Film News

ಬಾಲಕೃಷ್ಣ ರವರಿಗಿರುವ ಅಭ್ಯಾಸಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಅಳಿಯ, ಸದಾ ಒಂದು ಬಾಟಲ್ ಅವರ ಬಳಿಯಿರುತ್ತಂತೆ….!

ಟಾಲಿವುಡ್ ಸ್ಟಾರ್‍ ನಟ ಬಾಲಕೃಷ್ಣರವರು ಅತ್ತ ಸಿನೆಮಾಗಳು ಹಾಗೂ ರಾಜಕೀಯ ಎರಡನ್ನು ಸಮರೋಪಾದಿಯಲ್ಲಿ ಸಾಗಿಸಿಕೊಂಡು ಹೋಗುತ್ತಿದ್ದಾರೆ. ಕೊನೆಯದಾಗಿ ಅವರು ಭಗವಂತ್ ಕೇಸರಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಆಂಧ್ರದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಾಲಕೃಷ್ಣರವರ ಅಳಿಯ ಬಾಲಕೃಷ್ಣರವರಿಗಿರುವ ಮದ್ಯ ಸೇವನೆಯ ಅಭ್ಯಾಸದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಸಂಬಂಧ ಹಳೇಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟ ಬಾಲಕೃಷ್ಣ ರವರಿಗೆ ಮದ್ಯ ಸೇವನೆಯ ಅಭ್ಯಾಸ ಇದೆ ಎಂಬ ವಾದವೊಂದು ಪ್ರಚಲಿತದಲ್ಲಿದೆ. ಈ ವಾದವನ್ನು ಬಲಪರಿಸುವಂತಹ ಕಾಮೆಂಟ್ ಗಳನ್ನು ಸಹ ಬಾಲಕೃಷ್ಣ ಮಾಡಿದ್ದರು. ಅನ್ ಸ್ಟಾಪಬುಲ್ ಶೋ ವೇದಿಕೆಯಲ್ಲಿ ಅತಿಥಿಗಳೊಂದಿಗೆ ಇದೇ ಪ್ರಸ್ತಾಪವನ್ನು ಸಹ ಮಾಡಿದ್ದರು. ಸಂಜೆಯಾದರೆ ಪೆಗ್ ಹಾಕಲೇ ಬೇಕು ಎಂದು ಕಾಮೆಂಟ್ ಮಾಡಿದ್ದರು. ಆತ ಒಂದೇ ಬ್ರಾಂಡ್ ಬಳಸುತ್ತಾರಂತೆ. ಅವರಿಗೆ ಮ್ಯಾನ್ಷನ್ ಹೌಸ್ ಎಂದರೇ ತುಂಬಾನೆ ಇಷ್ಟವಂತೆ. 2019 ರ ಚುನಾವಣೆಗೂ ಮುಂಚೆ ಮೆಗಾ ಕುಟುಂಬದ ನಾಗಬಾಬು ಸಹ ಬಾಲಕೃಷ್ಣರವರ ಇಮೇಜ್ ಡ್ಯಾಮೇಜ್ ಮಾಡುವಂತಹ ಕೆಲವೊಂದು ಕಾಮೆಂಟ್ಸ್ ಮಾಡಿದ್ದರು. ಜೊತೆಗೆ ನಮ್ಮ ಬ್ಲಡ್ ಬೇರೆ, ನಮ್ಮ ಬ್ರಾಂಡ್ ಬೇರೆ ಎಂದು ಕಾಮೆಂಟ್ ಮಾಡಿ ಮ್ಯಾನ್ಷನ್ ಹೌಸ್ ಬಾಟಲ್ ಇಮೇಜ್ ಸಹ ಹಾಕಿದ್ದರು.

ಇನ್ನೂ ಈ ಕುರಿತು ಬಾಲಕೃಷ್ಣ ರವರ ಕಿರಿಯ ಅಳಿಯ ಶ್ರೀಭರತ್ ಸಂದರ್ಶವೊಂದರಲ್ಲಿ ಒಪೆನ್ ಆಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡುತ್ತಾ, ನಮ್ಮ ಮಾವ ಮ್ಯಾನ್ಷನ್ ಹೌಸ್ ಕುಡಿಯುತ್ತಾರೆ ಎಂದು ತಿಳಿದ ಬಳಿಕ ಆ ಕಂಪನಿ ಸ್ಟಾಕ್ಸ್ ಬೆಲೆ ಬೆಳೆಯಿತು. ಅವರು ಹಾಟ್ ವಾಟರ್‍ ನಲ್ಲಿ ಮ್ಯಾನ್ಷನ್ ಹೌಸ್ ಮಿಕ್ಸ್ ಮಾಡಿಕೊಂಡು ಕುಡಿಯುತ್ತಾರಾ ಎಂದು ಆಂಕರ್‍ ಕೇಳಿದ್ದಾರೆ. ಅದಕ್ಕೆ ಉತ್ತರಿಸಿ ಭರತ್ ಹೌದು ಎಂದು ಒಪ್ಪಿಕೊಂಡಿದ್ದಾರೆ. ಅವರ ಬಳಿ ಒಂದು ಬ್ಯಾಗ್ ಇರುತ್ತದೆ. ಅದರಲ್ಲಿ ಹಾಟ್ ವಾಟರ್‍ ಹಾಗೂ ಮದ್ಯದ ಬಾಟಲ್ ಇರು‌ತ್ತದೆ. ಅವರು ಎಲ್ಲಿ ಹೋದರೂ ಆ ಬ್ಯಾಗ್ ಅವರೊಂದಿಗೆ ಇರಬೇಕು. ಅಮೇರಿಕಾ ಹೋದರೂ ಸಹ ಬ್ಯಾಗ್ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Most Popular

To Top