ಗುನಾದಲ್ಲಿ ನಡೆದ ಲವ್ ಜಿಹಾದ್ ಕೇಸ್, ಯುವತಿಯ ಮೇಲೆ ಅತ್ಯಾಚಾರ ವೆಸಗಿದ ಆಯಾನ್ ಪಠಾನ್ ಮನೆ ಧ್ವಂಸ….!

Follow Us :

ಕೆಲವು ದಿನಗಳ ಹಿಂದೆಯಷ್ಟೆ ಮದ್ಯಪ್ರದೇಶದ ಗುನಾ ಎಂಬ ಪ್ರದೇಶದಲ್ಲಿ ಹಿಂದೂ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿ ಆಕೆಯ ಮೇಲೆ ವಿಕೃತಿ ಮೆರೆದಿದ್ದ. ಕಣ್ಣಿಗೆ ಖಾರದ ಪುಡಿ ಹಾಕಿ, ಆಕೆ ಕಿರುಚಾಡದಂತೆ ಫೆವಿಕ್ವಿಕ್ ಗಮ್ ಅಂಟಿಸಿ ಅತ್ಯಾಚಾರವೆಸಗಿದ್ದ. ಇದೀಗ ಮಧ್ಯಪ್ರದೇಶ ಸರ್ಕಾರ ಆಯಾನ್ ಪಠಾನ್ ಮನೆ ಮೇ ಬುಲ್ಡೋಜರ್‍ ಶಿಕ್ಷೆ ಜಾರಿಗೊಳಿಸಿ, ಆತನ ಮನೆಯನ್ನು ಧ್ವಂಸಗೊಳಿಸಿದೆ.

ಇತ್ತೀಚಿಗೆ ಲವ್ ಜಿಹಾದ್ ಪ್ರಕರಣಗಳು, ಆರೋಪಗಳು ಪದೇ ಪದೇ ಕೇಳಿಬರುತ್ತಿದೆ. ಕಳೆದರೆಡು ದಿನಗಳ ಹಿಂದೆ ಕರ್ನಾಟಕ ಹುಬ್ಬಳಿಯಲ್ಲಿ ನಡೆಎದ ನೇಹಾ ಹೀರೆಮಠ ಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿದೆ. ಅದೇ ರೀತಿ ಕೆಲವು ದಿನಗಳ ಹಿಂದೆಯಷ್ಟೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಹಿಂದೂ ಯುವತಿಯನ್ನು ಪ್ರೀತಿ ಹೆಸರಲ್ಲಿ ನಂಬಿಸಿ ಆಕೆಯ ಮೇಳೆ ಹಲ್ಲೆ ನಡೆಸಿ, ಕ್ರೂರವಾಗಿ ಅತ್ಯಾಚಾರವೆಸಗಿದ್ದ. ಈ ಸಂಬಂಧ ಆರೋಪಿ ಆಯಾನ್ ಪಠಾನ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದರು. ಆತನನ್ನು ಬಂಧನ ಮಾಡಿದ ಬಳಿಕ ಆತನ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಬಳಿಕ ಆರೋಪಿಯ ಇತಿಹಾಸ ಎಲ್ಲಾ ಸಂಗ್ರಹಿಸಿತ್ತು. ಈ ವೇಳೆ ಆತನ ಮನೆ ಸೇರಿದಂತೆ ಎಲ್ಲಾ ಮಾಹಿತಿ ಕಲೆ ಹಾಕಿತ್ತು ಜಿಲ್ಲಾಡಳಿತ. ಈ ಸಮಯದಲ್ಲಿ ಆಯಾನ್ ಪಠಾನ್ ಮನೆ ಇರೋದು ಅಕ್ರಮವಾಗಿ ಎಂದು ಪತ್ತೆಯಾಗಿತ್ತು. ಜೊತೆಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಜಾಗ ಕಬಳಿಸಿದ್ದಾನೆ ಎಂಬ ಸತ್ಯಾಂಶ ಹೊರಬಂದಿದೆ.

ಬಳಿಕ ಗುನಾ ಜಿಲ್ಲಾಡಳಿತ ಪೊಲೀಸ್ ಜೊತೆಗೆ ಆಯಾನ್ ಪಠಾನ್ ಮನೆಗೆ ಬುಲ್ಡೋಜರ್‍ ಸಮೇತ ಬಂದು ಮನೆಯನ್ನು ಧ್ವಂಸ ಮಾಡಿದೆ. ಆ ಮೂಲಕ ಮಧ್ಯಪ್ರದೇಶದ ಸರ್ಕಾರ ಲವ್ ಜಿಹಾದ್ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುವ ಕಾಮುಕರಿಗೆ ಇದೇ ಗತಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಇನ್ನೂ ಈ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿ ಸಹ ಇದೇ ರೀತಿಯ ಶಿಕ್ಷೆ ಅತ್ಯಾಚಾರಿ ಆರೋಪಿಗಳಿಗೆ ನೀಡಬೇಕೆಂಬ ಒತ್ತಡ ಸಹ ಕೇಳಿಬಂದಿದೆ.