ರಾಮಾಯಣಂ ಸಿನೆಮಾದಿಂದ ಸೀತೆ, ರಾಮನ ಲುಕ್ ರಿವೀಲ್, ಮುದ್ದಾಗಿ ಕಾಣಿಸಿಕೊಂಡ ರಣಬೀರ್-ಸಾಯಿಪಲ್ಲವಿ, ಪೊಟೋ ವೈರಲ್….!

ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಕಥೆಯನ್ನು ಆಧರಿಸಿ ಈಗಾಗಲೇ ವಿವಿಧ ಭಾಷೆಗಳಲ್ಲಿ ಸಿನೆಮಾಗಳು ಬಂದಿದೆ. ಇದೀಗ ಮತ್ತೊಂದು ಸಿನೆಮಾ ಭಾರಿ ಬಜೆಟ್ ನಲ್ಲಿ ತೆರೆಕಾಣಲಿದೆ. ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಈಗಾಗಲೇ ಈ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನೆಮಾದಲ್ಲಿ ರಣಬೀರ್‍ ಹಾಗೂ ಸಾಯಿಪಲ್ಲವಿ ನಟಿಸುತ್ತಿದ್ದು, ಅವರಿಬ್ಬರ ಲುಕ್ ಇದೀಗ ಲೀಕ್ ಆಗಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾಮಾಯಣ ಸಿನೆಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಈ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ರಾಮನ ಪಾತ್ರದಲ್ಲಿ ಹಾಗೂ  ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್‍ ನಟ ಯಶ್ ರಾವಣ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬರಬೇಕಿದೆ. ಅವರ ಜೊತೆಗೆ ಸನ್ನಿ ಡಿಯೋಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್ ಗಳಂತ ಸ್ಟಾರ್‍ ಗಳೆಲ್ಲಾ ಈ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಶೂಟಿಂಗ್ ಆರಂಭವಾಗಿತ್ತು. ಆದರೆ ಸಿನೆಮಾದ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಹೊರಬಂದಿಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಶೂಟಿಂಗ್ ಸೆಟ್ ನಿಂದ ಕೆಲವೊಂದು ಪೊಟೋಗಳು ಲೀಕ್ ಆಗಿತ್ತು. ಇದೀಗ ಮತ್ತೊಮ್ಮೆ ಪೊಟೋಗಳು ಲೀಕ್ ಆಗಿದೆ.

ಈ ಹಿಂದೆ ಲೀಕ್ ಆಗಿರುವ ಪೊಟೋಗಳು ವೈರಲ್ ಆಗಿತ್ತು. ರಾಮಾಯಣ ಸಿನೆಮಾ ಶೂಟಿಂಗ್ ನಿಮಿತ್ತ ದೊಡ್ಡ ಸೆಟ್ ಒಂದನ್ನು ನಿರ್ಮಾಣ ಮಾಡಲಾಗಿದೆ. ನಟಿ ಲಾರಾ ದತ್ತ ಹಾಗೂ ನಟ ಅರುಣ್ ಗೊವಿಲ್ ರವರು ಈ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಅವರ ಪೊಟೋಗಳು ಲೀಕ್ ಆಗಿತ್ತು. ಇದೀಗ ಸೀತಾ ಹಾಗೂ ರಾಮನ ಪಾತ್ರಗಳು ಲೀಕ್ ಆಗಿದೆ. ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ರಾಮನಾಗಿ ರಣಬೀರ್‍ ಸಹ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿ ಗೋಲ್ಡನ್ ಟೆಂಪಲ್ ಸಹ ಕಾಣಿಸಿದೆ. ಇನ್ನೂ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಸಹ ಹುಟ್ಟುವಂತೆ ಮಾಡಿದೆ. ಇನ್ನೂ ಸಾಯಿಪಲ್ಲವಿ ತಂಡೇಲ್ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ.