ಮಹಿಳಾ ದಿನಾಚರಣೆ ಸ್ಪೇಷಲ್, ತಾಯಿಗಾಗಿ ಅಡುಗೆ ಮಾಡಿದ ರಾಮ್ ಚರಣ್, ವೈರಲ್ ಆದ ವಿಡಿಯೋ…..!

Follow Us :

RRR ಸಿನೆಮಾದ ಮೂಲಕ ಗ್ಲೊಬಲ್ ಸ್ಟಾರ್‍ ಆದ ರಾಮ್ ಚರಣ್ ಸದ್ಯ RC16 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡುತ್ತಿರುತ್ತಾರೆ. ಇದೀಗ ಮಹಿಳಾ ದಿನಾಚರಣೆಯ ಅಂಗವಾಗಿ ರಾಮ್ ಚರಣ್ ತಾಯಿಗಾಗಿ ಅಡುಗೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಚೆಫ್ ಆಗಿ ಅವತಾರಾ ತಾಳಿದ ರಾಮ್ ಚರಣ್ ವಿಡಿಯೋ ವನ್ನು ಅವರ ಪತ್ನಿ ಉಪಾಸನಾ ಹಂಚಿಕೊಂಡಿದ್ದಾರೆ.

ನಟ ರಾಮ್ ಚರಣ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದೇ ಹೇಳಬಹುದಾಗಿದೆ. ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಸಮಯ ಸಿಕ್ಕಾಗೆಲ್ಲಾ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಕೆಲವು ಸಿನಿಮಾ ಸೆಲೆಬ್ರೆಟಿಗಳು ತಮ್ಮ ತಾಯಿ, ಅಕ್ಕಾ ತಂಗಿ ಯವರಿಗೆ ಶುಭಾಷಯ ಕೋರಿದ್ದಾರೆ. ಅದೇ ರೀತಿ ರಾಮ್ ಚರಣ್ ಸಹ ಸ್ಪೇಷಲ್ ಆಗಿ ಮಹಿಳಾ ದಿನಾಚರಣೆ ಆಚರಣೆ ಮಾಡಿದ್ದಾರೆ. ಮನೆಯಲ್ಲಿರುವ ಮಹಿಳೆಯರಿಗಾಗಿ ರುಚಿಕರವಾದ ಊಟ ತಯಾರಿಸಿದ್ದಾರೆ. ಚರಣ್ ತಾಯಿ ಸುರೇಖಾ ಜೊತೆಗೆ ಮನೆಯಲ್ಲಿ ಅಡುಗೆ ಮಾಡುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಉಪಾಸನಾ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇನ್ನೂ ವಿಡಿಯೋ ದಲ್ಲಿ ಉಪಾಸನಾ ಹಂಚಿಕೊಂಡ ವಿಡಿಯೋದಲ್ಲಿ ಅತ್ತೆ ಈ ದಿನ ಅಡುಗೆ ಮನೆಯಲ್ಲಿ ಏನಾಗುತ್ತಿದೆ ಎಂದು ಕೇಳಿದರೇ, ಸುರೇಖಾ ಏನಾಗುತ್ತಿದೆ ದೋಸೆ ಆಗುತ್ತಿದೆ. ನನ್ನ ಮಗ ನನಗಾಗಿ ಅಡುಗೆ ಮಾಡುತ್ತಿದ್ದಾನೆ. ಇಂದು ಮಹಿಳಾ ದಿನಾಚರಣೆಯಾಗಿದ್ದು, ಇಂದು ನಮ್ಮೆಲ್ಲರಿಗಾಗಿ ಚರಣ್ ಅಡುಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕೆ ಉಪಾಸನಾ ಪ್ರತಿನಿತ್ಯ ಮಹಿಳಾ ದಿನಾಚರಣೆ ಆದರೇ ಎಷ್ಟು ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಚರಣ್ ಬಳಿ ಹೋಗಿದ ಉಪಾಸನಾ ಏನು ಅಡುಗೆ ಮಾಡುತ್ತೀದ್ದಿಯಾ ಎಂದರೇ ದೋಸೆ, ಪನ್ನೀರ್‍ ಟಿಕ್ಕಾ ನಮ್ಮ ತಾಯಿಗಾಗಿ ಎಂದು ಚರಣ್ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಚೆಫ್ ಅವತಾರದಲ್ಲಿ ಕಾಣಿಸಿಕೊಂಡ ರಾಮ್ ಚರಣ್ ರನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ.