Kannada Serials

ತೆಲುಗು ಧಾರಾವಾಹಿಯಿಂದ ಹೊರಬಂದ ಗಟ್ಟಿಮೇಳ ನಟಿ ಅಶ್ವಿನಿ

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಅಶ್ವಿನಿ ಸದ್ಯ ಈಗ ತೆಲುಗಿನ ಕಿರುತೆರೆಯಲು ತುಂಬಾ ಜನಪ್ರಿಯತೆ ಗಳಿಸಿದ್ದಾರೆ.ವಾರದಲ್ಲಿ ಕೆಲವು ದಿನ ಹೈದರಾಬಾದ್ ನಲ್ಲಿ ಶೂಟಿಂಗ್ ಗೆ ಹೋದರೆ ಬಾಕಿ ದಿನ ಬೆಂಗಳೂರಿನಲ್ಲಿ ಗಟ್ಟಿಮೇಳ ಧಾರಾವಾಹೀಗಾಗಿ ಶೂಟಿಂಗ್ ಗೆ ಬಾಗವಹಿಸುತ್ತಿದ್ದಾರೆ.ಈಗ ಲಾಕ್ ಡೌನ್ ಇರುವ ಕಾರಣ ಎಲ್ಲರೂ ಮನೆಯಲ್ಲೇ ಇದ್ದಾರೆ ಆದರೆ ಧಾರಾವಾಹಿಗಳ ಶೂಟಿಂಗ್ ಗಾಗಿ ಕನ್ನಡ ಅನೇಕ ಧಾರಾವಾಹಿಗಳು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ ಗೆ ಹೋಗಿದೆ.

ಇನ್ನು ಗಟ್ಟಿಮೇಳ ಯಶಸ್ವಿಯಾಗಿ ನಡೆಯುತ್ತಿರುವಾಗಲೇ ನಟಿ ಅಶ್ವಿನಿ ದೊಡ್ಡ ನಿರ್ದಾರ ಒಂದನ್ನ ಮಾಡಿದ್ದಾರೆ.ನಟಿ ಅಶ್ವಿನಿ ಅವರು ತೆಲುಗಿನ ನಾಗಭೈರವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.ಬುಡಕಟ್ಟು ಜನಾಂಗದ ಹುಡುಗಿ ಹಾಗೂ ನಾಗಿಣಿಯಾಗಿ ಅವರು ನಾಗಭೈರವಿಯಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು.ಈ ಧಾರಾವಾಹಿಯಲ್ಲಿನ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಈಗ ಅಶ್ವಿನಿ ಅವರು ನಾಗಭೈರವಿ ಧಾರಾವಾಹಿಯಿಂದ ಹೊರಬಂದಿರಿವುದಾಗಿ ಹೇಳಿದ್ದಾರೆ.ಪರಿಸ್ಥಿತಿ ತುಂಬಾ ಚಿಂತಾಜನಕವಾಗಿರುವುದರಿಂದ ಹೈದ್ರಾಬಾದ್ ಗೆ ಹೋಗಿ ನಾಗಭೈರವಿ ಧಾರಾವಾಹಿಯ ಶೂಟಿಂಗ್ ನಲ್ಲಿ ಭಾಗವಹಿಸುವುದು ತುಂಬಾ ಅಪಾಯಕಾರಿ ಆರೋಗ್ಯದ ದೃಷ್ಟಿಯಿಂದ ನಾನು ಈ ನಿರ್ದಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

Most Popular

To Top