Film News

ನನಗಾಗಿ ರಾಜ್ ಕುಂದ್ರಾಗಿಂತಲೂ ಶ್ರೀಮಂತರು ಕ್ಯೂ ನಿಂತಿದ್ದರು ಎಂದ ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ…..!

ಬಾಲಿವುಡ್ ಸ್ಟಾರ್‍ ನಟಿ ಶಿಲ್ಪಾ ಶೆಟ್ಟಿ ಎಲ್ಲರಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಫಿಟ್ ನೆಸ್ ಟ್ರಿಕ್ಸ್ ಹಾಗೂ ಸ್ಪೂರ್ತಿ ನೀಡುವಂತಹ ಪೊಸ್ಟ್‌ ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೇ ಆಗಾಗ ಕೆಲವೊಂದು ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ತನ್ನ ವೈಯುಕ್ತಿಕ ವಿಚಾರದ ಬಗ್ಗೆ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಕಳೆದ 15 ವರ್ಷದಿಂದಲೂ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕಳೆದ 2021 ರಲ್ಲಿ ನೀಲಿ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನ ಸಹ ಆಗಿತ್ತು. ಈ ಸುದ್ದಿ ಆ ಸಮಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದ ಬಳಿಕ ರಾಜ್ ಕುಂದ್ರಾ ಹಾಗೂ ಶಿಲ್ಪಾಶೆಟ್ಟಿ ಬಗ್ಗೆ ಒಂದಲ್ಲ ಒಂದು ಟ್ರೋಲ್ ಮಾಡುತ್ತಲೇ ಇದ್ದಾರೆ. ಶಿಲ್ಪಾಶೆಟ್ಟಿ ಹಣಕ್ಕಾಗಿ ರಾಜ್ ಕುಂಧ್ರಾ ರವರನ್ನು ವಿವಾಹವಾದರು ಎಂದು ಟ್ರೋಲ್ ಗಳು ಹೆಚ್ಚಾಗಿಯೇ ಕೇಳಿಬರುತ್ತಲೇ ಇದೆ. ಇದಿಗ ಈ ಆರೋಪಕ್ಕೆ ಶಿಲ್ಪಾಶೆಟ್ಟಿ ಖಡಕ್ ಉತ್ತರ ಕೊಟ್ಟಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಈ ಕೌಂಟರ್‍ ಕೊಟ್ಟಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಶಿಲ್ಪಾಶೆಟ್ಟಿ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹಣಕ್ಕಾಗಿ ರಾಜ್ ಕುಂದ್ರಾರನ್ನು ಮದುವೆಯಾದ ಎಂಬ ಆರೋಪಕ್ಕೆ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ನಾನು ರಾಜ್ ಕುಂದ್ರಾರನ್ನು ಮದುವೆಯಾದಾಗ ಆತ 108ನೇ ಶ್ರೀಮಂತ ಬ್ರಿಟೀಷ್ ಭಾರತೀಯ ಆಗಿದ್ದರು. ಆದರೆ ನನ್ನ ಬಗ್ಗೆ ಗೂಗಲ್ ಮಾಡುವುದನ್ನು ಕೆಲವರು ಮರೆತು ಬಿಡುತ್ತಾರೆ. ಶಿಲ್ಪಾಶೆಟ್ಟ ಆದ ನಾನು ಸಹ ಆಗಲೂ ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ. ಈಗಲೂ ನನ್ನ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಎಲ್ಲಾ ತೆರಿಗೆಗಳನ್ನು ಸಹ ನಾನೇ ಕಟ್ಟುತ್ತೇನೆ. ಯಶಸ್ವಿ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡೊಲ್ಲ. ರಾ ಆಗ ಶ್ರೀಮಂತ ವ್ಯಕ್ತಿಯಾಗಿದ್ದರೂ ಹಣದ ಕಾರಣದಿಂದ ಮಾತ್ರ ನಾನು ಅವರನ್ನು ಒಪ್ಪಿಕೊಂಡಿಲ್ಲ. ಆ ಸಮಯದಲ್ಲಿ ರಾಜ್ ಕುಂದ್ರಾಗಿಂತ ಶ್ರೀಮಂತರು ನನ್ನ ಮದುವೆಯಾಗಲು ಕೇಳಿದ್ದರು. ಆಗಲೂ ಹಣ ನನಗೆ ಮುಖ್ಯವಲ್ಲ, ಈಗಲೂ ಮುಖ್ಯವಲ್ಲ ಎಂದು ಆರೋಪಗಳಿಗೆ ಖಡಕ್ ಕೌಂಟರ್‍ ಕೊಟ್ಟಿದ್ದಾರೆ.

Most Popular

To Top