ರಶ್ಮಿಕಾಗೆ ಕೈ ಕೊಟ್ಟು, ಸಮಂತಾ ಜೊತೆಗೆ ಫಿಕ್ಸ್ ಆದ್ರಾ ವಿಜಯ್ ದೇವರಕೊಂಡ, ಹೊಸದೊಂದು ರೂಮರ್?

Follow Us :

ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದ ರಶ್ಮಿಕಾ ಮಂದಣ್ಣ ಹಾಗೂ ರೌಡಿ ಹಿರೋ ಎಂದೇ ಖ್ಯಾತಿ ಪಡೆದುಕೊಂಡ ವಿಜಯ್ ದೇವರಕೊಂಡ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ರೂಮರ್‍ ಸುಮಾರು ದಿನಗಳಿಂದ ಹರಿದಾಡುತ್ತಲೇ ಇದೆ. ಈ ಬಗ್ಗೆ ರಶ್ಮಿಕಾ ಅನೇಕರ ಅದೆಲ್ಲಾ ಸುಳ್ಳು ಎಂದರೂ ಸಹ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ವಿಜಯ್ ದೇವರಕೊಂಡ ರಶ್ಮಿಕಾಗೆ ಕೈ ಕೊಟ್ಟು ಸಮಂತಾ ಜೊತೆಗೆ ಲವ್ ಟ್ರಾಕ್ ಶುರು ಮಾಡಿದ್ದಾರೆ ಎಂಬ ರೂಮರ್‍ ಕೇಳಿಬರುತ್ತಿದೆ.

ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಏನೆ ಸುದ್ದಿಗಳು ಬಂದರೂ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಅದು ನಿಜ ಅಥವಾ ಸುಳ್ಳು ಎಂಬುದು ಪಕ್ಕಕ್ಕಿಟ್ಟು ಆ ಸುದ್ದಿ ನಿಜ ಇರಲಿದೆ ಎಂಬಂತೆ ರೂಮರ್‍ ಗಳನ್ನು ಹರಿಬಿಡುತ್ತಾರೆ. ಇನ್ನೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಲವ್ ಇದೆ ಎಂಬ ರೂಮರ್‍ ಸುಮಾರು ದಿನಗಳಿಂದ ಹರಿದಾಡುತ್ತಿದೆ. ಈ ರೂಮರ್‍ ಗಳಿಗೆ ರಶ್ಮಿಕಾ ಸಹ ಅನೇಕ ಬಾರಿ ರಿಯಾಕ್ಟ್ ಆಗಿದ್ದಾರೆ.  ಲಿಮಿಟ್ ಮೀರಬಾರದೆಂದು ವಾರ್ನ್ ಸಹ ಮಾಡಿದ್ದರು. ಆದರೆ ಅವರಿಬ್ಬರೂ ಜೊತೆಯಲ್ಲಿ ಕಾಣಿಸುವುದು, ವೇಕೇಷನ್ ಗೆ ಹೋಗುವುದು ಅಲ್ಲಿನ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಸಹ ಆಗಿತ್ತು. ಬಳಿಕ ಅವರ ನಡುವಣ ಇರುವುದು ಲವ್ ಅಥವಾ ಸ್ನೇಹಾ ಎಂಬುದು ಇನ್ನೂ ನಿಗೂಡವಾಗಿಯೇ ಇದೆ. ಇದೀಗ ಮತ್ತೊಂದು ರೂಮರ್‍ ಸಹ ಹರಿದಾಡಲು ಶುರುವಾಗಿದೆ.

ಹೊಸ ರೂಮರ್‍ ನಂತೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬ್ರೇಕಪ್ ಮಾಡಿಕೊಂಡಿದ್ದಾರಂತೆ. ಸೈಲೆಂಟ್ ಆಗಿ ಇಬ್ಬರೂ ಬೇರೆ ಬೇರೆಯಾಗಿದ್ದಾರಂತೆ. ಈ ಸುದ್ದಿಯನ್ನು ವಿವಾದಾತ್ಮಕ ಟ್ವೀಟ್ ಮಾಡುವಂತಹ ಫಿಲಂ ಕ್ರಿಟಿಕ್ ಉಮೈರ್‍ ಸಂಧು ಟ್ವೀಟ್ ಮೂಲಕ ತಿಳಿಸಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬೇರೆಯಾಗಿದ್ದಾರೆ. ಆದರೆ ಹೊಸ ಲವರ್‍ ಅನ್ನು ವಿಜಯ್ ದೇವರಕೊಂಡ ಹುಡುಕಿಕೊಂಡಿದ್ದಾನೆ. ಆಕೆಯೊಂದಿಗೆ ಈಗಾಗಲೇ ಲವ್ ಟ್ರಾಕ್ ಶುರು ಮಾಡಿದ್ದಾನೆ.  ಖುಷಿ ಸಿನೆಮಾದ ಬಳಿಕ ವಿಜಯ್ ಸಮಂತಾರೊಂದಿಗೆ ಪ್ರೀತಿಗೆ ಬಿದ್ದಿದ್ದಾರೆ. ಕಾಶ್ಮೀರ್‍ ನಲ್ಲಿ ಖುಷಿ ಸಿನೆಮಾ ಶೂಟಿಂಗ್ ನಡೆಯುತ್ತಿದ್ದಾಗ ಅವರು ಪ್ರೀತಿಗೆ ಬಿದ್ದರು. ಇಬ್ಬರೂ ಒಂದೇ ಹೋಟೆಲ್ ನಲ್ಲಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಹೊಸ ಟ್ವಿಟ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ವಿವಾದ ಶುರುವಾಗಿದೆ. ಉಮೈರ್‍ ಸಂಧು ವಿರುದ್ದ ಸಮಂತಾ ಅಭಿಮಾನಿಗಳು ಹಾಗೂ ವಿಜಯ್ ಅಭಿಮಾನಿಗಳೂ ಸಹ ಆಕ್ರೋಷ ಹೊರಹಾಕುತ್ತಿದ್ದಾರೆ. ಸದಾ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಬಗ್ಗೆ ಇಂತಹ ವಿವಾದಾತ್ಮಕ ಪೋಸ್ಟ್ ಗಳನ್ನು ಹಾಕುವ ಮೂಲಕ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇನ್ನೂ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳು ಉಮೈರ್‍ ಸಂಧು ಟ್ವೀಟ್ ಗೆ ಖಾರವಾಗಿಯೇ ರಿಯಾಕ್ಟ್ ಆಗುತ್ತಾ ಅಸಭ್ಯಕರವಾದ ಕಾಮೆಂಟ್ ಗಳ ಮೂಲಕ ತಮ್ಮ ಆಕ್ರೋಷ ಹೊರಹಾಕುತ್ತಿದ್ದಾರೆ.