ಅವರ ಗರ್ಲ್ ಫ್ರೆಂಡ್ ರನ್ನು ಹಿರೋಯಿನ್ ಮಾಡಲು ನನ್ನನ್ನು ತೆಗೆದು ಹಾಕಿದರು ಎಂದ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ…..!

Follow Us :

ಸಿನಿರಂಗದಲ್ಲಿ ಆಗಾಗ ಕೆಲವೊಂದು ಘಟನೆಗಳ ಬಗ್ಗೆ ಸುದ್ದಿಗಳು ಕೇಳಿಬರುತ್ತಿರುತ್ತದೆ. ಒಬ್ಬರಿಗೆ ಅವಕಾಶಗಳು ಬರುವುದು ಅದು ರಿಜೆಕ್ಟ್ ಆಗುವುದರ ಹಿಂದೆ ನಾನಾ ರೀತಿಯ ಉದಾಹರಣೆಗಳೂ ಸಹ ಇರುತ್ತದೆ. ಈ ಕುರಿತು ಕೆಲ ಸೆಲೆಬ್ರೆಟಿಗಳು ಆಗಾಗ ವಿಚಾರ ತಿಳಿಸುತ್ತಿರುತ್ತಾರೆ. ಅಂತಹ ಘಟನೆಗಳ ಬಗ್ಗೆ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೊಪ್ರಾ ಸಂದರ್ಶನಗಳಲ್ಲಿ ಹೇಳುತ್ತಿರುತ್ತಾರೆ. ಇದೀಗ ತಮಗಾದ ಅನುಭವದ ಕುರಿತು ಶಾಕಿಂಗ್ ವಿಚಾರವನ್ನು ಹೊರಹಾಕಿದ್ದಾರೆ.

ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಪ್ರಿಯಾಂಕಾ ತಮಗಿಂತ 10 ವರ್ಷ ಚಿಕ್ಕವನಾದ ಹಾಲಿವುಡ್ ಸಿಂಗರ್‍ ಕಂ ಆಕ್ಟರ್‍ ನಿಕ್ ಜೋನಸ್ ಜೊತೆಗೆ ಪ್ರೇಮ ಪಯಣ ಸಾಗಿಸಿ, ಸುಮಾರು ವರ್ಷಗಳ ಕಾಲ ಡೇಟಿಂಗ್ ನಡೆಸಿ, ಕಳೆದ 2018ರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಆಕೆ ನ್ಯೂಯಾರ್ಕ್ ನಲ್ಲೇ ಸೆಟಲ್ ಆಗಿದ್ದಾರೆ. ಅಲ್ಲೇ ದುಬಾರಿ ಮನೆಯೊಂದನ್ನು ಸಹ ಖರೀದಿಸಿ ಸೆಟಲ್ ಆಗಿದ್ದಾರೆ. ಇನ್ನೂ ಪ್ರಿಯಾಂಕ ಚೋಪ್ರಾ ಏನೆ ಮಾಡಿದರೂ ಕಡಿಮೆ ಸಮಯದಲ್ಲೇ ಸುದ್ದಿಯಾಗುತ್ತಿರುತ್ತಾರೆ. ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ಪ್ರಿಯಾಂಕಾ ಚೋಪ್ರಾ ಇದೀಗ ತನ್ನ ಕೆರಿಯರ್‍ ನಲ್ಲಿ ಎದುರಾದಂತಹ ಕೆಟ್ಟ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ತನ್ನ ಸಿನಿರಂಗದಲ್ಲಿ ಎದುರಿಸಿ ರಿಜೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ಸದ್ಯ ಆಕೆ ಹೆಡ್ ಆಫ್ ಸ್ಟೇಟ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಆಕೆ ಮಿಡಿಯಾದೊಂದಿಗೆ ಮಾತನಾಡಿದ್ದಾರೆ. ಈ ವೇಲೆ ತನ್ನ ಕೆರಿಯರ್‍ ನಲ್ಲಿ ಎದುರಿಸಿದ ರಿಜೆಕ್ಷನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಾನು ಸದಾ ರಿಜೆಕ್ಷನ್ ಎದುರಿಸುತ್ತಿರುತ್ತೇನೆ. ಅದು ಆ ಕ್ಷಣ ಕಷ್ಟ ಅನ್ನಿಸುತ್ತದೆ. ಆದರೆ ರಿಜೆಕ್ಷನ್ ನಿಂದ ಹೊರಬರಬೇಕಾದರೇ ನಾನು ಸಕ್ಸಸ್ ಮಾಡಿ ತೋರಿಸಬೇಕೆಂದು ನಂಬಿದ್ದೇನೆ ಎಂದು ಹೇಳಿದ್ದಾರೆ. ಆದರೆ ಆಕೆ ಯಾವ ಸಿನೆಮಾದಿಂದ, ಯಾವ ನಿರ್ದೇಶಕ ತನ್ನನ್ನು ಹೊರಹಾಕಿದರು ಎಂಬ ವಿಚಾರವನ್ನು ಮಾತ್ರ ಹೇಳಿಲ್ಲ. ಕೆರಿಯರ್‍ ಆರಂಭದಲ್ಲಿ ಆಕೆ ತುಂಬಾನೆ ಕಷ್ಟಗಳನ್ನು ಎದುರಿಸಿದ್ದರು. ಆದರೆ ಆಕೆ ಕಡಿಮೆ ಸಮಯದಲ್ಲೇ ತನ್ನ ಪವರ್‍ ಏನು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಆಕೆಯನ್ನು ಹಾಲಿವುಡ್ ಮಂದಿಯೇ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಗ್ಲೋಬಲ್ ಬ್ಯೂಟಿ ಎಂದೇ ಕರೆಯುತ್ತಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಆಕೆ ತನಗಿಂತ 10 ವರ್ಷ ಚಿಕ್ಕವನಾದ ನಿಕ್ ಜೋನಸ್ ಎಂಬಾತನೊಂದಿಗೆ ಮದುವೆಯಾದರು. ಕಳೆದೆರಡು ವರ್ಷಗಳ ಹಿಂದೆಯಷ್ಟೆ ಈ ಜೋಡಿಗೆ ಮಾಲ್ತೀ ಮೇರಿ ಮಗು ಜನಿಸಿತ್ತು. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ.