ಜಾಹೀರಾತಿನಿಂದ ಟ್ರೋಲ್ ಆದ ರಶ್ಮಿಕಾ!

Follow Us :

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್ ಗೆ ಗುರುಯಾಗಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಈ ಜಾಹೀರಾತಿನಲ್ಲಿ ಪುರುಷರ ಒಳ ಉಡುಪಿನ ಬಗ್ಗೆಯಾಗಿದ್ದು ಅದರಲ್ಲಿ ರಶ್ಮಿಕಾ ಯೋಗ ಇನ್ಸ್ಟ್ರಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ ಈ ವೇಳೆ ವಿಕ್ಕಿ ಅವರು ಯೋಗ ಕಳೆಯುವ ವಿದ್ಯಾರ್ಥಿಯಾಗಿದ್ದು ಅವರು ಧರಿಸಿರುವ ಒಳ ಉಡುಪನ್ನೇ ರಶ್ಮಿಕಾ ನೋಡುವ ಅದರ ಮೇಲೆ ಆಕರ್ಷಿತರಾಗುವ ರೀತಿ ವಿಡಿಯೋ ಚಿತ್ರೀಕರಿಸಲಾಗಿದೇ.ಈ ಜಾಹೀರಾತಿಗೆ ರಶ್ಮಿಕಾ ಅಭಿಮಾನಿಗಳು ಸಹ ಮಿಶ್ರ ಪ್ರತಿಕ್ರಿಯಿಸುತ್ತಿದ್ದಾರೆ.

ಟ್ರೋಲ್ ಪೆಜಗಳು ಈ ಜಾಹೀರಾತಿನಲ್ಲಿ ರಶ್ಮಿಕಾ ಆಭಿನಯದ ಬಗ್ಗೆ ಫುಲ್ ಟ್ರಾಲ್ ಮಾಡುತ್ತಿದ್ದಾರೆ. ಸಕತ್ ಬ್ಯುಸಿಯಾಗಿರುವ ರಶ್ಮಿಕಾ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅದು ಅಲ್ಲದೆ ಇತ್ತೀಚೆಗೆ ಬಾಲಿವುದ್ ಗೂ ಸಹ ಹಾರಿರುವ ಅವರು ಮಿಷನ್ ಮಜ್ನು ಚಿತ್ರ ಮುಗಿಸಿ ಬಾಲಿವುಡ್ ನ್ ಅಮಿತಾಬ್ ಬಚ್ಚನ್ ಜೊತೆಗೂ ನಟಿಸುತ್ತಿದ್ದಾರೆ.