Film News

ಬಹುನಿರೀಕ್ಷಿತ ಕಾಂತಾರ ಪ್ರೀಕ್ವೆಲ್ ಸಿನೆಮಾದ ಶೂಟಿಂಗ್ ಗೆ ಸಿದ್ದತೆ, ಕುಂದಾಪುರದಲ್ಲಿ ಬೃಹತ್ ಸೆಟ್ ನಿರ್ಮಾಣ….!

ಸ್ಯಾಂಡಲ್ ವುಡ್ ನಲ್ಲಿ ಸಾಮಾನ್ಯ ಸಿನೆಮಾದಂತೆ ತೆರೆಕಂಡು ಪ್ಯಾನ್ ಇಂಡಿಯಾ ಸಿನೆಮಾ ಆಗಿ ಕ್ರೇಜ್ ಪಡೆದುಕೊಂಡ ಕಾಂತಾರ ಸಿನೆಮಾವನ್ನು ಇಡೀ ದೇಶದ ಸಿನಿರಂಗವೇ ಮೆಚ್ಚಿದೆ. ಬಾಕ್ಸ್ ಆಫೀಸ್ ನಲ್ಲೂ ಭಾರಿ ಕಲೆಕ್ಷನ್ ಮಾಡಿತ್ತು. ಇದೀಗ ಕಾಂತಾರ ಪ್ರೀಕ್ವೇಲ್ ಘೋಷಣೆ ಮಾಡಿದ್ದು, ಈ ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ಕಾಂತಾರ-1 ಸಿನೆಮಾದ ಚಿತ್ರೀಕರಣಕ್ಕಾಗಿ ಕರ್ನಾಟಕದ ಕುಂದಾಪುರದಲ್ಲಿ ಭಾರಿ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸ್ಯಾಂಡಲ್ ವುಡ್ ಸ್ಟಾರ್‍ ನಟ ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ-1 ಸಿನೆಮಾ ಘೋಷಣೆಯಾಗಿ ತಿಂಗಳುಗಳು ಕಳೆದಿದೆ. ಚಿತ್ರತಂಡ ಇಷ್ಟೂ ದಿನ ಸ್ಕ್ರಿಪ್ಟ್, ಲೊಕೇಷನ್, ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿತ್ತು. ಇದೀಗ ಈ ಸಿನೆಮಾದ ಚಿತ್ರೀಕರಣಕ್ಕಾಗಿ ಕುಂದಾಪುರದಲ್ಲಿ ಭಾರಿ ಸೆಟ್ ನಿರ್ಮಾಣ ಮಾಡಿದೆ. ರಾಮೋಜಿ ಫಿಲಂ ಸಿಟಿ ಬಿಟ್ಟರೇ ಈ ಮಾದರಿಯಲ್ಲಿ ಎಲ್ಲೂ ಸೆಟ್ ನಿರ್ಮಾಣವಾಗಿಲ್ಲ ಎನ್ನಲಾಗಿದೆ. 200 x 200 ಅಡಿ ಒಳಾಂಗಣ ಹೊಂದಿರುವಂತಹ ಬೃಹತ್ ಸೆಟ್ ಅನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ ಎಂದು ಹೇಳಲಾಗಿದೆ. ಕಾಡಿನ ಮಧ್ಯೆ ಕೆಲವೊಂದು ದೃಶ್ಯಗಳನ್ನು ರಿಷಭ್ ಚಿತ್ರೀಕರಿಸಿದ್ದಾರೆ. ಇನ್ನೂ ಬಹುತೇಖ ಚಿತ್ರೀಕರಣ ಇದೇ ಸೆಟ್ ನಲ್ಲಿ ನಡೆಯಲಿದೆಯಂತೆ. ಕುದುರೆ ಸವಾರಿಯಂತಹ ಅನೇಕ ದೃಶ್ಯಗಳನ್ನು ಚಿತ್ರೀಕರಣ ಮಾಡುವಷ್ಟು ದೊಡ್ಡದಾಗಿ ನಿರ್ಮಾಣವಾಗಿದ್ದು, ಡಬ್ಬಿಂಗ್, ಎಡಿಟಿಂಗ್ ಸ್ಟುಡಿಯೋ ಸಹ ಅಲ್ಲಿಯೇ ನಿರ್ಮಿಸಲಾಗಿದೆಯಂತೆ.

ಇನ್ನೂ ನಟ ರಿಷಭ್ ಶೆಟ್ಟಿ ಈಗಾಗಲೇ ಚಿತ್ರೀಕರಣ ಸಹ ಶುರು ಮಾಡಿದ್ದಾರಂತೆ. 20 ದಿನಗಳ ಕಾಲ ಮೊದಲ ಹಂತದ ಶೂಟಿಂಗ್ ನಡೆಯಲಿದೆಯಂತೆ. ಜೊತೆಗೆ ಈಗಾಗಲೇ ಕೆಲವೊಂದು ದೃಶ್ಯಗಳನ್ನು ಕಾಡಿನಲ್ಲಿ ಸೆರೆ ಹಿಡಿಯಲಾಗಿದೆಯಂತೆ. ಸೆಟ್ ನಲ್ಲೂ ಸಹ ಮುಂದಿನ ಚಿತ್ರೀಕರಣ ಮುಂದುವರೆಯಲಿದೆ ಎನ್ನಲಾಗಿದೆ. ಸದ್ಯ ಕಾಂತಾರ ಚಿತ್ರತಂಡ ಕುಂದಾಪುರದಲ್ಲಿ ವಾಸ್ತವ್ಯ ಹೂಡಿದೆ. ಕಥೆಯ ಸಾರಾಂಶವನ್ನು ಹೇಳುವಂತಹ ದೃಶ್ಯಗಳು ಚಿತ್ರೀಕರಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರಗಳ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಇದೀಗ ಕಾಂತಾರ-1 ಶೂಟಿಂಗ್ ಸೆಟ್ ನ ಕೆಲವೊಂದು ಪೊಟೋಗಳು ಲೀಕ್ ಆಗದಂತೆ ರಿಷಭ್ ಶೆಟ್ಟಿ ಹಾಗೂ ಚಿತ್ರತಂಡ ತುಂಬಾನೆ ಎಚ್ಚರಿಕೆ ವಹಿಸಿದೆ ಎನ್ನಲಾಗಿದೆ.

ಇನ್ನೂ ಕಡಿಮೆ ಬಜೆಟ್ ನಲ್ಲಿ ಸಾಮಾನ್ಯ ಸಿನೆಮಾದಂತೆ ಕಾಂತಾರ ಸಿನೆಮಾ ಬಿಡುಗಡೆಯಾಗಿತ್ತು. ಈ ಸಿನೆಮಾ ನೋಡಿದಂತಹ ಸೂಪರ್‍ ಸ್ಟಾರ್‍ ರಜನಿಕಾಂತ್, ಪ್ರಭಾಸ್, ಅನುಷ್ಕಾ, ಧನುಷ್ ರಂತಹ ಅನೇಕ ಸ್ಟಾರ್‍ ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕಾಂತಾರ-1 ಸಿನೆಮಾದ ಟೈಟಲ್, ಟೀಸರ್‍ ಬಿಡುಗಡೆಯಾಗಿದ್ದು, ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟುವಂತೆ ಮಾಡಿದೆ.

Most Popular

To Top