Film News

NBK109 ಫಸ್ಟ್ ಗ್ಲಿಂಪ್ಸ್ ರಿಲೀಸ್, ನಿರೀಕ್ಷೆ ಏರಿಸಿದ ಬಾಲಕೃಷ್ಣ ಅಪ್ ಕಮಿಂಗ್ ಮೂವಿ, ಭಾರಿ ಸದ್ದು ಮಾಡುತ್ತಿದೆ NBK109 ಗ್ಲಿಂಪ್ಸ್…..!

ನಟಸಿಂಹ ನಂದಮೂರಿ ಬಾಲಕೃಷ್ಣ ರವರು ಅಖಂಡ ಸಿನೆಮಾದ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಪಡೆದುಕೊಳ್ಳುತ್ತಿದ್ದಾರೆ. ಬಾಲಯ್ಯನ ಕೆರಿಯರ್‍ ನಲ್ಲಿ ಅಖಂಡ ಸಿನೆಮಾ ಹೈಯೆಸ್ಟ್ ಗ್ರಾಸ್ ಕಲೆಕ್ಷನ್ ಮಾಡಿದ ಸಿನೆಮಾ ಎಂದೇ ಹೇಳಬಹುದಾಗಿದೆ. ಬಳಿಕ ವೀರಾಸಿಂಹರೆಡ್ಡಿ ಸಿನೆಮಾದ ಮೂಲಕವೂ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಕೊನೆಯದಾಗಿ ಭಗವಂತ್ ಕೇಸರಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ NBK109 ಎಂಬ ಸಿನೆಮಾದ ಮೂಲಕ ಸದ್ದು ಮಾಡಲಿದ್ದು, ಈ ಸಿನೆಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಸಿನೆಮಾದ ಮೇಲೆ ನಿರೀಕ್ಷೆ ಏರಿಸಿದೆ.

ಶಿವರಾತ್ರಿ ಹಬ್ಬದ ನಿಮಿತ್ತ ದೊಡ್ಡ ದೊಡ್ಡ ಸಿನೆಮಾಗಳಿಗೆ ಸಂಬಂಧಿಸಿದ ಅಪ್ಡೇಟ್ ಗಳನ್ನು ನೀಡಲಾಗಿದೆ. ಫಸ್ಟ್ ಲುಕ್, ಫಸ್ಟ್ ಗ್ಲಿಂಪ್ಸ್ ಗಳ ಮೂಲಕ ಸಿನೆಮಾಗಳ ಅಪ್ಡೇಟ್ ನೀಡಿದ್ದಾರೆ. ಈ ಹಾದಿಯಲ್ಲೇ NBK109 ಸಿನೆಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಈ ಫಸ್ಟ್ ಗ್ಲಿಂಪ್ಸ್ ನಲ್ಲಿ ಅಗ್ನಿಗೆ ಆಹುತಿಯಾದ ಕಾಡು, ಅಣೆಕಟ್ಟು ಗೇಟ್ ಗಳ ಮೂಲಕ ಪ್ರವಹಿಸುವ ಲಾವಾ ಕೊನೆಯದಾಗಿ NBK109 ಟೈಟಲ್ ಕಾಣಿಸುತ್ತದೆ. ಬಳಿಕ ನಂದಮೂರಿ ಬಾಲಕೃಷ್ಣ ಕೆಲವೊಂದು ಆಯುಧಗಳನ್ನು ಹಿಡಿದುಕೊಂಡ ಎಂಟ್ರಿ ಕೊಟ್ಟುತ್ತಾರೆ. ನಮ್ಮ ಮೇಲೆ ಯುದ್ದ ಪ್ರಕಟಿಸುತ್ತೀರಾ ಎಂದು ವಿಲನ್ ಬಾಲಕೃಷ್ಣರವರನ್ನು ಕೇಳುತ್ತಾರೆ. ಈ ಸಮಯದಲ್ಲೇ ಬಾಲಕೃಷ್ಣ ಪವರ್‍ ಪುಲ್ ಡೈಲಾಗ್ ಹೊಡೆಯುತ್ತಾರೆ. ಬಳಿಕ ಕೆಲವೊಂದು ಸ್ಟೈಲಿಷ್ ಶಾಟ್ಸ್ ಇರುತ್ತದೆ.

ಇನ್ನೂ ಬಾಲಕೃಷ್ಣ ಈ ಗ್ಲಿಂಫ್ಸ್ ನಲ್ಲಿ ಭಾರಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾವನ್ನು ನಿರ್ದೇಶನ ಮಾಡುತ್ತಿರುವ ಬಾಬಿ ಬಾಲಯ್ಯನನ್ನು ವಿಭಿನ್ನವಾಗಿ ಪ್ರಸೆಂಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಬಾಬಿ ಡಿಯೋಲ್. ಊರ್ವಶಿ ರೌಟೆಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿತಾರಾ ಎಂಟರ್‍ ಟ್ರೈನ್ ಮೆಂಟ್, ಫಾರ್ಚೂನ್ ಫೋಸ್ ಸಿನೆಮಾಸ್ ರವರ ಸಂಯುಕ್ತಾಶ್ರಯದಲ್ಲಿ ಸೂರ್ಯದೇವರ ನಾಗವಂಶಿ, ಸಾಯಿ ಸೌಜನ್ಯ ರವರುಗಳು ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತ ಮ್ಯೂಸಿಕ್ ಡೈರೆಕ್ಟರ್‍ ಎಸ್.ಎಸ್.ಥಮನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಭಗವಂತ್ ಕೇಸರಿ ಸಿನೆಮಾದ ಸಕ್ಸಸ್ ಬಳಿಕ ಬಾಲಕೃಷ್ಣ ಮತ್ತೊಂದು ಹಿಟ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾದ ಫಸ್ಟ್ ಗ್ಲಿಂಪ್ಸ್ ನೋಡಿದ ಬಳಿಕ NBK109 ಸಿನೆಮಾದ ಮೇಲಿನ ನಿರೀಕ್ಷೆ ದುಪ್ಪಟ್ಟು ಆಗಿದೆ ಎಂದು ಹೇಳಲಾಗುತ್ತಿದೆ.

Most Popular

To Top