ಅತಿಯಾಗಿ ಚಿಕನ್ ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ?

Follow Us :

ನಾನ್ ವೆಜ್ ಪ್ರಿಯರು ಹೆಚ್ಚು ಇಷ್ಟ ಪಡುವುದು ಚಿಕನ್ ಅಥವಾ ಮಟನ್ ಊಟ. ಭೋಜನದ ಜೊತೆಗೆ ಒಂದು ಪೀಸ್ ಚಿಕನ್ ಇಲ್ಲ ಎಂದರೆ ಅವರಿಗೆ ಅವತ್ತಿನ ಊಟ ಸಮಾಧಾನವೇ ಇರುವುದಿಲ್ಲ ಅಷ್ಟರ ಮಟ್ಟಿಗೆ ಚಿಕನ್ ಊಟವನ್ನ ಇಷ್ಟ ಪಡುತ್ತಾರೆ. ಅಲ್ಲದೆ ರುಚಿಯಷ್ಟೇ ಪ್ರೊಟೀನ್ ಒಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟ ಪಟ್ಟು ತಿನ್ನುತ್ತಾರೆ.

ಚಿಕನ್ ಬಿರಿಯಾನಿ, ಚಿಕನ್ ಟಿಕ್ಕಾ, ಚಿಕನ್ ಕಬಾಬ್ ಹೀಗೆ ವಿವಿಧ ಶೈಲಿಯಲ್ಲಿ ಚಿಕನ್ ಅನ್ನು ಸವಿಯಬಹುದು ಚಿಕನ್ ಅತಿಯಾಗಿ ತಿನ್ನುವುದರಿಂದ ಅನೇಕ ಅಡ್ಡ ಪರಿಣಾಮಗಳನ್ನ ನಾವು ಎದುರಿಸಬೇಕಾಗುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ನಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ಚಿಕನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಅತಿಯಾಗಿ ಚಿಕನ್ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತದೆ. ಕೋಳಿಯಲ್ಲಿ ಹೆಚ್ಚಿನ ಬ್ಯಾಕ್ಟಿರಿಯ ಪ್ರಮಾಣವಿದ್ದು ಆರೋಗ್ಯಕ್ಕೆ ಹಾನಿಕಾರಕ ಎಂದು ಗಣ್ಯರು ತಿಳಿಸಿದ್ದಾರೆ. ವಿಶೇಷವಾಗಿ ಕೋಳಿ ಎದೆಯಲ್ಲಿ ಹೆಚ್ಚು ಬ್ಯಾಕ್ಟಿರಿಯ ಇರುತ್ತದೆ.

ಲಂಡನ್ ನ ಲಿಂಡಾ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ ನೇಮಿತ ಮಟ್ಟಕ್ಕಿಂತ ಮೀರಿ ಚಿಕನ್ ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕೋಳಿಯಲ್ಲಿ ನಾಟಿ, ಫಾರ್ಮ್ ಎಂಬ ವಿಧಗಳಿವೆ ಬಾಯ್ಲರ್ ಕೋಳಿಗಳನ್ನ ಅತಿಯಾಗಿ ತಿನ್ನುವುದರಿಂದ ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗುತ್ತದೆ.