Uncategorized

ಪ್ರೆಗ್ನೆನ್ಸಿ ರೂಮರ್ ಬಗ್ಗೆ ಸರಿಯಾಗಿಯೇ ಕೌಂಟರ್ ಕೊಟ್ಟ ಸ್ಟಾರ್ ನಟಿ ಪರಿಣಿತಿ ಚೋಪ್ರಾ, ವೈರಲ್ ಆದ ಪೋಸ್ಟ್…..!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಕಜಿನ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದಾಗಿದೆ ಆದರೂ ಸಹ ಸಿನೆಮಾಗಳ ಆಫರ್‍ ಗಳು ಮಾತ್ರ ಆಕೆಗೆ ಕಡಿಮೆಯಾಗಿಲ್ಲ. ಕಳೆದ ವರ್ಷವಷ್ಟೆ ಆಕೆ ರಾಜಕಾರಣಿಯೊಬ್ಬರನ್ನು ಮದುವೆಯಾದರು. ಇದೀಗ ಆಕೆ ಗರ್ಭಿಣಿ ಎಂಬ ರೂಮರ್‍ ಗೆ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದಾರೆ. ಈ ಸಂಬಂಧ ಇನ್ಸ್ಟಾ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‍ ಮಾಹೆಯಲ್ಲಿ ಸ್ಟಾರ್‍ ನಟಿ ಪರಿಣಿತಿ ಚೋಪ್ರಾ ಮದುವೆಯಾದರು. ಅಮ್ ಆದ್ಮಿ ಪಕ್ಷದ ಸಂಸದ ರಾಘವ ಚಡ್ಡಾ ಎಂಬಾತನೊಂದಿಗೆ ಸಪ್ತಪದಿ ತುಳಿದರು. ಮದುವೆಯಾದ ಬಳಿಕವೂ ಪರಿಣಿತಿ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಕೆಲವು ದಿನಗಳಿಂದ ಪರಿಣಿತಿ ಗರ್ಭಿಣಿ ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಈ ಕುರಿತು ಪರಿಣಿತಿ ಟೀಂ ಸಹ ಎಲ್ಲಾವೂ ಸುಳ್ಳು ಎಂದು ಸ್ಪಷ್ಟನೆ ಕೊಟ್ಟರೂ ಸಹ ರೂಮರ್‍ ಹರಿದಾಡುವುದು ನಿಂತಿಲ್ಲ. ರೂಮರ್‍ ಗಳು ನಿಲ್ಲದ ಕಾರಣ ಇದೀಗ ಪರಿಣಿತಿ ಚೊಪ್ರಾ ರವರೇ ರಿಯಾಕ್ಟ್ ಆಗಿದ್ದಾರೆ. ವ್ಯಂಗವಾಗಿ ಆಕೆ ತನ್ನ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಆಕೆಯ ಪೋಸ್ಟ್ ವೈರಲ್ ಆಗುತ್ತಿದೆ.

ನಟಿ ಪರಿಣಿತಿ ಚೋಪ್ರಾ ತನ್ನ ಮೇಲೆ ಹರಿದಾಡುತ್ತಿರುವಂತಹ ರೂಮರ್‍ ಬಗ್ಗೆ ಆಕೆಯೇ ರಿಯಾಕ್ಟ್ ಆಗಿದ್ದಾರೆ. ಇಂತಹ ಸುಳ್ಳು ರೂಮರ್‍ ಗಳನ್ನು ಹರಿಬಿಡುವವರಿಗೆ ಆಕೆ ಕೌಂಟರ್‍ ಕೊಟ್ಟಿದ್ದಾರೆ. ಜೊತೆಗೆ ಅವರ ವಿರುದ್ದ ವ್ಯಂಗವಾಡುವಂತಹ ಕಾಮೆಂಟ್ ಮಾಡಿದ್ದಾರೆ. ಕ್ಯಾಪ್ಟನ್ ಡ್ರೆಸ್ ಹಾಕಿಕೊಂಡರೇ ಗರ್ಭಿಣಿ ಎಂದು ರೂಮರ್‍ ಕ್ರಿಯೇಟ್ ಮಾಡುತ್ತಾರೆ, ಕೊಂಚ ಸೈಜ್ ಹೆಚ್ಚಾಗಿರುವ ಡ್ರೆಸ್ ಹಾಕಿಕೊಂಡರೂ ಅಷ್ಟೆ, ಇಂಡಿಯನ್ ಕುರ್ತಾ ಹಾಕಿಕೊಂಡರೂ ಅಷ್ಟೆ ಗರ್ಭಿಣಿ ಎಂಬ ರೂಮರ್‍ ಹರಿಬಿಡುತ್ತಾರೆ ಎಂದು ನಗುವಂತಹ ಎಮೋಜಿಗಳನ್ನು ಹಾಕಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ಮೂಲಕ ಗರ್ಭಿಣಿ ಎಂಬ ರೂಮರ್‍ ಗೆ ಚೆಕ್ ಇಟ್ಟಿದ್ದಾರೆ.

ಇತ್ತೀಚಿಗೆ ಭಾರಿ ಸಕ್ಸಸ್ ಕಂಡ ಯಾನಿಮಲ್ ಎಂಬ ಸಿನೆಮಾದಲ್ಲಿ ಪರಿಣಿತಿ ಚೋಪ್ರಾ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಆಕೆಯ ಸ್ಥಾನದಲ್ಲಿ ರಶ್ಮಿಕಾ ಬಂದರು. ಮದುವೆಯಾದರೂ ಸಹ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top