Kannada Serials

ಹುಟ್ಟುಹಬ್ಬದಂದೇ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಕನ್ನಡ ಸೀರಿಯಲ್ ನಟಿ!

ಕನ್ನಡ ಕಿರುತೆರೆಯ ಖ್ಯಾತ ನಟಿ ತಮ್ಮ ಹುಟ್ಟುಹಬ್ಬದ ದಿನದಂದೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಕಿರುತೆರೆಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿ ಖ್ಯಾತಿಯ ನಟಿ ಅಂಕಿತ ತಮ್ಮ ಹುಟ್ಟುಹಬ್ಬದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೌದು ತಮ್ಮ 28ನೇ ಹುಟ್ಟುಹಬ್ಬದ ದಿನದಂದು ಅಮೂಲ್ಯವಾದ ಹುಡುಗೊರೆ ಸಿಕ್ಕಿದೆ ಎಂದಿರುವ ಅಂಕಿತ ತಮ್ಮ ನಿಶ್ಚಿತಾರ್ಥ ಫೋಟೊಗಳನ್ನು ಅಂಚಿಕೊಂಡಿದ್ದಾರೆ.8 ವರ್ಷಗಳಿಂದ ಅಂಕಿತ ಹಾಗೂ ಸುಹಾರ್ ಪ್ರೀತಿಸುತ್ತಿದ್ದಾರೆ, ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಸುಹಾರ್ ಅವರಿಗೆ ಬೈಕ್ ರೈಡಿಂಗ್ ಅಭ್ಯಾಸ ಸಹ ಇದೆ.

ಕಮಲಿ ಧಾರಾವಾಹಿಯಲ್ಲಿ ಅಂಕಿತ ನಿಂಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.ಈ ಜೋಡಿಯ ನಿಶ್ಚಿತಾರ್ಥದ ಚಿತ್ರಗಳು ಸಾಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮಿಳುನಾಡಿನ ಅಯ್ಯಂಗಾರ್ ಕುಟುಂಬದ ಹುಡುಗಿಯಾಗಿದ್ದರು ಅಂಕಿತ ಅವರು ಹುಟ್ಟಿ ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ.

ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತ ನಂತರ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು.ಅಂಕಿತ ಅವರಿಗೆ ತಮಿಳು ಚಿತ್ರರಂಗದಲ್ಲಿ ನಟಿಸಲು ಅವಕಾಶ ಬಂದಿದ್ದರು ಅವರು ಕನ್ನಡ ಭಾಷೆಯಲ್ಲೇ ನೆಲೆಯೂರಿದರಂತೆ.

Most Popular

To Top