ಹಿರೋಗಳಿಗಿಂತ ಹಿರೋಯಿನ್ ಗಳೇ ಹೆಚ್ಚು ಕಷ್ಟಪಡುತ್ತಾರೆ ಎಂದ ಜ್ಯೋತಿಕಾ, ವೈರಲ್ ಆದ ಕಾಮೆಂಟ್ಸ್…..!

Follow Us :

ಕಾಲಿವುಡ್ ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ಜ್ಯೋತಿಕಾ ಹಾಗೂ ಸೂರ್ಯ ಜೋಡಿ ಒಂದಾಗಿದೆ. ಮದುವೆಯಾದಾಗಿನಿಂದ ಈ ಜೋಡಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ತೆಲುಗು ಸಿನೆಮಾಗಳ ಜೊತೆಗೆ ಕಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ ಜ್ಯೋತಿಕಾ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದು ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ಯ ಆಕೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿವೆ.

ಸೌತ್ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿಕಾ ಕಳೆದ 2006 ರಲ್ಲಿ ನಟ ಸೂರ್ಯ ರನ್ನು ಪ್ರೀತಿಸಿ ಮದುವೆಯಾದರು. ಸೂರ್ಯ ಜೊತೆಗೆ ಮದುವೆಯಾದ ಬಳಿಕ ಸಂಪೂರ್ಣವಾಗಿ ಆಕೆ ಸಿನೆಮಾಗಳಿಂದ ದೂರ ಉಳಿದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳು ದೊಡ್ಡವರಾಗಿದ್ದಾರೆ. ಇದೀಗ ಜ್ಯೋತಿಕಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ತಮಿಳು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಜೊತೆಗೆ ಆಗಾಗ ಕೆಲವೊಂದು ಸಂದರ್ಶನದಲ್ಲಿ ಭಾಗಿಯಾಗುತ್ತಾ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗಿದೆ.

ನಟಿ ಜ್ಯೋತಿಕಾ ಸಂದರ್ಶನವೊಂದರಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾಗಳ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅನೇಕ ಹಿರೋಯಿನ್ ಗಳು ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇಂತಹ ಸಿನೆಮಾಗಳನ್ನು ಹೊಸ ನಿರ್ದೇಶಕರು ಮಾತ್ರ ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ನಿರ್ದೇಶಕರು ಲೇಡಿ ಓರಿಯೆಂಟೆಡ್ ಸಿನೆಮಾಗಳನ್ನು ಮಾಡಲು ಇಷ್ಟಪಡುತ್ತಿಲ್ಲ. ದೊಡ್ಡ ದೊಡ್ಡ ನಿರ್ದೇಶಕರು ದೊಡ್ಡ ಬಡ್ಜೆಟ್ ಸಿನೆಮಾಗಳನ್ನು ಮಾಡಲು ಮಾತ್ರ ಇಷ್ಟಪಡುತ್ತಾರೆ. ನಿಜ ಹೇಳಬೇಕೆಂದರೇ ಒಂದು ಸಿನೆಮಾ ಪ್ರೇಕ್ಷಕರ ಮುಂದೆ ಬರುತ್ತೆ ಎಂದರೇ ಆ ಸಿನೆಮಾಗಾಗಿ ಹಿರೋಗಳಿಗಿಂತ ಶೇ.10 ರಷ್ಟು ಹಿರೋಯಿನ್ ಗಳೇ ಕಷ್ಟಪಡುತ್ತಾರೆ. ಹಿರೋಯಿನ್ ಗಳು ತುಂಬಾ ಕಷ್ಟಪಡುತ್ತಿದ್ದರು ಹಿರೋಗಳನ್ನೇ ಹೆಚ್ಚು ಎಂಬಂತೆ ಬಿಂಬಿಸಲಾಗುತ್ತಿದೆ. ಈ ರೀತಿಯಾದರೇ ಹಿರೋಯಿನ್ ಗಳ ಪರಿಸ್ಥಿತಿ ಏನು ಎಂದು ಜ್ಯೋತಿಕಾ ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.