು ಸಹಿಸದ ಹಿಟ್ಲರ್ ಅಲಿಯಾಸ್ ಅಭಿರಾಮ್ ಜಯ್ ಶಂಕರ್ ಗೆ ಹುಡುಗಿ ಹುಡುಕುವ ಕಾರ್ಯಕ್ರಮ ಸೊಸೆಯಂದಿರು ಶುರು ಮಾಡಿದ್ದಾರೆ. ಲೀಲಾ ಸರಳ ಹುಡುಗಿ ಕಿರಿಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪ್ರೀತಿಯನ್ನು ಮಾತ್ರ ಪಡೆದಿರುತ್ತಾಳೆ. ಮಲತಾಯಿ ತೋರಿದ ಪ್ರೀತಿ ಅಷ್ಟಕ್ಕೇ ಅಷ್ಟೇ. ಹಿಟ್ಲರ್ ಅನ್ನು ಮದುವೆಯಾಗಿ 3 ಜನ ಸೊಸೆಯಂದಿರನ್ನು ನಿಭಾಯಿಸುತ್ತಾಳ ಎನ್ನುವದು ಒಂದು ಲೈನಿನ ಸ್ಟೋರಿ.

Most Popular

To Top