Film News

ಬ್ಲಾಕ್ ಕಲರ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟ ಮಲ್ಲು ಬ್ಯೂಟಿ, ಮಾದಕ ನೋಟ ಬೀರಿದ ಮಾಳವಿಕಾ…!

ಮಲ್ಲು ಬ್ಯೂಟಿ ಮಾಳವಿಕಾ ಮೋಹನನ್ ಸಿನಿರಂಗದಲ್ಲಿ ದಿನೇ ದಿನೇ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಳ್ಳುವ ಮೂಲಕ ಬ್ಯುಸಿಯಾಗುತ್ತಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಅನ್ನೋ ತರಹ ಸದಾ ಹಾಟ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಮಾರ್ಡನ್, ಟ್ರೆಂಡಿ, ಶಾರ್ಟ್ ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸಹ ಸಖತ್ ಹಾಟ್ ಆಗಿಯೇ ಪೋಸ್ ಕೊಡುತ್ತಾ ಫೇಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಸೀರೆಯಲ್ಲಿ ಪಡ್ಡೆಹುಡುಗರ ನಿದ್ದೇಗೆಡಿಸುವಂತ ಪೋಸ್ ಕೊಟ್ಟಿದ್ದಾರೆ.

ಮಲಯಾಳಂ ಮೂಲದ ನಟಿ ಮಾಳವಿಕಾ ಮೋಹನನ್  ಕಳೆದ 2013 ರಲ್ಲಿ ತೆರೆಗೆ ಬಂದ ಪಟ್ಟೆಂ ಪೊಲೆ ಎಂಬ ಮಲಯಾಳಂ ಸಿನೆಮಾದ ಮೂಲಕ ಹಿರೋಯಿನ್ ಆಗಿ ಎಂಟ್ರಿ ಕೊಟ್ಟರು. ಸೂಪರ್‍ ಸ್ಟಾರ್‍ ರಜನಿಕಾಂತ್ ಅಭಿನಯದ ಪೇಟ ಎಂಬ ಸಿನೆಮಾದಲ್ಲೂ ಸಹ ಮಾಳವಿಕ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ವಿಜಯ್ ದಳಪತಿ ಜೊತೆಗೆ ಮಾಸ್ಟರ್‍ ಸಿನೆಮಾದಲ್ಲೂ ಸಹ ನಟಿಸಿದ್ದರು. ಸದ್ಯ ತಮಿಳಿನಲ್ಲಿ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಸ್ ಮೂಲಕ ಯುವಕರ ನಿದ್ದೆ ಕದಿಯುವ ಕೆಲಸ ಮಾಡುತ್ತಿದ್ದಾರೆ. ಆಕೆ ಎಂತಹುದೇ ಡ್ರೆಸ್ ಧರಿಸಿದರೂ ಸಹ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಸದ್ಯ ಕಾಲಿವುಡ್ ನ ಬಹುನಿರೀಕ್ಷಿತ ತಂಗಲಾನ್ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ನಟಿ ಮಾಳವಿಕಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ವಿದೇಶಗಳಿಗೆ ವೆಕೇಷನ್ ಗೂ ಹಾರಿದ್ದರು. ಈ ವೇಳೆ ಸಹ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಆಕೆ ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಬ್ಲಾಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಟಾಪ್ ಗ್ಲಾಮರ್‍ ಶೋ ಮಾಡುತ್ತಾ, ಮಾದಕ ನೋಟ ಬೀರಿದ್ದಾರೆ. ಆಕೆಯ ಈ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳಿಗೆ ಮೆಚ್ಚುಗೆ ನೀಡುತ್ತಿದ್ದಾರೆ.

ಸದ್ಯ ನಟಿ ಮಾಳವಿಕಾ ಮೋಹನನ್ ಬಿಗ್ ಬಜೆಟ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ರವರ ಜೊತೆಗೆ ರಾಜಾ ಸಾಭ್ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿಯಲ್ಲಿ ಯುದ್ರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕಾಲಿವುಡ್ ನ ಬಹುನಿರೀಕ್ಷಿತ ಸೂರ್ಯ ರವರ ತಂಗಲಾನ್ ಎಂಬ ಸಿನೆಮಾದಲ್ಲಿ ಸಹ ಮಾಳವಿಕ ನಟಿಸುತ್ತಿದ್ದಾರೆ. ಈ ಸಿನೆಮಾದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಹಸ ಮೂಡಿದೆ.

Most Popular

To Top