Uncategorized

ಮೊದಲ ಬಾರಿಗೆ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡ ಪೂಜಾ ಹೆಗ್ಡೆ, ವೈರಲ್ ಆದ ಪೊಟೋಸ್…..!

ಸೌತ್ ಸಿನಿರಂಗದಲ್ಲಿ ಬುಟ್ಟಬೊಮ್ಮ ಎಂದೇ ಕ್ರೇಜ್ ಪಡೆದುಕೊಂಡಿರುವ ಪೂಜಾ ಹೆಗ್ಡೆ ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಗ್ಲಾಮರ್‍ ಜೊತೆಗೆ ಅದೃಷ್ಟ ಸಹ ಆಕೆಗಿರುವ ಕಾರಣದಿಂದ ಆಕೆಯ ಖಾತೆಯಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳು ಸೇರಿಕೊಂಡವು. ಆದರೆ ಇತ್ತೀಚಿಗೆ ಆಕೆ ಭಾರಿ ಸೋಲುಗಳನ್ನು ಸಹ ಕಂಡರು. ಇದೀಗ ಆಕೆ ಮೊದಲ ಬಾರಿಗೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡಿದ್ದು, ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಪೂಜಾ ಹೆಗ್ಡೆ ಬುಟ್ಟಬೊಮ್ಮ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಕೆರಿಯರ್‍ ಆರಂಭದಲ್ಲಿ ಭಾರಿ ಸೋಲುಗಳನ್ನು ಕಂಡಂತಹ ಪೂಜಾ ಹೆಗ್ಡೆ ಡಿ.ಜೆ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡರು. ಆ ಸಿನೆಮಾದ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸೂಪರ್‍ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಆದರೆ 2022ರ ವರ್ಷ ಮಾತ್ರ ಆಕೆಗೆ ಬಾಡ್ ಲಕ್ ಎಂದೇ ಹೇಳಬಹುದು. ಆ ವರ್ಷ ತೆರೆಕಂಡ ಆಕೆಯ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಜೊತೆಗೆ ಕೆಲವೊಂದು ಕಾರಣಗಳಿಂದ ಆಕೆ ಈ ಹಿಂದೆ ಒಪ್ಪಿಕೊಂಡ ಸಿನೆಮಾಗಳಿಂದ ಸಹ ಹೊರಬಂದರು ಎನ್ನಲಾಗಿದೆ. ಆದರೆ ಅಭಿಮಾನಿಗಳಿಗಾಗಿ ಸೋಷಿಯಲ್ ಮಿಡಿಯಾದಲ್ಲಿ ಪೊಟೋಶೂಟ್ಸ್, ವಿಡಿಯೋ ಹಂಚಿಕೊಂಡು ಹತ್ತಿರದಲ್ಲೇ ಇದ್ದರು.

ಇದೀಗ ಪೂಜಾ ಹೆಗ್ಡೆ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವೊಂದು ಪ್ರಾಜೆಕ್ಟ್ ಗಳಿಗೆ ಆಕೆ ಸಹಿ ಮಾಡಿದ್ದು, ಶೀಘ್ರದಲ್ಲೇ ಆಕೆ ಮತ್ತೆ ಬೆಳ್ಳಿ ಪರದೆಯ ಮೇಲೆ ರಂಜಿಸಲಿದ್ದಾರೆ. ಇದೀಗ ಪೂಜಾ ಹೆಗ್ಡೆ ಯುವಕನೊಂದಿಗೆ ಕಾಣಿಸಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಒಂದು ಕಾರಿನಲ್ಲಿ ಪೂಜಾ ಹೆಗ್ಡೆ ಹೋಗುತ್ತಿದ್ದಾಗ ಓರ್ವ ವ್ಯಕ್ತಿ ಈ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪೂಜಾ ಹೆಗ್ಡೆ ಪಕ್ಕದಲ್ಲಿ ಹ್ಯಾಡಸಂ ಹುಡುಗನೊಬ್ಬ ಕುಳಿತಿದ್ದಾನೆ. ಈ ವಿಡಿಯೋ ಕೂಡಲೇ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆತ ಪೂಜಾ ಹೆಗ್ಡೆ ಬಾಯ್ ಫ್ರೆಂಡ್ ಇರಬಹುದಾ ಎಂಬ ಚರ್ಚೆ ಶುರುವಾಗಿದೆ. ಕೆಲವರಂತೂ ಪೂಜಾ ಹೆಗ್ಡೆ ಸೀಕ್ರೇಟ್ ಆಗಿ ಅಫೈರ್‍ ನಡೆಸುತ್ತಿದ್ದಾರೆ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಈ ಕುರಿತು ಪೂಜಾ ಹೆಗ್ಡೆ ರಿಪ್ಲೆ ಕೊಡುವವರೆಗೂ ಈ ರೂಮರ್‍ ತಣ್ಣಗಾಗುವುದಿಲ್ಲ ಎಂದೇ ಹೇಳಬಹುದಾಗಿದೆ.

Most Popular

To Top