Uncategorized

ಯಂಗ್ ನಟಿಯರನ್ನೂ ಮೀರಿಸುವಂತ ಲುಕ್ಸ್ ನಲ್ಲಿ ಕಾಣಿಸಿಕೊಂಡ ಸೀನಿಯರ ನಟಿ ರಮ್ಯಕೃಷ್ಣಾ, ವೈರಲ್ ಆದ ವಿಡಿಯೋ…..!

ದಶಕಗಳ ಹಿಂದೆ ಸೌತ್ ಸಿನಿರಂಗದ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಈಕೆ ಇತ್ತೀಚಿಗೆ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದು, ಇಂಟರ್‍ ನೆಟ್ ನಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ. ಇದೀಗ ಆಕೆ ಯಂಗ್ ನಟಿಯರನ್ನು ಸಹ ನಾಚಿಸುವಂತಹ ಲುಕ್ಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಸೀನಿಯರ್‍ ನಟಿ ರಮ್ಯಕೃಷ್ಣ ರವರಿಗೆ ಸಿನೆಮಾಗಳ ಮೇಲೆ ತುಂಬಾನೆ ಆಸಕ್ತಿಯಿರುವ ಕಾರಣದಿಂದ ಚಿಕ್ಕವಯಸ್ಸಿನಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತಮ್ಮ 13ನೇ ವಯಸ್ಸಿನಲ್ಲಿ ನೇರಂ ಪುಲಾರುಂಬಲ್ ಎಂಬ ಮಲಯಾಳಂ ಸಿನೆಮಾದಲ್ಲಿ ನಟಿಸಿದ್ದರು.  ಬಳಿಕ ವೆಲೈ ಮನಸ್ಸು ಎಂಬ ತಮಿಳು ಸಿನೆಮಾದಲ್ಲಿ ನಟಿಯಾಗಿ ಕಾಣಿಸಿಕೊಂಡರು. ಮೊದಲನೇ ಸಿನೆಮಾದ ಮೂಲಕವೇ ಎಲ್ಲರ ಮನಗೆದ್ದ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಬಳಿಕ ತಮಿಳು, ತೆಲುಗು, ಹಿಂದಿ, ಕನ್ನಡ ಹೀಗೆ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಸೋಲು ಗೆಲುವು ಎಂದು ನೋಡದೇ ಸಿನಿರಂಗದಲ್ಲಿ ಮುನ್ನುಗ್ಗಿದ್ದರು. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಇನ್ನೂ ಸೆಕೆಂಡ್ ಇನ್ನೀಂಗ್ಸ್ ನಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ.

ಇನ್ನೂ ಇತರೆ ನಟಿಯರಂತೆ ಸೀನಿಯರ್‍ ನಟಿ ರಮ್ಯಾಕೃಷ್ಣ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕ ವಿವಿಧ ರೀತಿಯ ಪೊಟೋಶೂಟ್ಸ್, ವಿಡಿಯೋ ಗಳ ಜೊತೆಗೆ ತಮ್ಮ ಸಿನೆಮಾಗಳ ಅಪ್ಡೇಟ್ಸ್ ಸಹ ನೀಡುತ್ತಿರುತ್ತಾರೆ. ಇದೀಗ ಆಕೆ ಸ್ಲೀವ್ ಲೆಸ್ ಟಾಪ್ ನಲ್ಲಿ ಹದಿಹರೆಯದ ಯುವತಿಯಂತೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೋಸ್ ನೋಡಿದರೇ ಆಕೆ ವಯಸ್ಸಾಗುತ್ತಿದ್ದಷ್ಟು ಮತಷ್ಟು ಯಂಗ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಮಿಂಚುತ್ತಿರುವ ಸ್ಕಿನ್ ಟೋನ್ ಮೂಲಕ ಯಂಗ್ ಲುಕ್ ಕೊಟ್ಟು ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ಫಿದಾ ಆಗುವಂತೆ ಮಾಡಿದ್ದಾರೆ. ಇದೀಗ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಜೊತೆಗೆ ಲೈಕ್ ಗಳ ಸುರಿಮಳೆಗೈದಿದ್ದಾರೆ.

ಇನ್ನೂ ನಟಿ ರಮ್ಯಕೃಷ್ಣ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಆಕೆ ಪ್ಯಾನ್ ಇಂಡಿಯಾ ಸಿನೆಮಾ ಬಾಹುಬಲಿಯಲ್ಲಿ ನಟಿಸಿದ್ದರು. ಈ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಕೊನೆಯದಾಗಿ ಆಕೆ ಲೈಗರ್‍, ರಂಗಮಾರ್ತಾಂಡ, ಜೈಲರ್‍, ಗುಂಟೂರು ಖಾರಂ ಸಿನೆಮಾಗಳಲ್ಲಿ ನಟಿಸಿದ್ದರು.

Most Popular

To Top