Film News

ಬ್ಲಾಕ್ ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟು ಅಭಿಮಾನಿಗಳನ್ನು ಮಸ್ಮರೈಜ್ ಮಾಡಿದ ಕೀರ್ತಿ ಸುರೇಶ್, ವೈರಲ್ ಆದ ಪೊಟೋಸ್….!

ಮಲಯಾಳಂ ಮೂಲದ ನಟಿ ಕೀರ್ತಿ ಸುರೇಶ್ ಅನೇಕ ಸಿನೆಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡ ನಟಿಯಾಗಿದ್ದಾರೆ. ಸಿನಿರಂಗದಲ್ಲಿ ಸಾಕಷ್ಟು ಸೋಲುಗಳನ್ನು ಕಂಡರೂ ಸಹ ಎದೆಗುಂದದೇ ತಮ್ಮ ಪ್ರಯತ್ನವನ್ನು ಮುಂದುವರೆಸಿ ಸಾಧನೆ ಮಾಡಿದ ನಟಿ ಕೀರ್ತಿ ಸುರೇಶ್. ಕೀರ್ತಿ ಅಭಿನಯದ ಸರ್ಕಾರು ವಾರಿ ಪಾಟ ಸಿನೆಮಾ ಆಕೆಗೆ ಬಿಗ್ ಬ್ರೇಕ್ ಕೊಟ್ಟಿತ್ತು. ಈ ಸಿನೆಮಾದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮೊದಲಿಗಿಂತ ಹೆಚ್ಚಾಗಿ ಹಾಟ್ ಪೋಸ್ ಕೊಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಬ್ಲಾಕ್ ಕಲರ್‍ ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟನೆಯ ಜೊತೆಗೆ ಸೌಂದರ್ಯವನ್ನು ಸಹ ಹೊಂದಿರುವ ನಟಿ ಕೀರ್ತಿ ಸಿನಿರಂಗದಲ್ಲಿ ಬೇಡಿಕೆಯಿರುವಂತಹ ನಟಿಯಾಗಿದ್ದಾರೆ. ಆಕೆಯ ತಾಕತ್ತು ಏನು ಎಂಬುದನ್ನು ಮಹಾನಟಿ ಸಿನೆಮಾದ ಮೂಲಕ ಪ್ರದರ್ಶನ ಮಾಡಿದರು. ಈ ಸಿನೆಮಾದ ಬಳಿಕ ಕೀರ್ತಿಗೆ ಅನೇಕ ಅವಕಾಶಗಳು ದೊರೆತವು. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕಾಗಿ ಜಾತಿಯ ಉತ್ತಮ ನಟಿಯಾಗಿ ಅವಾರ್ಡ್ ಸಹ ಪಡೆದುಕೊಂಡರು. ಇತ್ತೀಚಿಗಷ್ಟೆ ಮಹೇಶ್ ಬಾಬು ರವರ ಜೊತೆಗೆ ಸರ್ಕಾರು ವಾರಿ ಪಾಟ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ಕೀರ್ತಿ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ತೆಲುಗು ಸಿನಿರಂಗದಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಸಿನೆಮಾಗಳಲ್ಲಿ ನ್ಯಾಚುರಲ್ ಸ್ಟಾರ್‍ ನಾನಿ ಅಭಿನಯದ ದಸರಾ ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾದಲ್ಲಿ ನಾನಿಗೆ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

ಇನ್ನೂ ದಸರಾ ಸಿನೆಮಾ ಇದೇ ಮಾ.30 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೇ  ನಡೆಯುತ್ತಿವೆ. ಇನ್ನೂ ಪ್ರಮೋಷನ್ ಅಂಗವಾಗಿ ಕೀರ್ತಿ ಸುರೇಶ್ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಸಹ ಮಾಡಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಈವೆಂಟ್ ಒಂದರಲ್ಲಿ ಕೀರ್ತಿ ಸುರೇಶ್ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಡಿಸೈನರ್‍ ಸೀರೆಯಲ್ಲಿ ಕಾಣಿಸಿಕೊಂಡ ಈಕೆ ಟಾಕ್ ಆಫ್ ದಿ ಇಂಡಸ್ಟ್ರಿ ಆಗಿದ್ದಾರೆ. ಗ್ಲಾಮರಸ್ ಪೋಸ್ ಗಳ ಮೂಲಕ ಯುವಕರ ನಿದ್ದೆಗೆಡಿಸಿದ್ದಾರೆ. ಇನ್ನೂ ಆಕೆಯ ಮಾದಕ ನೋಟಕ್ಕೆ ಅನೇಕರು ಫಿದಾ ಆಗಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಹಾಟ್ ಹಾಟ್ ಕಾಮೆಂಟ್ ಗಳು, ಲೈಕ್ ಮಾಡುತ್ತಾ ಪೊಟೋಗಳನ್ನು ಸಹ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಾನಿ ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ನಲ್ಲಿ ಮೂಡಿಬಂದ ದಸರಾ ಸಿನೆಮಾ ಭಾರಿ ನಿರೀಕ್ಷೆಯನ್ನು ಮೂಡಿಸಿದೆ. ಈಗಾಗಲೇ ಈ ಸಿನೆಮಾದ ಟೀಸರ್‍, ಸಾಂಗ್ಸ್, ಪೋಸ್ಟರ್‍ ಗಳು ರಿಲೀಸ್ ಆಗಿದ್ದು ಸಿನೆಮಾದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಇನ್ನೂ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ರಿಲೀಸ್ ಆಗುತ್ತಿದ್ದು, ಈ ಸಿನೆಮಾದ ಮೇಲೆ ನಾನಿ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Most Popular

To Top