ಅಯೋಧ್ಯೆಯಲ್ಲಿ ಅಪ್ಪ-ಮಗನ ಸಂಭ್ರಮ, ಮೆಗಾಸ್ಟಾರ್ ಚಿರು, ಗ್ಲೋಬಲ್ ಸ್ಟಾರ್ ಚರಣ್ ಹಂಗಾಮ….!

Follow Us :

ಸದ್ಯ ದೇಶದ ಎಲ್ಲೆಡೆ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯದ್ದೆ ಸದ್ದು. ಕೋಟ್ಯಂತರ ಹಿಂದೂಗಳ ಕನಸು ಜ.22 ರಂದು ನನಸಾಗಲಿದೆ. ಈ ಮಹತ್ತರ ಕಾರ್ಯದಲ್ಲಿ ಭಾಗಿಯಾಗಲು ದೇಶದ ಗಣ್ಯರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಇದೀಗ ನಿನ್ನೆ ರಾತ್ರಿ ಮೆಗಾಸ್ಟಾರ್‍ ಚಿರಂಜೀವಿ ಹಾಗೂ ಅವರ ಪುತ್ರ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಹ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾರೆ.

ಭಾರತದ ಹಿಂದೂಗಳು ಮಾತ್ರವದಲ್ಲೇ ವಿಶ್ವದಾದ್ಯಂತ ಇರುವ ಅನೇಕ ಹಿಂದೂಗಳು ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿನ ರಾಮನ ಪ್ರಾಣ ಪ್ರತಿಷ್ಟೆಯ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ನೂರಾರು ವರ್ಷಗಳ ಕಾಲ ಹಿಂದೂಗಳು ಈ ಭಾಗದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದ್ದರು. ಇದೀಗ ಹಿಂದೂಗಳ ಕನಸು ನನಸಾಗಿದೆ. ಕೆಲವು ದಿನಗಳಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನೂತನ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದೆ. ಜ.22 ರಂದು ರಾಮನ ಪ್ರಾಣ ಪ್ರತಿಷ್ಟೆ ಕಾರ್ಯ ನಡೆಯಲಿದೆ. ಈ ದಿನಾಂಕ ನಿಗಧಿಯಾದಾಗಿನಿಂದ ದೇಶದ ರಾಜಕಾರಣಿಗಳು, ಸಿನೆಮಾ ಗಣ್ಯರು ಸೇರಿದಂತೆ ಅನೇಕರಿಗೆ ಆಹ್ವಾನ ಪತ್ರಗಳನ್ನು ಸಹ ನೀಡುವ ಕಾರ್ಯ ಸಮರ್ಪಕವಾಗಿ ನಡೆದಿದೆ.

ಇನ್ನೂ ಟಾಲಿವುಡ್ ಸ್ಟಾರ್‍ ಗಳಾದ ಮೆಗಾಸ್ಟಾರ್‍ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ್ ರವರು ಒಂದು ದಿನ ಮುಂಚೆಯೇ ಅಯೋಧ್ಯೆಗೆ ಹೋಗಿದ್ದಾರೆ. ಈ ವೇಳೆ ಅಲ್ಲಿಯೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ನೋಡಲು ಬಂದಿದ್ದರು. ದೊಡ್ಡ ಮಟ್ಟದಲ್ಲೇ ಮೆಗಾ ಅಭಿಮಾನಿಗಳು ಬಂದಿದ್ದು, ಅವರನ್ನು ನೋಡಿ ಪುಳಕಿತರಾದ ಸ್ಟಾರ್‍ ಗಳು ಅವರಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ. ಅವರೊಂದಿಗೆ ಕೆಲ ಸಮಯ ಕಳೆದಿದ್ದು, ಅವರೊಂದಿಗೆ ಕೆಲ ಸಮಯ ಮಾತನಾಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಇನ್ನೂ ಅನೇಕ ಸ್ಟಾರ್‍ ಗಳು ಸಹ ಈ ಮಹತ್ತರ ಕಾರ್ಯದಲ್ಲಿ ಭಾಗಿಯಾಗಲು ತೆರಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಮೆಗಾಸ್ಟಾರ್‍ ಚಿರಂಜೀವಿಯವರು ವಶಿಷ್ಟ ನಿರ್ದೇಶನದಲ್ಲಿ ವಿಶ್ವಂಭರ ಎಂಬ ಫ್ಯಾಂಟಸಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಟೀಸರ್‍ ಸಹ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದು, ಭಾರಿ ನಿರೀಕ್ಷೆ ಸಹ ಮೂಡಿಸಿದೆ. ಇತ್ತ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರೂ ಸಹ RRR ಸಿನೆಮಾದ ಬಳಿಕ ಗೇಮ್ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಸೌತ್ ಸ್ಟಾರ್‍ ಡೈರೆಕ್ಟರ್‍ ಶಂಕರ್‍ ನಿರ್ದೇಶನ ಮಾಡುತ್ತಿದ್ದಾರೆ.