health-Kannada

ನಿಮ್ಮ ತ್ವಚೆಯನ್ನು ಕೋಮಲವಾಗಿಡಲು ಈ ಟಿಪ್ಸ್ ಟ್ರೈ ಮಾಡಿ

ಮುಖದ ಚರ್ಮದ ಆರೈಕೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಎಷ್ಟೇ ಕಷ್ಟ ಪಟ್ಟರು ಹೊರಗಿನ ಕಲುಷಿತ ವಾತಾವರಣದಿಂದ ನಿಮ್ಮ ಚರ್ಮ ಹಲವು ತೊಂದರೆಗಳನ್ನ ಅನುಭವಿಸಬೇಕಾಗುತ್ತದೆ. ಹಾಗೂ ಬಿಸಿಲು ನಿಮ್ಮ ಚರ್ಮವನ್ನ ಸುಡುತ್ತದೆ. ಇದರಿಂದ ಮುಕ್ತಿ ಹೊಂದಲು ನೀವು ಹಲವು ಕ್ರೀಮ್ ಮತ್ತು ಸೋಪ್ ಗಳನ್ನ ಬಳಸುತ್ತಿದ್ದರು ಯಾವುದೇ ಪ್ರಯೋಜನವಾಗಿರುವುದಿಲ್ಲ.

ಹಾಗಿದ್ದಲ್ಲಿ ನಾವು ತಿಳಿಸುವ ಈ ಒಂದು ಉಪಾಯವನ್ನ ಮಾಡಿಕೊಂಡರೆ ಖಂಡಿತ ನಿಮಗೆ ರಿಸಲ್ಟ್ ಸಿಕ್ಕೇ ಸಿಗುತ್ತದೆ. ಬೆಳಗಿನ ಜಾವ ನಾವು ಎಷ್ಟೇ ಆರೈಕೆ ಮಾಡಿದರು ತ್ವಚೆ ಹೊಳೆಯುವುದಿಲ್ಲ, ಏಕೆಂದರೆ ಬೆವರಿನ ಮುಖಾಂತರವೋ ಅಥವಾ ನೀವೇ ಮುಖ ತೊಳೆಯುವ ಕಾರಣವೋ, ಬಿಸಲು ಹೀಗೆ ನಾನ ತೊಂದರೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಆರೈಕೆ ಮಾಡಿದರೆ ಬೆಳಗ್ಗಿನ ಜಾವದ ತನಕ ಯಾವುದೇ ತೊಂದರೆಗಳು ಇರುವುದಿಲ್ಲ. ಚರ್ಮ ಸ್ವಚ್ಛ ಕೋಮಲವಾಗುತ್ತದೆ.

ಇದಕ್ಕಾಗಿ ಮನೆಯಲ್ಲೇ ಕ್ರೀಮ್ ಅನ್ನ ತಯಾರಿಸಬೇಕು.ಕ್ರೀಮ್ ತಯಾರಿಸಲು ಬೇಕಾದ ಸಾಮಾಗ್ರಿಗಳು, ಹಾಲಿನ ಕೆನೆ, ರೋಸ್ ವಾಟರ್, ಆಲಿವ್ ಆಯಿಲ್, ಹಾಗೂ ಗ್ಲಿಸರಿನ್. ಒಂದು ಚಿಕ್ಕ ಬೌಲ್ ನಲ್ಲಿ ಹಾಲಿನ ಕೆನೆ, ರೋಸ್ ವಾಟರ್, ಒಂದು ಚಮಚ ಆಲಿವ್ ಆಯಿಲ್ ಮತ್ತು ಗ್ಲಿಸರಿನ್ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪ್ರತಿದಿನ ಮಾಡುವ ಬದಲು ಒಂದೇ ಸಲ 7 ದಿನಕ್ಕೆ ಆಗುವಷ್ಟು ಮಾಡಿ ಒಂದು ಡಬ್ಬಿಯಲ್ಲಿ ಶೇಖರಿಸಿ ಸಹ ಇಡಬಹುದು.

ಇನ್ನು ನೀವೇ ತಯಾರಿಸಿದ ಈ ಕ್ರೀಮ್ ಅನ್ನ ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಶುಭ್ರವಾಗಿ ತೊಳೆದು ನಂತರ ಈ ಕ್ರೀಮ್ ಬಳಸಿ ಮಸಾಜ್ ಮಾಡಬೇಕು ಮತ್ತು ಬೆಳಗಿನ ಜಾವದ ತನಕ ಹಾಗೆ ಬಿಟ್ಟು ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನ ತೊಳೆಯಬೇಕು.ಹೀಗೆ ಸತತವಾಗಿ 7 ದಿನ ಮಾಡುವುದರಿಂದ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯಲು ಶುರು ಮಾಡುತ್ತದೆ.

Most Popular

To Top