ಭಾವಿ ಪತಿಯನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ, ನನ್ನ ಕಣ್ಣಿಗೆ ಅವರು ಸುಂದರವಾಗಿ ಕಾಣ್ತಾರೆ ಎಂದ ವರಲಕ್ಷ್ಮೀ….!

Follow Us :

ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಆಗಿ ಖ್ಯಾತಿ ಪಡೆದುಕೊಂಡಿರುವ ವರಲಕ್ಷ್ಮೀ ಶರತ್ ಕುಮಾರ್‍ ರವರು ವಿಭಿನ್ನ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟಿಯಾಗಬೇಕೆಂಬ ಉದ್ದೇಶದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಲೇಡಿ ವಿಲನ್ ಆಗಿ ಫೇಂ ಪಡೆದುಕೊಂಡರು. ಸ್ಟಾರ್‍ ಕಿಡ್ ಆದರೂ ಸಹ ಸ್ವಂತ ಪ್ರತಿಭೆಯಿಂದ ಸಕ್ಸಸ್ ಕಂಡುಕೊಂಡಂತಹ ನಟಿಯಾಗಿದ್ದಾರೆ. ಇದೀಗ ತನ್ನ ಭಾವಿ ಪತಿಯನ್ನು ಟ್ರೋಲ್ ಮಾಡಿದವರಿಗೆ ಖಡಕ್ ಕೌಂಟರ್‍ ಕೊಟ್ಟಿದ್ದಾರೆ.

ಇತ್ತೀಚಿಗಷ್ಟೆ ನಟಿ ವರಲಕ್ಷ್ಮೀ ಶರತ್ ಕುಮಾರ್‍ ನಿಕೋಲಯ್ ಸಚ್ ದೇವ್ ಎಂಬಾತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರ್ಯಕ್ರಮ ಕಳೆದ ಮಾರ್ಚ್ ಮಾಹೆಯಲ್ಲಿ ನಡೆಯಿತು. ಈ ನಿಶ್ಚಿತಾರ್ಥದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇತ್ತೀಚಿಗೆ ಆತನ ವಿರುದ್ದ ನೆಗೆಟೀವ್ ಕಾಮೆಂಟ್ ಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣದಿಂದ ಆಕೆ ಬೇಸರ ಮಾಡಿಕೊಂಡಿಲ್ಲ. ಈ ಟ್ರೋಲ್ ಗಳಿಗೆ ಆಕೆ ಸರಿಯಾಗಿಯೇ ಕೌಂಟರ್‍ ಸಹ ಕೊಟ್ಟಿದ್ದಾರೆ. ಇತ್ತೀಚಿಗೆ ಆಕೆ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಅಷ್ಟಕ್ಕೂ ವರಲಕ್ಷ್ಮೀ ತನ್ನ ಭಾವಿ ಪತಿಯ ವಿರುದ್ದ ಕೇಳಿಬಂದ ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಮುಂಬೈ ಮೂಲದ ಗ್ಯಾಲರಿಸ್ಟ್ ಹಾಗೂ ಪವರ್‍ ಲಿಫ್ಟರ್‍ ಆಗಿರುವ ನಿಕೋಲಯ್ ಸಚ್ ದೇವ್ ರವರಿಗೆ ಮದುವೆಯಾಗಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೀಗ ಆತನೊಂದಿಗೆ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್‍ ಮದುವೆಯಾಗಲಿದ್ದಾರೆ. ಇದೀಗ ಎಲ್ಲಾ ವಿಚಾರಗಳ ಬಗ್ಗೆ ಮಾದ್ಯಮದೊಂದಿಗೆ ವರಲಕ್ಷ್ಮೀ ಮಾತನಾಡಿದ್ದಾರೆ. ನನ್ನ ತಂದೆ  ಸಹ ಎರಡನೇ ಮದುವೆಯಾಗಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅವರ ಬಗ್ಗೆ ಜನರು ಮಾತನಾಡುವುದನ್ನೂ ನಾನು ಕೇಳಿದ್ದೇನೆ. ನನ್ನ ಕಣ್ಣಿಗೆ ಅವರು ಹ್ಯಾಂಡ್ಸಮ್ ಆಗಿದ್ದಾರೆ.ನಮ್ಮ ಸಂಬಂಧದ ಬಗ್ಗೆ ಟ್ರೋಲ್ ಮಾಡುವುವವರ ಬಗ್ಗೆ ನಾನು ಕೇರ್‍ ಮಾಡೋದೇ ಇಲ್ಲ. ಬೇರೆಯವರಿಗೆ ನಾನ್ಯಾಕೆ ಉತ್ತರ ಕೊಡಬೇಕು. ಮೊದಲಿನಿಂದ ನಾನು ಅದನ್ನು ಅವಾಯ್ಡ್ ಮಾಡಿಕೊಂಡು ಬಂದಿದ್ದೇನೆ. ನಿಕ್ ಹಾಗೂ ಅವರ ಪುತ್ರಿ ಪವರ್‍ ಲಿಫ್ಟಿಂಗ್ ನಲ್ಲಿ ಗೋಲ್ಡ್ ಮೆಡಲ್ ಗೆದಿದ್ದಾರೆ. ಅವರ ಮಾಜಿ ಪತ್ನಿಯೊಂದಿಗೆ ನಾನೂ ಆತ್ಮೀಯವಾಗಿಯೇ ಇದ್ದೀನಿ ಎಂದು ಟ್ರೋಲರ್‍ ಗಳಿಗೆ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ.