ಪ್ರಸಿದ್ದ ಕಾಮಾಖ್ಯ ದೇವಿಯ ದೇವಾಲಯದಲ್ಲಿ ಕಾಣಸಿಕೊಂಡ ಸಂಯುಕ್ತಾ ಮಿನನ್, ವೈರಲ್ ಆದ ಪೊಟೋಸ್……!

Follow Us :

ಸೌತ್ ಸಿನಿರಂಗದಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ ಕ್ರೇಜ್ ಪಡೆದುಕೊಂಡ ಸಂಯುಕ್ತಾ ಮಿನನ್ ಇದೀಗ ಕ್ರೇಜಿ ನಟಿಯಾಗಿದ್ದಾರೆ. ಇತ್ತಿಚಿಗಷ್ಟೆ ಆಕೆ ಹ್ಯಾಟ್ರಿಕ್ ಗೆಲುವು ಪಡೆದುಕೊಂಡ ಸಂಯುಕ್ತಾ ಮಿನನ್ ರವರನ್ನು ಗೋಲ್ಡನ್ ಲೆಗ್ ಎಂತಲೂ ಕರೆಯಲಾಗುತ್ತಿದೆ. ಕೊನೆಯದಾಗಿ ಆಕೆ ನಂದಮೂರಿ ಕಲ್ಯಾಣ್ ರಾಮ್ ಜೊತೆಗೆ ಡೆವಿಲ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಂಯುಕ್ತಾ ಮಿನನ್ ಅಸ್ಸಾಂನಲ್ಲಿರುವ ಶಕ್ತಿ ದೇವತೆ ಕಾಮಾಖ್ಯ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ಸಂಯುಕ್ತಾ ಮಿನನ್ ಸಿನೆಮಾಗಳಲ್ಲಿ ನಟಿಸಿದರೇ ಆ ಸಿನೆಮಾ ಹಿಟ್ ಪಕ್ಕಾ ಎಂಬ ಸೆಂಟಿಮೆಂಟ್ ಇಂಡಸ್ಟ್ರಿಯಲ್ಲಿ ಮಾತಿದೆ. ಇತ್ತೀಚಿಗೆ ಆಕೆ ನಟಿಸಿದ ಎಲ್ಲಾ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡಿದೆ. ಹ್ಯಾಟ್ರಿಕ್ ಹಿಟ್ ಗಳನ್ನು ಪಡೆದುಕೊಂಡ ಸಂಯುಕ್ತಾ ರನ್ನು ಗೋಲ್ಡನ್ ಲೆಗ್ ಎಂದೇ ಕರೆಯಲಾಗುತ್ತದೆ. ಮಲಯಾಳಂ ಮೂಲದ ನಟಿಯಾದ ಸಂಯುಕ್ತಾ ಮಿನನ್ ಭೀಮ್ಲಾ ನಾಯಕ್ ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಸಂಯುಕ್ತಾ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡರು. ಕನ್ನಡದ ಗಾಳಿಪಟ-2 ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಸೌತ್ ನಲ್ಲಿ ಸಕ್ಸಸ್ ಪಡೆದುಕೊಂಡ ಸಂಯುಕ್ತಾ ಇದೀಗ ಬಾಲಿವುಡ್ ಅಂಗಳಕ್ಕೆ ಕಾಲಿಡಲು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಕೆರಿಯರ್‍ ನಲ್ಲಿ ಬ್ಯುಸಿಯಾಗಿರುವ ಸಂಯುಕ್ತಾ ಮಿನ್ನ ಅಸ್ಸಾಂನಲ್ಲಿರುವ ಖ್ಯಾತ ದೇವಾಲಯಗಳಲ್ಲಿ ಒಂದಾದ ಕಾಮಾಖ್ಯ ದೇವಿಯ ದರ್ಶನ ಪಡೆದುಕೊಂಡಿದ್ದಾರೆ. 51 ಶಕ್ತಿ ಪೀಠಗಳಲ್ಲಿ ಈ ದೇವಾಲಯ ನಾಲ್ಕನೇ ಶಕ್ತಿ ಪೀಠವಾಗಿದೆ. ಸುಮಾರು ಬಾರಿ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಸಹ ಈ ದೇವಾಲಯದ ಬಗ್ಗೆ ಹೇಳಿದ್ದಾರೆ. ಈ ದೇವಾಲಯಕ್ಕೆ ಅನೇಕ ಬಾಲಿವುಡ್, ಟಾಲಿವುಡ್ ಹಿರೋಯಿನ್ ಗಳು ಭೇಟಿ ನೀಡಿ ಪ್ರತ್ಯೇಕ ಪೂಜೆ ಸಲ್ಲಿಸಿದ್ದಾರೆ. ಈ ದೇವಾಲಯಕ್ಕೆ ಭೇಟಿ ನೀಡಿದ ಅನೇಕ ನಟಿಯರು ಕೆರಿಯರ್‍ ಪರವಾಗಿ ಸಕ್ಸಸ್ ಕಂಡಿರುವುದಾಗಿ ಸಹ ಹೇಳಲಾಗಿದೆ. ಇದೀಗ ನಟಿ ಸಂಯುಕ್ತಾ ಮಿನನ್ ಈ ದೇವಾಲಯವನ್ನು ಯಾವ ಕಾರಣಕ್ಕಾಗಿ ದರ್ಶನ ಮಾಡಿದರು ಎಂಬ ವಿಚಾರವನ್ನು ಆಕೆ ಹೇಳಬೇಕಿದೆ.

ಇನ್ನೂ ಸಂಯುಕ್ತಾ ಮಿನನ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಹಿಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆ ಸಂಭಾವನೆ ಸಹ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸೌಂದರ್ಯದ ಜೊತೆಗೆ ಅಭಿನಯದ ಕಲೆ ಇರುವ ಸಂಯುಕ್ತಾ ಮಿನನ್ ಸೌತ್ ಸ್ಟಾರ್‍ ಹಿರೋಗಳ ಜೊತೆಗೆ ನಟಿಸಬೇಕೆಂಬ ಅಭಿಪ್ರಾಯವನ್ನು ಅವರ ಫ್ಯಾನ್ಸ್ ಹೊರಹಾಕುತ್ತಿದ್ದಾರೆ.