ವಿಮಾನ ನಿಲ್ದಾಣದಲ್ಲಿ ರೂಡ್ ಆಗಿ ವರ್ತಿಸಿದ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್, ವೈರಲ್ ಆದ ವಿಡಿಯೋ….!

Follow Us :

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟರಲ್ಲಿ ಸಂಜಯ್ ದತ್ ಸಹ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ಪೋಷಣೆ ಮಾಡುತ್ತಾ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಕಾಮಿಡಿ ಸಿನೆಮಾಗಳಿಂದ ಹಿಡಿದು ರೊಮ್ಯಾಂಟಿಕ್ ಸಿನೆಮಾಗಳ ವರೆಗೂ ನಟಿಸುವಂತ ಕಲೆಯನ್ನು ಹೊಂದಿದ್ದ ನಟ ಎಂದೇ ಹೇಳಬಹುದಾಗಿದೆ. ಆತ ಎಷ್ಟು ಸಕ್ಸಸ್ ಕಂಡಿದ್ದಾರೋ ಅಷ್ಟೆ ಸೋಲು ಸಹ ಕಂಡಿದ್ದಾರೆ. ಗ್ಯಾಂಗ್ ಸ್ಟರ್‍ ಆಗಿ, ಪೊಲೀಸ್ ಆಗಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದು, ಸೌತ್ ಸಿನಿಮಾಗಳಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ.

ಸದ್ಯ ಸಂಜಯ್ ದತ್ ರವರಿಗೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಕಾಣಿಸಿಕೊಂಡರೇ ಅವರೊಂದಿಗೆ ಸೆಲ್ಫಿಗಾಗಿ ಮುಗಿಬೀಳುವುದು ಸರ್ವೆ ಸಾಮಾನ್ಯ ಎನ್ನಬಹುದು. ಅದೇ ರೀತಿ ನಟ ಸಂಜಯ್ ದತ್ ರನ್ನು ನೋಡಿದ ಕೂಡಲೇ ಅಭಿಮಾನಿಗಳು ಆತನೊಂದಿಗೆ ಸೆಲ್ಫಿಗಾಗಿ ಮುಗಿಬಿದಿದ್ದಾರೆ.  ಆದರೆ ಈ ವೇಳೆ ಅವರ ಭದ್ರತಾ ಸಿಬ್ಬಂದಿ ಅವಕಾಶ ನೀಡಿಲಿಲ್ಲ. ಆದರೂ ಓರ್ವ ಅಭಿಮಾನಿ ಧೈರ್ಯ ಮಾಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಸಂಜತ್ ದತ್ ಅಭಿಮಾನಿಯನ್ನು ತಳ್ಳಿಹಾಕುತ್ತಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಸಂಜತ್ ದತ್ ರವರ ನಡತೆಯ ಬಗ್ಗೆ ವಿಮರ್ಶೆಗಳು ಸಹ ಜೋರಾಗಿದೆ.

ಇನ್ನೂ ಸಂಜಯ್ ದತ್ ರವರ ಈ ವಿಡಿಯೋ ವೈರಲ್ ಆಗುತ್ತಿದ್ದು, ವಿಮರ್ಶೆಗಳು ಸಹ ಕೇಳಿಬರುತ್ತಿವೆ. ಇನ್ನೂ ಈ ವಿಡಿಯೋ ನೋಡಿದರೇ ಸಂಜಯ್ ದತ್ ರವರಿಗೆ ಪೊಟೋಗಳಿಗೆ ಪೋಸ್ ಕೊಡುವಂತಹ ಮೂಡ್ ನಲ್ಲಿದ್ದಂತೆ ಕಾಣಿಸಿಕೊಂಡಿಲ್ಲ. ಜೊತೆಗೆ ಅಭಿಮಾನಿಗಳೊಂದಿಗೆ ಸಹ ಸಂಭಾಷಣೆ ಮಾಡಲಿಲ್ಲ. ವಿಮಾನ ನಿಲ್ದಾಣದಲ್ಲಿ ಉತ್ಸಾಹದಿಂದ ಇದ್ದಂತಹ ಅಭಿಮಾನಿಯ ಮೇಲೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆತನನ್ನು ತಳ್ಳಿಹಾಕಿದ್ದಾರೆ. ಸಂಜಯ್ ದತ್ ರವರ ಈ ವರ್ತನೆಯ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತದೆ. ಅಭಿಮಾನಿಗಳು ಇಲ್ಲ ಅಂದರೇ ತಾವು ಹೇಗೆ ನಟರಾಗುತ್ತಿದ್ದೀರೀ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಕಿಡಿಕಾರುತ್ತಿದ್ದಾರೆ.

ಇನ್ನೂ ಸಂಜಯ್ ದತ್ ಡಬುಲ್ ಇಸ್ಮಾರ್ಟ್ ಎಂಬ ಸಿನೆಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಸಿನೆಮಾ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ರಾಮ್ ಪೋತುನೇನಿ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆ. ಈ ಹಿಂದೆ ಸಂಜಯ್ ದತ್ ರವರ ಹುಟ್ಟುಹಬ್ಬದಂದು ಅವರ ಫಸ್ಟ್ ಲುಕ್ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿತ್ತು.