ಡ್ರಗ್ಸ್ ಕೇಸ್ ನಲ್ಲಿ ವರಲಕ್ಷ್ಮೀ ಬಂಧನ? ಫೇಕ್ ನ್ಯೂಸ್ ಗೆ ಖಾರವಾಗಿ ಕೌಂಟರ್ ಕೊಟ್ಟ ಲೇಡಿ ವಿಲನ್ ವರಲಕ್ಷ್ಮೀ…..!

ಸೌತ್ ಸಿನಿರಂಗದಲ್ಲಿ ಲೇಡಿ ವಿಲನ್ ಎಂತಲೇ ಫೇಮಸ್ ಆದ ವರಲಕ್ಷ್ಮೀ ಶರತ್ ಕುಮಾರ್‍ ವಿಭಿನ್ನ ಪಾತ್ರಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕಾಲಿವುಡ್ ಸೀನಿಯರ್‍ ನಟ ಶರತ್ ಕುಮಾರ್‍ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ತನ್ನ ಸ್ವಂತ ಪ್ರತಿಭೆಯಿಂದಲೇ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಂಡರು. ಹಿರೋಯಿನ್ ಆಗಿ ನಟಿಸುತ್ತಲೇ ಸೆಕೆಂಡ್ ಹಿರೋಯಿನ್ ಆಗಿ ವಿಲನ್ ಆಗಿ ನಟಿಸುತ್ತಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಆಕೆ ಫೇಕ್ ನ್ಯೂಸ್ ಬಗ್ಗೆ ಖಾರವಾಗಿ ಕೌಂಟರ್‍ ಕೊಟ್ಟಿದ್ದಾರೆ.

ಕಳೆದೆರಡು ದಿನಗಳಿಂದ ಕಾಲಿವುಡ್ ಅಂಗಳದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ವರಲಕ್ಷ್ಮೀ ಶರತ್ ಕುಮಾರ ಅರೆಸ್ಟ್ ಆಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿತ್ತು. ಕಳೆದ ವರ್ಷ ಕಾಲಿವುಡ್ ನಲ್ಲಿ ಕೇಳಿಬಂದ ಡ್ರಗ್ಸ್ ಕೇಸ್ ನಲ್ಲಿ ವರಲಕ್ಷ್ಮೀ ಶರತ್ ಕುಮಾರ್‍ ರವರ ಹೆಸರು ಸಹ ಕೇಳಿಬಂದಿತ್ತು. ಆಕೆಯ ಬಳಿ ಕೆಲಸ ಮಾಡಿದ್ದ ಆದಿಲಿಂಗಂ ಎಂಬ ವ್ಯಕ್ತಿಯನ್ನು ಡ್ರಗ್ಸ್ ಹಾಗೂ ಆಯುಧಗಳ ಸರಬರಾಜು ಪೂರೈಕೆ ಮಾಡುವ ಆರೋಪದ ಮೇರೆಗೆ ಬಂದನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವರಲಕ್ಷ್ಮೀ ರವರಿಗೂ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಆಕೆಯನ್ನು ಅರೆಸ್ಟ್ ಮಾಡಲಿದ್ದಾರೆ. ವಿಚಾರಣೆಗೆ ಹಾಜರಾಗಬೇಕಿದೆ ಎಂದು ಸುದ್ದಿಗಳು ಹರಿದಾಡಿತ್ತು. ಇದೀಗ ಸೋಷಿಯಲ್ ಮಿಡಿಯಾ ಮೂಲಕ ವರಲಕ್ಷ್ಮೀ ಫೇಕ್ ನ್ಯೂಸ್ ವಿರುದ್ದ ಕಿಡಿಕಾರಿದ್ದಾರೆ.

ತಮ್ಮ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ಖಂಡಿಸುತ್ತಾ ವರಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ಖಾರವಾಗಿ ಕೌಂಟರ್‍ ಕೊಟ್ಟಿದ್ದಾರೆ. ಮಿಡಿಯಾದವರಿಗೆ ನನ್ನ ಬಿಟ್ಟು ಬೇರೆ ಯಾರೂ ಸಿಕ್ಕಿಲ್ಲ ಅಂದುಕೊಳ್ಳುತ್ತೇನೆ. ನನ್ನ ಬಗ್ಗೆ ಈ ಹಿಂದೆ ಬಂದ ಫೇಕ್ ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಸಮಾಜದಲ್ಲಿ ತುಂಬಾನೆ ಸಮಸ್ಯೆಗಳು ಇದೆ. ಅವುಗಳ ಬಗ್ಗೆ ಹೋರಾಟ ಮಾಡಿ. ಪ್ರಪಂಚದಲ್ಲಿ ಮತಷ್ಟು ಸಮಸ್ಯೆಗಳಿವೆ. ನಮ್ಮ ತಾಳ್ಮೆಯನ್ನು ವೀಕ್ ನೆಸ್ ಎಂದು ನೋಡಬೇಡಿ. ನಿಜ ತಿಳಿದುಕೊಳ್ಳು, ಅಸತ್ಯಗಳನ್ನು ಪ್ರಚಾರ ಮಾಡುವುದನ್ನು ಬಿಡಿ ಎಂದು ಫೈರ್‍ ಆಗಿದ್ದಾರೆ. ಆಕೆಯ ಬಗ್ಗೆ ಹರಿದಾಡುತ್ತಿರುವ ಫೇಕ್ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನೂ ವರಲಕ್ಷ್ಮೀ ಕೆಲವು ದಿನಗಳ ಹಿಂದೆಯಷ್ಟೆ ನಿಖೋಲಯ್ ಸಚ್​ದೇವ್ ಎಂಬಾತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನಡೆಯಲಿದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಆಕೆಯ ವಿರುದ್ದ ಯಾರೋ ಬೇಕು ಅಂತ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಅಭಿಮಾನಿಗಳು ಆಕ್ರೋಷ ಹೊರಹಾಕುತ್ತಿದ್ದಾರೆ.