ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ಹೋದ IAS ಅಧಿಕಾರಿ, ಆಸ್ಪತ್ರೆಯಲ್ಲಿನ ಕರಾಳ ಮುಖ ಬಯಲು ಮಾಡಿದ ಅಧಿಕಾರಿ…..!

Follow Us :

ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವುದು ಕಷ್ಟ ಎಂದೇ ಹೇಳಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳ ಬಗ್ಗೆ ಅನೇಕ ಬಾರಿ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ IAS ಅಧಿಕಾರಿಯೊಬ್ಬರು ಸಾಮಾನ್ಯ ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿನ ಕರಾಳ ಮುಖವನ್ನು ಬಯಲಿಗೆ ಎಳೆದಿದ್ದಾರೆ. ಅಧಿಕಾರಿಯ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಅಧಿಕಾರಿಗಳಾಗಲೀ ಅಥವಾ ಜನಪ್ರತಿನಿಧಿಗಳಿಗಾಗಲೀ  ಭೇಟಿ ನೀಡಿದಾಗ ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲ ಎಂಬಂತೆ ಶೋ ಮಾಡುತ್ತಾರೆ. ಅವರು ಹೋಗಿ ಬಂದ ಬಳಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳ ದರ್ಶನ ಸಾಮಾನ್ಯವಾಗಿರುತ್ತದೆ. ಇದೀಗ ಮಹಿಳಾ IAS ಅಧಿಕಾರಿಯೊಬ್ಬರು ಸಾಮಾನ್ಯ ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ, ನರ್ಸ್‌ಗಳ ಕಥೆಯೇ ಬೇರೆಯಿತ್ತು. ಔಷಧಿಗಳ ಅವಧಿ ಮುಗಿದಿದೆ. ಶೌಚಾಲಯ ಸೇರಿದಂತೆ ಎಲ್ಲಾ ಕಡೆ ಅಸ್ವಚ್ಚತೆ ತಾಂಡವವಾಡುತ್ತಿತ್ತು. ಬಳಿಕ ಅಧಿಕಾರಿಯ ಅಸಲೀ ಮುಖ ತೋರಿಸಿದ ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಶಾಕ್ ಆಗಿದ್ದಾರೆ. ಹಾಜರಾತಿ ಹಾಕಿ ಬೇರೆ ಕಡೆಯಿದ್ದ ವೈದ್ಯರು ಓಡೋಡಿ ಬಂದಿದ್ದಾರೆ. ಎಲ್ಲವನ್ನೂ ಸರಿ ಮಾಡುತ್ತೇವೆ ಮೇಡಂ ಎಂದು ಕಥೆ ಕಟ್ಟಲು ಶುರುವಾಗಿದ್ದಾರೆ. ಆದರೆ ಈಗಾಗಲೇ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡ ಅಧಿಕಾರಿ ಎಲ್ಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ. ಫಿರೋಜಾಬಾದ್ ನಾ ದೀದಾ ಮಾಯಿ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಬಗ್ಗೆ ಫಿರೋಜಾಬಾದ್ ಮಹಿಳಾ ಉಪ ಜಿಲ್ಲಾಧಿಕಾರಿ ಕೃತಿರಾಜ್ ಬಯಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಕೃತಿ ರಾಜ್ ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ದಾಖಲೆ ಪ್ರಕಾರ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಲಾಗಿದೆ. ಆದರೆ ದೂರುಗಳು ಬರುವುದು ಮಾತ್ರ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಕೃತಿ ರಾಜ್ ಮಾರುವೇಶದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿ ಕಡಿತಕ್ಕೆ ಲಸಿಕೆ ಹಾಕಿಸಿಕೊಳ್ಳುವ ನೆಪದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದಾರೆ. ಮೊದಲಿಗೆ ಯಾರೂ ಆಕೆಯನ್ನು ಗುರ್ತಿಸಿರಲಿಲ್ಲ. ಕೊನೆಯದಾಗಿ ಪರಿಶೀಲನೆ ನಡೆಸಿದ ಆಕೆ ಅಲ್ಲಿನ ಅವ್ಯವಸ್ಥೆಯನ್ನು ಪತ್ತೆ ಹಚ್ಚಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.