ಪಾಕ್ ನಟಿಯ ವಕ್ರ ಬುದ್ದಿ, ಟಿಂ ಇಂಡಿಯಾ ಆಟಗಾರರು ಒಳ್ಳೆಯ ನಟರು, ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದ ನಟಿಯ ವಿರುದ್ದ ಭುಗಿಲೆದ್ದ ಆಕ್ರೋಷ…..!

ನ.15 ರಂದು ನ್ಯೂಜಿಲ್ಯಾಂಡ್ ಹಾಗೂ ಇಂಡಿಯಾ ನಡುವೆ ನಡೆದ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಫೈನಲ್ ಅಂಗಳ ತಲುಪಿದೆ. ಸಿನೆಮಾ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಕೋಟ್ಯಂತರ ಮಂದಿ ಇಂಡಿಯಾ…

ನ.15 ರಂದು ನ್ಯೂಜಿಲ್ಯಾಂಡ್ ಹಾಗೂ ಇಂಡಿಯಾ ನಡುವೆ ನಡೆದ ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಫೈನಲ್ ಅಂಗಳ ತಲುಪಿದೆ. ಸಿನೆಮಾ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಕೋಟ್ಯಂತರ ಮಂದಿ ಇಂಡಿಯಾ ವರ್ಲ್ಡ್ ಕಪ್ ಗೆಲ್ಲಲಿ ಎಂದು ಶುಭ ಹಾರೈಸುತ್ತಿದ್ದಾರೆ. ಆದರೆ ಇಂಡಿಯಾ ಗಳಿಸುತ್ತಿರುವ ಜಯವನ್ನು ಜೀರ್ಣಿಸಿಕೊಳ್ಳದಾರದ ಪಾಕ್ ನಟಿಯೊಬ್ಬಳು ಇಂಡಿಯಾ ಗೆಲುವಿನ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ. ಆಕೆಯನ್ನು ಸೋಷಿಯಲ್ ಮಿಡಿಯಾದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾ ನಾಲ್ಕನೇ ಭಾರಿ ವರ್ಲ್ಡ್ ಕಪ್ ಫೈನಲ್ ಗೆ ಹೋಗಿದೆ. ಟಿಂ ಇಂಡಿಯಾ ಈ ಭಾರಿ ಚೆನ್ನಾಗಿ ಆಡುತ್ತಿರುವುದನ್ನು ಪಾಕಿಸ್ತಾನದ ಕೆಲವರಿಗೆ ಜೀರ್ಣಿಸಿಕೊಳ್ಳಲಾರದ ವಿಚಾರವಾಗಿದೆ. ಈ ವರ್ಲ್ಡ್ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಘೋರ ಪರಾಭವಗೊಂಡಿರುವುದು ತಿಳಿದೇ ಇದೆ. ಇದೀಗ ಪಾಕ್ ನಟಿ ಷೇಹರ್‍ ಚಿನ್ವಾರಿ ಟೀಂ ಇಂಡಿಯಾ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಆಕೆ ಟ್ವಿಟರ್‍ ನಲ್ಲಿ ಮಾಡಿರುವಂತಹ ಕಾಮೆಂಟ್ ಗಳು ಇದೀಗ ವಿವಾದಕ್ಕೆ ಎದೆ ಮಾಡಿಕೊಟ್ಟಿದೆ. ಭಾರತ ಬ್ಯಾಕ್ ಟು ಬ್ಯಾಕ್ ಗೆಲುವುಗಳನ್ನು ಸಾಧಿಸುತ್ತಿರುವುದನ್ನು ಜೀರ್ಣಿಸಿಕೊಳ್ಳಲಾರದೆ ಪಾಕ್ ನಟಿ ಆರೋಪಗಳನ್ನು ಮಾಡಿದ್ದಾರೆ.

ನ್ಯೂಜಿಲ್ಯಾಂಡ್ ಹಾಗೂ ಇಂಡಿಯಾ ಸೆಮಿಫೈನಲ್ ಮ್ಯಾಚ್ ಈಗಾಗಲೇ ಫಿಕ್ಸ್ ಆಗಿದೆ. ಎಲ್ಲಾ ಭಾರತಕ್ಕೆ ಅನುಕೂಲವಾಗಿಯೇ ಜರುಗಿದೆ. ಆಲ್ ರೆಡಿ ಫಿಕ್ಸ್ ಆಗಿರುವಂತಹ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಆಟಗಾರರು ಸಿನೆಮಾ ನಟರಂತೆ ತುಂಬಾ ಕಷ್ಟಪಡುತ್ತಿರುವಂತೆ ನಟಿಸಿದ್ದಾರೆ. ಶೀಘ್ರದಲ್ಲೇ ಬಿಸಿಸಿಐ, ಬಿಜೆಪಿ ಸರ್ವನಾಶ ಆಗುತ್ತದೆ ಎಂದು ಆಕೆ ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ನಿಮ್ಮ ತಂಡ ಸೋತಿದೆ ಎಂಬ ಕಾರಣಕ್ಕೆ ಬೇರೆಯವರ ಮೇಲೆ ಕೆಸರು ಎರಚುವುದು ಸರಿಯಲ್ಲ. ಅದು ವ್ಯಕ್ತಿತ್ವ ಹಾಗೂ ಕ್ರೀಡಾ ಸ್ಪೂರ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಈ ಹಿಂದೆ ಸಹ ಷೆಹರ್‍ ಬಾಂಗ್ಲಾದೇಶ್ ಭಾರತವನ್ನು ಸೋಲಿಸದೇ ಬಾಂಗ್ಲಾದೇಶ ಯುವಕನೊಂದಿಗೆ ಡೇಟಿಂಗ್ ಮಾಡುತ್ತೇನೆ ಎಂದು ಕಾಮೆಂಟ್ಸ್ ಮಾಡಿದ್ದರು. ಒಟ್ಟಿನಲ್ಲಿ ಟೀಂ ಇಂಡಿಯಾ ಸಾಧನೆಯನ್ನು ಜೀರ್ಣಿಸಿಕೊಳ್ಳಲಾರದೇ ಪಾಕ್ ನಟಿ ಮಾಡಿದ ಆರೋಪಗಳ ಕಾರಣದಿಂದ ಆಕೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.